ಢಾಕಾ: ಬಾಂಗ್ಲಾದೇಶದ (Bangladesh) ಪದಚ್ಯುತ ಪ್ರಧಾನಿ ಶೇಖ್ ಹಸೀನಾ (Sheikh Hasina) ವಿರುದ್ಧ ದಾಖಲಾದ ಮೂರು ಭ್ರಷ್ಟಾಚಾರ (Corruption) ಪ್ರಕರಣಗಳಲ್ಲಿ ಢಾಕಾ ಕೋರ್ಟ್ 21 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಸಂಚು, ವಂಚನೆಯ ಮೂರು ಪ್ರಕರಣಗಳನ್ನು ವಿಚಾರಣೆ ನಡೆಸಿದ ಕೋರ್ಟ್ ತಲಾ 7 ವರ್ಷಗಳಂತೆ 21 ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಶೇಖ್ ಹಸೀನಾ ಪುತ್ರ, ಪುತ್ರಿಗೂ 5 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಇದನ್ನೂ ಓದಿ: ಮಾಜಿ ಪ್ರಧಾನಿ ಇಮ್ರಾನ್ ಖಾನ್ ಜೈಲಿನಲ್ಲೇ ಕಗ್ಗೊಲೆಯಾದ್ರಾ? – ಪಾಕ್ ಅಧಿಕಾರಿಗಳು ಹೇಳಿದ್ದೇನು?
ಢಾಕಾದ ಪುರ್ಬಾಚಲ್ ಪ್ರದೇಶದಲ್ಲಿ ಸರ್ಕಾರಿ ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಿದ ಆರೋಪದ ಮೇಲೆ ಬಾಂಗ್ಲಾದೇಶದ ಭ್ರಷ್ಟಾಚಾರ ನಿಗ್ರಹ ಆಯೋಗ ಶೇಖ್ ಹಸೀನಾ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ 6 ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದೆ. ಉಳಿದ ಮೂರು ಪ್ರಕರಣಗಳ ತೀರ್ಪು ಡಿಸೆಂಬರ್ 1 ರಂದು ಪ್ರಕಟವಾಗಲಿದೆ
ಬಾಂಗ್ಲಾ ದಂಗೆಯ ಬಳಿಕ ಶೇಖ್ ಹಸೀನಾ ಮತ್ತು ಕುಟುಂಬ ತಲೆಮರೆಸಿಕೊಂಡ ಕಾರಣ ಅವರ ಪರ ನ್ಯಾಯಾಲಯದಲ್ಲಿ ವಾದಿಸಲು ಯಾವುದೇ ವಕೀಲರು ಇಲ್ಲವಾಗಿದೆ.

