ರಾವಲ್ಪಿಂಡಿ: ಪಾಕ್ (Pakistan) ತಂಡದ ಓವರ್ ಕಾನ್ಫಿಡೆನ್ಸ್‌ನಿಂದಾಗಿ ತವರಿನಲ್ಲೇ ನಡೆದ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ (Bangladesh) ವಿರುದ್ಧ 10 ವಿಕೆಟ್‌ಗಳ ಹೀನಾಯ ಸೋಲು ಕಂಡಿದೆ. ಅಲ್ಲದೇ ಪಾಕ್ ನೆಲದಲ್ಲಿ ಇದೇ ಮೊದಲ ಬಾರಿಗೆ ಬಾಂಗ್ಲಾದೇಶ ಐತಿಹಾಸಿಕ ಗೆಲುವು ಸಾಧಿಸಿದೆ. ಈ ಮೂಲಕ 2 ಪಂದ್ಯಗಳ ಟೆಸ್ಟ್ ಸರಣಿಯನ್ನು (Test Series) 1-0 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
Advertisement
ರಾವಲ್ಪಿಂಡಿಯಲ್ಲಿ (Rawalpindi) ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕ್ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 6 ವಿಕೆಟ್ ನಷ್ಟಕ್ಕೆ 448 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಇದರಿಂದ ಪಾಕ್ ತಂಡದ ಆಟಗಾರರು ನಾಯಕನ ವಿರುದ್ಧ ಅಸಮಾಧಾನ ಹೊರಹಾಕಿದ್ದರು. 171 ರನ್ ಗಳಿಸಿ ದ್ವಿಶತಕ ಸಿಡಿಸುವ ಉತ್ಸಾಹದಲ್ಲಿದ್ದ ಮೊಹಮ್ಮದ್ ರಿಜ್ವಾನ್ (Mohammad Rizwan) ಬ್ಯಾಟ್ ಬಿಸಾಡಿ ಆಕ್ರೋಶ ಹೊರಹಾಕಿದ್ದರು. ಪಾಕ್ ತಂಡ ಮಾಡಿದ ಯಡವಟ್ಟಿನಿಂದಲೇ ಇದೀಗ ಹೀನಾಯ ಸೋಲು ಕಂಡಿದೆ.
Advertisement
Advertisement
ಪಾಕ್ ಮೊದಲ ಇನ್ನಿಂಗ್ಸ್‌ನಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ 448 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಪಾಕ್ ಪರ ಸೌದ್ ಶಕೀಲ್ 261 ಎಸೆತಗಳಲ್ಲಿ 141 ರನ್ ಗಳಿದಿದ್ರೆ, ಮೊಹಮ್ಮದ್ ರಿಜ್ವಾನ್ 239 ಎಸೆತಗಳಲ್ಲಿ 171 ರನ್ (11 ಬೌಂಡರಿ, 3 ಸಿಕ್ಸರ್), ಸೈಮ್ ಅಯೂಬ್ 56 ರನ್ ಗಳಿಸಿದ್ದರು. ಇದರಿಂದ ತಂಡದ ಮೊತ್ತ ಪಾಕ್ 113 ಓವರ್‌ಗಳಲ್ಲಿ 448 ರನ್ ಗಳಿಸಿತ್ತು. ಆದ್ರೆ ತನ್ನ ಸರದಿ ಆರಂಭಿಸಿದ್ದ ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್‌ನಲ್ಲಿ 167.3 ಓವರ್‌ಗಳಲ್ಲಿ 565 ರನ್ ಪೇರಿಸಿತ್ತು. ಬ್ಯಾಟಿಂಗ್ನಲ್ಲಿ ಮೊದಲ ಇನಿಂಗ್ಸ್ನಲ್ಲಿ ಪಾಕ್ ಬೌಲರ್‌ಗಳ ಮೇಲೆ ಸವಾರಿ ಮಾಡಿದ್ದ ಅನುಭವಿ ಆಟಗಾರ ಮುಶ್ಫಿಕರ್ ರಹೀಂ 191 ರನ್ ಬಾರಿಸಿದ್ದರು. ಅವರ ಈ ಭರ್ಜರಿ ಆಟ ಬಾಂಗ್ಲಾ ತಂಡಕ್ಕೆ ಮೇಲುಗೈ ಸಾಧಿಸುವಂತೆ ಮಾಡಿತು. ಉಳಿದಂತೆ ಮೆಹಿದಿ ಹಸನ್ 77, ಶಾದ್ಮನ್ ಇಸ್ಲಾಂ 93 ರನ್‌ಗಳ ಕೊಡುಗೆ ನೀಡಿದ್ದರು.
Advertisement
ಇನ್ನೂ 4ನೇ ದಿನ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಪಾಕಿಸ್ತಾನ 146 ರನ್‌ಗಳಿಗೆ ಸರ್ವಪತನ ಕಂಡಿತು. ಪಾಕ್ ಪರ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಮೊಹಮ್ಮದ್ ರಿಜ್ವಾನ್ 51 ರನ್, ಅದ್ಭುಲ್ ಶಫಿಕ್ 37 ರನ್, ಬಾಬರ್ ಆಜಂ (Babar Azam) 22 ರನ್ ಗಳಿಸಿದ್ದು ಬಿಟ್ಟರೆ ಉಳಿದ ಆಟಗಾರರು ಅಲ್ಪಮೊತ್ತಕ್ಕೆ ನೆಲ ಕಚ್ಚಿದ್ದರು. ಇದರಿಂದ ಗೆಲುವಿಗೆ ಕೇವಲ 30 ರನ್ ಗುರಿ ಪಡೆದ ಬಾಂಗ್ಲಾದೇಶ ವಿಕೆಟ್ ನಷ್ಟವಿಲ್ಲದೇ ಗೆಲುವು ಸಾಧಿಸಿತು. ಅತಿಯಾದ ಆತ್ಮವಿಶ್ವಾಸವೇ ಪಾಕ್ ತಂಡದ ಸೋಲಿಗೆ ಕಾರಣವಾಯಿತು.
ಬಾಂಗ್ಲಾ ಪರ ದ್ವಿತೀಯ ಇನಿಂಗ್ಸ್ನಲ್ಲಿ ಮಾರಕ ಬೌಲಿಂಗ್ ದಾಳಿ ನಡೆಸಿದ ಮೆಹಿದಿ ಹಸನ್ ಮಿರಾಜ್ 21 ರನ್ಗೆ 4 ವಿಕೆಟ್ ಕಿತ್ತರೆ, ಆಲ್‌ರೌಂಡರ್ ಶಕಿಬ್ ಅಲ್ ಹಸನ್ 3 ವಿಕೆಟ್,ಶೊರಿಫುಲ್, ಹಸನ್ ಮೊಹಮ್ಮದ್ ಹಾಗೂ ನಹಿದ್ ರಾಣಾ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು.
ದ್ವಿತೀಯ ಇನ್ನಿಂಗ್ಸ್‌ನಲ್ಲಿ ಬಾಂಗ್ಲಾ ಪರ ಜಾಕಿರ್ ಹಸನ್ 15 ರನ್, ಶಾದ್‌ಮನ್ ಇಸ್ಲಾಮ್ 9 ರನ್ ಗಳಿಸಿದ್ರೆ, ವೈಡ್ ಮತ್ತು ಲೆಗ್‌ಬೈಸ್‌ನಿಂದ ಹೆಚ್ಚುವರಿ 6 ರನ್ ತಂಡಕ್ಕೆ ಸೇರ್ಪಡೆಯಾಯಿತು.
ಐತಿಹಾಸಿಕ ಗೆಲುವು:
ಬಾಂಗ್ಲಾದೇಶ, ಪಾಕಿಸ್ತಾನ ನೆಲದಲ್ಲಿ ಸಾಧಿಸಿದ ಮೊದಲ ಗೆಲುವು ಇದಾಗಿದೆ. ಇದುವರೆಗೆ 13 ಟೆಸ್ಟ್ ಪಂದ್ಯಗಳನ್ನು ಆಡಿತ್ತಾದರೂ ಒಂದೇ ಒಂದು ಗೆಲುವು ಸಾಧಿಸಲು ಸಾಧ್ಯವಾಗಿರಲಿಲ್ಲ. ಇದೀಗ 14ನೇ ಪ್ರಯತ್ನದಲ್ಲಿ ಮೊದಲ ಟೆಸ್ಟ್ ಪಂದ್ಯವನ್ನು ಗೆದ್ದು ಸಾಧನೆ ಮಾಡಿದೆ.
ಸಂಕ್ಷಿಪ್ತ ಸ್ಕೋರ್
ಮೊದಲ ಇನ್ನಿಂಗ್ಸ್
ಪಾಕಿಸ್ತಾನ – 448/6d, ಬಾಂಗ್ಲಾದೇಶ – 565/10
2ನೇ ಇನ್ನಿಂಗ್ಸ್
ಪಾಕಿಸ್ತಾನ – 146/10, ಬಾಂಗ್ಲಾದೇಶ – 30/0