ಢಾಕಾ: ಭಾರತದ (India) ವಿರುದ್ಧ 2 ಏಕದಿನ ಪಂದ್ಯದಲ್ಲೂ ಬಾಂಗ್ಲಾದೇಶ (Bangladesh) ಐತಿಹಾಸಿಕ ಗೆಲುವು ಸಾಧಿಸುವ ಮೂಲಕ 2-0 ಮೂಲಕ ಸರಣಿಯನ್ನು ತನ್ನದಾಗಿಸಿಕೊಂಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದ್ದ ಬಾಂಗ್ಲಾ 50 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 271 ರನ್ ಗಳಿಸಿತ್ತು. ಒಂದು ಹಂತದಲ್ಲಿ ಸಂಕಷ್ಟಕ್ಕೆ ಒಳಗಾಗಿದ್ದ ಬಾಂಗ್ಲಾದೇಶಕ್ಕೆ ಮೊಹಮೂದ್ ಉಲ್ಲಾಹ್ (77) ಹಾಗೂ ಮೆಹದಿ ಹಸನ್ ಸೆಂಚೂರಿಯನ್ನು ಗಳಿಸುವ ಮೂಲಕ ತಂಡಕ್ಕೆ ಆಸರೆಯಾದರು. ಇದನ್ನೂ ಓದಿ: ಕೈಯಲ್ಲಿ ರಕ್ತ ಸುರಿಸಿಕೊಂಡು ಮೈದಾನ ತೊರೆದ ರೋಹಿತ್
Advertisement
Advertisement
ಈ ಮೊತ್ತ ಬೆನ್ನಟ್ಟಿದ ಭಾರತ ತಂಡವು (Team India) 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 266 ರನ್ ಗಳಿಸುವ ಮೂಲಕ 5 ರನ್ಗಳಿಂದ ಸೋಲನ್ನಪ್ಪಿತು. ಈ ಮೂಲಕ ಬಾಂಗ್ಲಾದೇಶ ತಂಡವು 3 ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ಕೈವಶ ಮಾಡಿಕೊಂಡಿದೆ.
Advertisement
Advertisement
ಟೀಂ ಇಂಡಿಯಾಕ್ಕೆ ಆರಂಭಿಕರಾಗಿ ವಿರಾಟ್ ಕೊಹ್ಲಿ ಕಣಕ್ಕಿಳಿದಿದ್ದರೂ ಇಂದು ಸಹ ಅಬ್ಬರಿಸಲಿಲ್ಲ. ಕೊಹ್ಲಿ ಕೇವಲ 5 ರನ್‌ಗೆ ಓಟ್ ಆದರೇ ಇತ್ತ ಧವನ್ ಸಹ 8 ರನ್‌ಗೆ ವಿಕೆಟ್ ಒಪ್ಪಿಸಿದರು. ಆದರೆ ಬಳಿಕ ಬಂದ ಶ್ರೇಯಸ್ ಅಯ್ಯರ್ (3 ಸಿಕ್ಸ್, 6 ಫೋರ್) ಹಾಗೂ ಅಕ್ಷರ್ ಪಟೇಲ್ ಭರ್ಜರಿ ಬ್ಯಾಟಿಂಗ್ ಮಾಡಿ ಅರ್ಧ ಶತಕವನ್ನು ಗಳಿಸಿ ಭಾರತದ ಗೆಲುವಿಗೆ ಭರವಸೆ ನೀಡಿದರೂ ಅದು ಸಾಧ್ಯವಾಗಲಿಲ್ಲ. ನಾಯಕ ರೋಹಿತ್ ಶರ್ಮಾ ಗಾಯದ ನಡುವೆಯೂ ಅಂತಿಮವಾಗಿ ಬ್ಯಾಟಿಂಗ್ ಮಾಡಿದರು. ಆದರೆ ಅಂತಿಮವಾಗಿ ರೋಹಿತ್ 51 ರನ್ ಗಳಿಸಿ ಅಜೇಯರಾಗಿ ಉಳಿದರು. ಇದನ್ನೂ ಓದಿ: ಹಿಟ್‍ಮ್ಯಾನ್ ಬ್ಯಾಟ್‍ನಲ್ಲಿ ಸೂರ್ಯ