ಢಾಕಾ: ಬಾಂಗ್ಲಾದೇಶದ ಚಂದಪುರ ಹಾಜಿಗಂಜ್ ಉಪಜಿಲಾದಲ್ಲಿ ದುರ್ಗಾ ಪೂಜೆ ಅಚರಣೆ ವೇಳೆ ಹಿಂದೂಗಳ ಮೇಲೆ ನಡೆದ ದಾಳಿ ಬಳಿಕ ಇದೀಗ ಇಸ್ಕಾನ್ ದೇವಾಲಯದ ಟ್ವಿಟ್ಟರ್ ಖಾತೆಯನ್ನು ಬ್ಲಾಕ್ ಮಾಡಲಾಗಿದೆ.
Advertisement
ಚಂದಪುರ ಹಾಜಿಗಂಜ್ ಉಪಜಿಲಾದಲ್ಲಿ ದುರ್ಗಾ ಪೂಜೆ ನಡೆಯುತ್ತಿದ್ದ ವೇಳೆ ಸಾಮಾಜಿಕ ಜಾಲತಾಣದಲ್ಲಿ ಪವಿತ್ರ ಕುರಾನ್ ಧರ್ಮ ಗ್ರಂಥವನ್ನು ಅಪವಿತ್ರಗೊಳಿಸಲಾಗಿದೆ ಎಂದು ಸುದ್ದಿಯಾದ ಬೆನ್ನಲ್ಲೇ ಹಿಂಸಾಚಾರ ಭುಗಿಲೆದ್ದಿದೆ. ಕೋಮುಗಲಭೆಯ ಪರಿಣಾಮ ಬಾಂಗ್ಲಾದೇಶದಲ್ಲಿನ ಹಲವಾರು ದೇವಾಲಯಗಳನ್ನು ಧ್ವಂಸಗೊಳಿಸಿ ಹಿಂದೂಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಇದನ್ನೂ ಓದಿ: ಇಂದು ನಟ ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ ಭವಿಷ್ಯ ನಿರ್ಧಾರ
Advertisement
https://twitter.com/manas_satyam/status/1450534569547943936
Advertisement
ಘಟನೆಯಲ್ಲಿ 5 ಜನ ಮೃತಪಟ್ಟು 60 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಘಟನೆ ಬಳಿಕ ಟ್ವಿಟ್ಟರ್ ಮೂಲಕ ಕೋಮುಗಲಭೆ ಸಂಬಂಧಿಸಿದ ವೀಡಿಯೋಗಳನ್ನು ಹರಿಬಿಡುತ್ತಿದ್ದ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿದೆ ಎಂದು ವರದಿಯಾಗಿದೆ.
Advertisement
ಹಿಂದೂಗಳು ಪೂಜೆ ಮಾಡುತ್ತಿದ್ದ ಚಂದ್‍ಪುರ್, ಚಿತ್ತಗಾಂಗ್, ಗಾಜಿಪುರ, ಬಂದರ್‍ಬನ್, ಮೌಲ್ವಿ ಬಜಾರ್ ಸೇರಿದಂತೆ ಕೆಲ ಪ್ರದೇಶಗಳಲ್ಲಿ ದೇವಾಲಯಗಳನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ್ದಾರೆ. ಘಟನೆಯಲ್ಲಿ ಪೊಲೀಸರು, ಪತ್ರಕರ್ತರು ಸೇರಿದಂತೆ 60 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಅಮರೀಂದರ್ ಹೊಸ ಪಕ್ಷ ಸ್ಥಾಪನೆ – ರೈತರ ಸಮಸ್ಯೆ ಪರಿಹಾರವಾದರೆ ಬಿಜೆಪಿ ಜೊತೆ ಮೈತ್ರಿ
Twitter suspended Two verified handles for highlighting atrocities on Hindus in Bangladesh. pic.twitter.com/45WOXAZKsi
— Rishi Bagree (@rishibagree) October 19, 2021
ಬಾಂಗ್ಲಾದೇಶದ ಗೃಹಮಂತ್ರಿ ಹೇಳಿಕೆಯ ಪ್ರಕಾರ, ಇದು ಹಿಂದೂಗಳ ಮೇಲೆ ನಡೆದಿರುವ ವ್ಯವಸ್ಥಿತ ದಾಳಿ. ಈ ಮೂಲಕ ದೇಶದಿಂದ ಹಿಂದೂಗಳನ್ನು ಹೊರ ಹಾಕುವ ಯತ್ನವಾಗಿದೆ. ಈಗಾಗಲೇ ದಾಳಿಗೆ ಸಂಬಂಧಿಸಿದಂತೆ 450ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದ್ದು, 71ಕ್ಕೂ ಅಧಿಕ ಕೇಸ್‍ಗಳನ್ನು ದಾಖಲಿಸಲಾಗಿದೆ ಎಂದಿದ್ದಾರೆ.
ಈ ನಡುವೆ ಹಿಂದೂಗಳ ಮೇಲೆ ದಾಳಿ ನಡೆದಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಿಬಿಡಲಾಗುತ್ತಿದೆ ಎಂದು ವರದಿಯಾಗಿದೆ.