ಢಾಕಾ: ಬಾಂಗ್ಲಾದೇಶದ ಕ್ರಿಕೆಟ್ ಅಭಿಮಾನಿಗಳು ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಟೀಂ ಇಂಡಿಯಾವನ್ನು ಕೆಣಕಿದ್ದಾರೆ.
ಗುರುವಾರ ಭಾರತ ಮತ್ತು ಬಾಂಗ್ಲಾದೇಶದ ನಡುವೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ಕ್ರಿಕೆಟ್ ಪಂದ್ಯ ನಡೆಯಲಿದೆ. ಈ ಪಂದ್ಯದ ಹಿನ್ನೆಲೆಯಲ್ಲಿ ಅಭಿಮಾನಿಯೊಬ್ಬ ಬಾಂಗ್ಲಾವನ್ನು ಹುಲಿಗೆ, ಭಾರತವನ್ನು ನಾಯಿಗೆ ಹೋಲಿಸಿ ಫೋಟೋವನ್ನು ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡಿದ್ದಾನೆ.
Advertisement
ಹುಲಿಗೆ ಬಾಂಗ್ಲಾದ ಧ್ವಜ ಹೊದಿಸಿದ್ದರೆ, ನಾಯಿಗೆ ಭಾರತದ ರಾಷ್ಟ್ರಧ್ವಜ ಹೊದಿಸಿ ಫೇಸ್‍ಬುಕ್‍ನಲ್ಲಿ ಫೋಟೋ ಅಪ್ಲೋಡ್ ಮಾಡಿದ್ದಾನೆ.
Advertisement
ಈ ಸುದ್ದಿ ಪ್ರಕಟವಾಗಿದ್ದೆ ತಡ ಭಾರತೀಯ ಅಭಿಮಾನಿಗಳು, ನಾವು ಯವಾಗಲೂ ಹುಲಿಗಳು, ನೀವು ಫೋಟೋ ಶಾಪ್ ಎಕ್ಸ್ ಪರ್ಟ್ ಗಳು ಎಂದು ಟೀಕಿಸಿ ಕಮೆಂಟ್ ಮಾಡುತ್ತಿದ್ದಾರೆ.
Advertisement
ಭಾರತ ತಂಡಕ್ಕೆ ಬಾಂಗ್ಲಾದೇಶದಲ್ಲಿ ಈ ರೀತಿಯಾಗಿ ಅವಮಾನ ಮಾಡುವುದು ಇದು ಹೊಸದೆನಲ್ಲ. 2015ರಲ್ಲಿ ಬಾಂಗ್ಲಾ ವಿರುದ್ಧ 1-2 ಅಂತರಿಂದ ಭಾರತ ಏಕದಿನ ಸರಣಿ ಸೋತಿತ್ತು. ಈ ಸಂದರ್ಭದಲ್ಲಿ ಬಾಂಗ್ಲಾ ಸುದ್ದಿಪತ್ರಿಕೆ ಪ್ರೊತೋಮ್ ಅಲೊ ಟೀಂ ಇಂಡಿಯಾ ಆಟಗಾರರ ಅರ್ಧಬೋಳಿಸಿದ ತಲೆಯ ಜಾಹೀರಾತನ್ನು ಪ್ರಕಟಿಸಿತ್ತು.
Advertisement
3 ಪಂದ್ಯಗಳಲ್ಲಿ 13 ವಿಕೆಟ್ ಕಬಳಿಸಿದ ಮುಸ್ತಫಿಜುರ್ ಜಾಹೀರಾತಿನಲ್ಲಿ ಕಟರ್ ಹಿಡಿದುಕೊಂಡಿದ್ದು, ಅವರ ಕೆಳಗೆ ರಹಾನೆ, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಆರ್. ಅಶ್ವಿನ್, ರವೀಂದ್ರ ಜಡೇಜಾ, ಧೋನಿ, ಶಿಖರ್ ಧವನ್ ಬ್ಯಾನರ್ ಹಿಡಿದು, ನಾವು ಅದನ್ನು ಬಳಸಿದ್ದೇವೆ, ನೀವೂ ಬಳಸಬಹುದು ಎಂಬ ಉಪಶೀರ್ಷಿಕೆ ಹೊಂದಿತ್ತು. ಮುಸ್ತಫಿಜುರ್ ಚಿತ್ರದ ಪಕ್ಕದಲ್ಲಿ, ಟೈಗರ್ ಸ್ಟೇಷನರಿ, ಮೇಡ್ ಇನ್ ಬಾಂಗ್ಲಾದೇಶ್, ಮುರ್ತಫಿಜ್ ಕಟ್ಟರ್ ಮಿರ್‍ಪುರದ ಸ್ಟೇಡಿಯಂ ಮಾರ್ಕೆಟ್‍ನಲ್ಲಿ ಲಭ್ಯವಿದೆ ಎನ್ನುವ ಶೀರ್ಷಿಕೆ ಜಾಹೀರಾತಿನಲ್ಲಿತ್ತು.
ಕಳೆದ ವರ್ಷ ಬೌಲರ್ ಟಸ್ಕಿನ್ ಧೋನಿ ತಲೆಯನ್ನು ಹಿಡಿದುಕೊಂಡಿದ್ದ ಫೋಟೋ ಒಂದನ್ನು ಅಭಿಮಾನಿಯೊಬ್ಬ ಪ್ರಕಟಿಸಿ ಟೀಂ ಇಂಡಿಯಾವನ್ನು ಕೆಣಕಿದ್ದ.