ಢಾಕಾ: ಟೀಂ ಇಂಡಿಯಾ ವಿರುದ್ಧದ ಕ್ರಿಕೆಟ್ ಸರಣಿಗೂ ಮುನ್ನ ಬಾಂಗ್ಲಾ ಕ್ರಿಕೆಟ್ ಆಟಗಾರರು ನಡೆಸಿದ್ದ ಪ್ರತಿಭಟನೆಗೆ ಬಾಂಗ್ಲಾ ಕ್ರಿಕೆಟ್ ಬೋರ್ಡ್ (ಬಿಸಿಬಿ) ಮಣಿದಿದ್ದು, ಆಟಗಾರರ 11 ಬೇಡಿಕೆಗಳಿಗೆ ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಕೈಬಿಟ್ಟಿದ್ದಾರೆ.
ಆಟಗಾರ ಬೇಡಿಕೆಗಳಿಗೆ ಸಂಸ್ಥೆ ಒಪ್ಪಿಗೆ ಸೂಚಿಸಿದೆ ಎಂದು ಬಿಸಿಬಿ ವಕ್ತಾರರು ಸ್ಪಷ್ಟಡಿಸಿದ್ದಾರೆ. ಅಲ್ಲದೇ ಆಟಗಾರರ ಬಯಸಿದ್ದನ್ನು ನೀಡಲು ತಮಗೆ ಯಾವುದೇ ಸಮಸ್ಯೆ ಇಲ್ಲ ಎಂದು ಬಿಸಿಬಿ ಅಧ್ಯಕ್ಷ ನಜ್ಮುಲ್ ಹಸನ್ ತಿಳಿಸಿದ್ದಾರೆ.
Advertisement
I couldn’t believe my eyes that cricketers in Bangladesh could be united in such a strong stance. pic.twitter.com/cLqCIHeeA2
— Mohammad Isam (@Isam84) October 21, 2019
Advertisement
ಆಟಗಾರರು ಅಂತಿಮ ಕ್ಷಣದಲ್ಲಿ ಮುಂದಿಟ್ಟ ಹೆಚ್ಚುವರಿ 2 ಬೇಡಿಕೆಗಳಿಗೆ ಬಿಸಿಬಿ ಅನುಮತಿ ನೀಡಿಲ್ಲ ಎಂಬ ಮಾಹಿತಿ ಲಭಿಸಿದ್ದು, ಈ ಕುರಿತು ಮಾತನಾಡಿರುವ ಬಾಂಗ್ಲಾ ಕ್ರಿಕೆಟ್ ಆಟಗಾರ ಶಕೀಬ್ ಅಲ್ ಹಸನ್, ಬೋರ್ಡ್ ನಿರ್ಧಾರದಿಂದ ಆಟಗಾರರಿಗೆ ಸಂತಸವಾಗಿದ್ದು, ಬಹುಬೇಗ ಸಮಸ್ಯೆಗಳನ್ನು ಬಗೆ ಹರಿಸುವುದಾಗಿ ಸಂಸ್ಥೆ ತಿಳಿಸಿದೆ. ಆಟಗಾರರು ಶೀಘ್ರವೇ ತರಬೇತಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
Advertisement
ದೇಶೀಯ ಕ್ರಿಕೆಟ್ ಆಟಗಾರರ ವೇತನ ಹೆಚ್ಚಳ, ಬೋರ್ಡ್ ಲಾಭಾಂಶದಲ್ಲಿ ಆಟಗಾರರಿಗೂ ಹಂಚಿಕೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಟಗಾರರು ಪ್ರತಿಭಟನೆ ನಡೆಸಿದ್ದರು. ಈ ಪ್ರತಿಭಟನೆ ಮುಂದಿನ ಬಾಂಗ್ಲಾ ಹಾಗೂ ಟೀಂ ಇಂಡಿಯಾ ನಡುವಿನ ಟೂರ್ನಿಗೆ ಸಮಸ್ಯೆ ಎದುರಾಗಲಿದೆ ಎಂಬ ಅನುಮಾನ ಮೂಡಿತ್ತು. ಭಾರತ 2 ಟೆಸ್ಟ್ ಹಾಗೂ 3 ಟಿ20 ಪಂದ್ಯಗಳನ್ನು ಬಾಂಗ್ಲಾ ವಿರುದ್ಧ ಆಡಲಿದ್ದು, ನಂ.3ರಿಂದ ಸರಣಿ ಆರಂಭವಾಗಲಿದೆ.