ಢಾಕಾ: ಬಾಂಗ್ಲಾದೇಶದ 13ನೇ ಲೋಕಸಭಾ ಚುನಾವಣೆಯಲ್ಲಿ (Bangladesh Election Results) ಬಾಂಗ್ಲಾದೇಶ್ ನ್ಯಾಷನಲ್ ಪಾರ್ಟಿ (BNP) ಕ್ಲೀನ್ ಸ್ವಿಪ್ ಮಾಡಿದೆ. 299 ಕ್ಷೇತ್ರಗಳ ಪೈಕಿ ಬಿಎನ್‌ಪಿ 213 ಕ್ಷೇತ್ರಗಳಲ್ಲಿ ಜಯಭೇರಿ ಭಾರಿಸಿದೆ.ಇಸ್ಲಾಮಿಸ್ಟ್ ಜಮಾತ್-ಇ-ಇಸ್ಲಾಮಿ (Jamaat-e-Islami) ನೇತೃತ್ವದ 11 ಪಕ್ಷಗಳ ಮೈತ್ರಿಕೂಟ 77 ಸ್ಥಾನಗಳಲ್ಲಿ ಮಾತ್ರ ಜಯಗಳಿಸಿದೆ.
ಮಾಜಿ ಪ್ರಧಾನಿ ದಿವಂಗತ ಖಲೀದಾ ಜಿಯಾ ಪುತ್ರ ತಾರೀಕ್ ರೆಹಮಾನ್ (Tarique Rahman) ಬಾಂಗ್ಲಾದ ನೂತನ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಮೂಲಕ 2006 ರಲ್ಲಿ ಖಲೀದಾ ಜಿಯಾ ಅವರ ಅಧಿಕಾರಾವಧಿ ಕೊನೆಯಾದ 20 ವರ್ಷಗಳ ನಂತರ ಮತ್ತೆ ಅಧಿಕಾರಕ್ಕೆ ಬಂದಿದೆ.
ಶೇಖ್ ಹಸೀನಾ ಪದಚ್ಯುತಿ ಬಳಿಕ ಬಿಎನ್‌ಪಿ ಮೇಲಿದ್ದ ನಿರ್ಬಂಧಗಳು ತೆರವುಗೊಂಡ ಕಾರಣ 17 ವರ್ಷಗಳ ಬಳಿಕ ತಾರೀಖ್ ರೆಹಮಾನ್ ಬಾಂಗ್ಲಾದೇಶಕ್ಕೆ ಮೊದಲ ಭೇಟಿ ನೀಡಿ ಚುನಾವಣಾ ಅಖಾಡದಲ್ಲಿ ಬಿಎನ್‌ಪಿ ಪಕ್ಷವನ್ನ ಇಳಿಸಿದ್ದರು. ಇದನ್ನೂ ಓದಿ: ರಷ್ಯಾದ ಸುದರ್ಶನ ಚಕ್ರಕ್ಕೆ ಬಲ – 288 ಎಸ್-400 ಕ್ಷಿಪಣಿ ಖರೀದಿಗೆ ಮುಂದಾದ ಭಾರತ
ಸದ್ಯ ಪ್ರಚಂಡ ಬಹುಮತ ಪಡೆದಿರುವ ಬಿಎನ್‌ಪಿ ಗೆಲವನ್ನು ಭಾರತ ತುಂಬಾ ತೀಕ್ಷಗಣ್ಣಿನಿಂದ ನೀಡುತ್ತಿದೆ. ಬಾಂಗ್ಲಾ ಫಸ್ಟ್ ಎಂಬ ನೀತಿಯೊಂದಿಗೆ ಚುನಾವಣಾ ಅಖಾಡಕ್ಕೆ ಇಳಿದಿದ್ದ ತಾರೀಖ್ ದಿಲ್ಲಿಯೂ ಇಲ್ಲ, ಪಿಂಡಿಯೂ ಇಲ್ಲ. ಬಾಂಗ್ಲಾ ವಿಕಾಸ ಮೊದಲು ಅಂತ ಹೇಳುವ ಮೂಲಕ ಭಾರತ ಮತ್ತು ಪಾಕಿಸ್ತಾನದೊಂದಿಗಿನ ಸಂಬಂಧಕ್ಕಿಂತ ಬಾಂಗ್ಲಾದೇಶದ ವಿಕಾಸ ಮೊದಲು ಎಂದು ಹೇಳಿದ್ದರು.
আমি বাংলাদেশে অনুষ্ঠিত সংসদীয় নির্বাচনে বিএনপিকে নির্ণায়ক বিজয়ের অভিমুখে নেতৃত্ব দেওয়ার জন্য জনাব তারেক রহমানকে আন্তরিক অভিনন্দন জানাই।
এই ফলাফল আপনার নেতৃত্বের প্রতি বাংলাদেশের জনগণের আস্থার প্রতিফলন।
ভারত একটি গণতান্ত্রিক, প্রগতিশীল ও অন্তর্ভুক্তিমূলক বাংলাদেশের পক্ষে তার…
— Narendra Modi (@narendramodi) February 13, 2026
ಸದ್ಯ ರೆಹಮಾನ್ ಗೆಲುವಿಗೆ ಪ್ರಧಾನಿ ಮೋದಿ ಶುಭಾಶಯ ಕೋರಿದ್ದಾರೆ. ಇದಕ್ಕೂ ಮೊದಲು ತಾರೀಖ್ ತಾಯಿ ಖಲೀದಾ ಜಿಯಾ ಮೃತಪಟ್ಟಾಗ ಖುದ್ದು ವಿದೇಶಾಂಗ ಸಚಿವ ಜೈಶಂಕರ್ ಬಾಂಗ್ಲಾಗೆ ಹೋಗಿ ತಾರೀಖ್ ಭೇಟಿ ಮಾಡಿ ಬಂದಿದ್ದರು. ಇವು ಢಾಕಾ ಮತ್ತು ದೆಹಲಿ ಬಾಂಧವ್ಯ ಗಟ್ಟಿಯಾಗುವ ಸೂಚನೆ ನೀಡಿದ್ದವು. ಇದನ್ನೂ ಓದಿ: 4 ಕಾರುಗಳಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ; ಇಸ್ಲಾಂಗೆ ಮತಾಂತರಕ್ಕೆ ಬ್ಲ್ಯಾಕ್‌ಮೇಲ್

