ಢಾಕಾ: ಢಾಕಾದಲ್ಲಿರುವ (Dhaka) ಭಾರತೀಯ ಹೈಕಮಿಷನ್‌ಗೆ (Indian High Commission) ಭದ್ರತಾ ಬೆದರಿಕೆಯ ಹಿನ್ನೆಲೆಯಲ್ಲಿ ಭಾರತದ ವಿದೇಶಾಂಗ ಸಚಿವಾಲಯವು ಬುಧವಾರ ಬಾಂಗ್ಲಾದೇಶ ಹೈಕಮಿಷನರ್‌ಗೆ ಸಮನ್ಸ್ ಜಾರಿ ಮಾಡಿದೆ.
ನ್ಯಾಷನಲ್ ಸಿಟಿಜನ್ ಪಾರ್ಟಿ (ಎನ್‌ಸಿಪಿ) ನಾಯಕ ಹಸ್ನತ್ ಅಬ್ದುಲ್ಲಾ ಭಾರತ ವಿರೋಧಿ ಹೇಳಿಕೆಗಳೊಂದಿಗೆ ಸಾರ್ವಜನಿಕ ಭಾಷಣ ಮಾಡಿದ ನಂತರ ಈ ಸಮನ್ಸ್ ಜಾರಿಯಾಗಿದೆ. ಇದನ್ನೂ ಓದಿ: ಇಸ್ಲಾಮಿಸ್ಟ್‌ಗಳು, ಇಸ್ಲಾಮಿಸಂ ಇಡೀ ವಿಶ್ವದ ಭದ್ರತೆಗೇ ಅಪಾಯ – ತುಳಸಿ ಗಬ್ಬಾರ್ಡ್ ಕಳವಳ
ಬಾಂಗ್ಲಾದೇಶ (Bangladesh) ಅಸ್ಥಿರತೆಯನ್ನು ಎದುರಿಸಿದರೆ ಸೆವೆನ್ ಸಿಸ್ಟರ್ಸ್ ರಾಜ್ಯಗಳನ್ನು ಪ್ರತ್ಯೇಕಿಸುವುದಾಗಿ ಮತ್ತು ಈಶಾನ್ಯ ಪ್ರತ್ಯೇಕತಾವಾದಿಗಳಿಗೆ ಬೆಂಬಲ ನೀಡುವುದಾಗಿ ಅಬ್ದುಲ್ಲಾ ಬೆದರಿಕೆ ಹಾಕಿದ್ದಾರೆ. ಅವರು ತಮ್ಮ ಬಲವಾದ ಭಾರತ ವಿರೋಧಿ ನಿಲುವಿಗೆ ಹೆಸರುವಾಸಿಯಾಗಿದ್ದಾರೆ.
ಚುನಾವಣೆ ಸಮೀಪಿಸುತ್ತಿರುವ ಬಾಂಗ್ಲಾದೇಶದಲ್ಲಿ ಭಾರತ ವಿರೋಧಿ ಘೋಷಣೆಗಳು ಹೆಚ್ಚುತ್ತಿರುವ ಮಧ್ಯೆ ಈ ಸಮನ್ಸ್ ನೀಡಲಾಗಿದೆ. ಕಳೆದ ವರ್ಷ ಶೇಖ್ ಹಸೀನಾ ನೇತೃತ್ವದ ಅವಾಮಿ ಲೀಗ್ ಆಡಳಿತ ಪತನದ ನಂತರ ಭಾರತದೊಂದಿಗಿನ ಬಾಂಗ್ಲಾದೇಶದ ಸಂಬಂಧಗಳು ಹದಗೆಟ್ಟಿವೆ. ಇದನ್ನೂ ಓದಿ: ಬೊಂಡಿ ಬೀಚ್ ಗುಂಡಿನ ದಾಳಿ ಕೇಸ್ – 27 ವರ್ಷಗಳ ಹಿಂದೆ ಭಾರತ ತೊರೆದಿದ್ದ ಶೂಟರ್ ಅಕ್ರಮ್
ಬಾಂಗ್ಲಾದೇಶವು ಢಾಕಾದಲ್ಲಿರುವ ಭಾರತೀಯ ಹೈಕಮಿಷನರ್ ಅವರನ್ನು ಕರೆಸಿ, ಪ್ರಕರಣದಲ್ಲಿ ಸಹಕಾರ ನೀಡುವಂತೆ ಒತ್ತಾಯಿಸಿತು. ಹಸೀನಾ ಅವರನ್ನು ತ್ವರಿತ ಹಸ್ತಾಂತರ ಮಾಡಬೇಕೆಂದು ಮತ್ತೆ ಕೇಳಿಕೊಂಡಿತು. ಕಳೆದ ವರ್ಷ 500 ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದ ಅಶಾಂತಿಯ ಸಂದರ್ಭದಲ್ಲಿ ಮಾನವೀಯತೆಯ ವಿರುದ್ಧದ ಅಪರಾಧಗಳಿಗಾಗಿ ಹಸೀನಾ ಅವರಿಗೆ ಮರಣದಂಡನೆ ವಿಧಿಸಲಾಯಿತು.

