ಢಾಕಾ: ಇಸ್ಕಾನ್ (ISKCON) ಧಾರ್ಮಿಕ ಮೂಲಭೂತವಾದಿ ಸಂಘಟನೆಯಾಗಿದ್ದು, ಇದು ದೇಶಕ್ಕೆ ಅಪಾಯಕಾರಿಯಾಗಿದೆ ಎಂದು ಆರೋಪಿಸಿ ಇಸ್ಕಾನ್ ಸಂಸ್ಥೆಯನ್ನು ನಿಷೇಧಿಸಲು ಮುಂದಾಗಿದ್ದ ಬಾಂಗ್ಲಾದೇಶ (Bangladesh) ಸರ್ಕಾರಕ್ಕೆ ಹೈಕೋರ್ಟ್‌ನಲ್ಲಿ (High Court) ಮುಖಭಂಗವಾಗಿದೆ.
ಬಾಂಗ್ಲಾದೇಶದಲ್ಲಿ ಇಸ್ಕಾನ್ ಚಟುವಟಿಕೆ ನಿಷೇಧಿಸಲು ಢಾಕಾ ಹೈಕೋರ್ಟ್ ನಿರಾಕರಿಸಿದೆ. ಅಲ್ಲದೇ ಹಿಂದೂಗಳ (Hindu) ಮೇಲೆ ದಾಳಿಯಾಗದಂತೆ ಶಾಂತಿ ಸುವ್ಯವಸ್ಥೆ ಕಾಪಾಡಿಕೊಳ್ಳುವಂತೆ ಕೋರ್ಟ್ ಸೂಚನೆ ನೀಡಿದೆ.
Advertisement
Advertisement
ಇಸ್ಕಾನ್‌ನ ಇತ್ತೀಚಿನ ಚಟುವಟಿಕೆಗಳ ಸಂಬಂಧ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ತಿಳಿಸುವಂತೆ ಅಟಾರ್ನಿ ಜನರಲ್‌ಗೆ ಸೂಚಿಸಿತು. ಇದನ್ನೂ ಓದಿ: ಸಂತ ಚಿನ್ಮಯ್ ಕೃಷ್ಣದಾಸ್‌ರಿಂದ ಅಂತರ ಕಾಯ್ದುಕೊಂಡ ಇಸ್ಕಾನ್
Advertisement
ಈ ಪ್ರಶ್ನೆಗೆ ಉತ್ತರಿಸಿದ ಎಜಿ, ಚಿನ್ಮಯ್ ಕೃಷ್ಣದಾಸ್ (Chinmay Krishna Das) ಬಂಧನದ ಬಳಿಕ ತೀವ್ರ ಘರ್ಷಣೆಯಾಗಿದೆ. ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್ ಸೈಫುಲ್ಲಾ ಇಸ್ಲಾಂ ಮೃತಪಟ್ಟಿದ್ದಾರೆ. ಇಸ್ಕಾನ್ ಮೇಲೆ 3 ಕೇಸ್‌ಗಳಿವೆ. 33 ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಮುಖ ಜಿಲ್ಲೆಗಳಲ್ಲಿ ನಿಷೇಧಾಜ್ಞೆ ವಿಧಿಸಲಾಗಿದೆ ಎಂದು ತಿಳಿಸಿದರು.
Advertisement
ಇದಕ್ಕೆ ಪ್ರತಿಕ್ರಿಯಿಸಿದ ಕೋರ್ಟ್, ಬಾಂಗ್ಲಾದೇಶ ನೆಲದ ಕಾನೂನು ಸುವ್ಯವಸ್ಥೆ ಇಲ್ಲಿನ ನಾಗರಿಕರು, ಆಸ್ತಿಯ ರಕ್ಷಣೆಗೆ ಸರ್ಕಾರ ಎಲ್ಲಾ ರೀತಿಯ ಕ್ರಮಗೊಳ್ಳುವ ಭರವಸೆ ಕೊಟ್ಟಿದೆ. ಇಸ್ಕಾನ್ ನಿಷೇಧ ಮಾಡುವುದಿಲ್ಲ ಎಂದು ಹೇಳಿತು.