ಢಾಕಾ: ಭಾರತದಲ್ಲಿ (India) ಆಶ್ರಯ ಪಡೆದಿರುವ ಬಾಂಗ್ಲಾದ (Bangladesh) ಮಾಜಿ ಪ್ರಧಾನಿ ಶೇಖ್ ಹಸೀನಾ (Sheikh Hasina) ವಿರುದ್ಧ ಅರೆಸ್ಟ್ ವಾರೆಂಟ್ ಜಾರಿಯಾಗಿದೆ.
ಬಾಂಗ್ಲಾದ ಇಂಟರ್‌ನ್ಯಾಷನಲ್ ಕ್ರೈಮ್ಸ್ ಟ್ರಿಬ್ಯೂನಲ್ ಈ ವಾರೆಂಟ್ ಜಾರಿ ಮಾಡಿದ್ದು, ನವೆಂಬರ್ 18ರೊಳಗೆ ಶೇಖ್ ಹಸೀನಾರನ್ನು ಬಂಧಿಸಿ ತಮ್ಮ ಮುಂದೆ ನಿಲ್ಲಿಸಬೇಕು ಎಂದು ಆದೇಶ ನೀಡಿದೆ. ಇದನ್ನೂ ಓದಿ: ಸಲ್ಮಾನ್ ಹತ್ಯೆಗೆ 25 ಲಕ್ಷ ಸುಪಾರಿ, ಪಾಕ್‌ನಿಂದ ಎಕೆ 47 ಖರೀದಿ – ಬಿಷ್ಣೋಯ್ ಗ್ಯಾಂಗ್ ಪ್ಲ್ಯಾನ್ ಹೇಗಿತ್ತು?
Advertisement
Advertisement
ಜುಲೈ 15ರಿಂದ ಆಗಸ್ಟ್ 5ರವರೆಗೂ ನಡೆದ ಮಾರಣಹೋಮ ಮತ್ತು ಇತರೆ ಅಪರಾಧಗಳ ಆರೋಪ ಸಂಬಂಧ ಶೇಖ್ ಹಸೀನಾ ವಿರುದ್ಧ ಐಸಿಟಿಗೆ 60 ದೂರು ಸಲ್ಲಿಕೆ ಆಗಿತ್ತು. ಈ ಅರ್ಜಿಗಳ ವಿಚಾರಣೆ ನಡೆಸಿರುವ ಕೋರ್ಟ್ ಇದೀಗ ಶೇಖ್ ಹಸೀನಾ ವಿರುದ್ಧ ಅರೆಸ್ಟ್ ವಾರೆಂಟ್ ಹೊರಡಿಸಿದೆ. ಇದನ್ನೂ ಓದಿ:ಹಮಾಸ್ ಮುಖ್ಯಸ್ಥ ಹತ್ಯೆ – ನಮ್ಮ ಮಿಲಿಟರಿಗೆ ಸಿಕ್ಕಿದ ಜಯ ಎಂದ ಇಸ್ರೇಲ್
Advertisement
ಶೇಖ್ ಹಸೀನಾ ಭಾರತದಲ್ಲಿ ಆಶ್ರಯ ಪಡೆದಿರುವುದನ್ನು ಅಲ್ಲಿನ ವಿದ್ಯಾರ್ಥಿ ಸಂಘಟನೆಗಳು ತೀವ್ರವಾಗಿ ವಿರೋಧಿಸುತ್ತಿವೆ. ಆಕೆಯನ್ನು ನಮ್ಮ ದೇಶಕ್ಕೆ ಒಪ್ಪಿಸಿ ಎಂದು ಭಾರತವನ್ನು ಬಿಎನ್‌ಪಿ ಒತ್ತಾಯಿಸಿತ್ತು.
Advertisement