Connect with us

Cricket

ದಾಖಲೆಯ ಮತ ಪಡೆದು ಸಂಸತ್‍ಗೆ ಆಯ್ಕೆಯಾದ ಬಾಂಗ್ಲಾ ಕ್ಯಾಪ್ಟನ್!

Published

on

ಢಾಕಾ: ಬಾಂಗ್ಲಾದೇಶ ಸಂಸತ್ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ ಏಕದಿನ ಕ್ರಿಕೆಟ್ ತಂಡದ ನಾಯಕ ಮಷ್ರಫೆ ಮೊರ್ತಜಾ ಎದುರಾಳಿ ವಿರುದ್ಧ ಬಾರಿ ಅಂತರದ ಮತಗಳಲ್ಲಿ ಗೆಲುವು ಪಡೆಯುವ ಮೂಲಕ ಸಂಸತ್‍ಗೆ ಆಯ್ಕೆ ಆಗಿದ್ದಾರೆ.

ಬಾಂಗ್ಲಾದೇಶದ 11ನೇ ಸಂಸತ್ ಚುನಾವಣೆಯಲ್ಲಿ ಮೊರ್ತಜಾ, ನರೈಲ್ -2 ಕ್ಷೇತ್ರದಲ್ಲಿ ಆಡಳಿತಾರೂಢ ಅವಾಮಿ ಲೀಗ್‍ನಿಂದ ಸ್ಪರ್ಧೆ ಮಾಡಿದ್ರು. ಈ ಚುನಾವಣೆಯಲ್ಲಿ ಮೊರ್ತಜಾ ಒಟ್ಟು 2,74,418 ಮತ ಪಡೆದಿದ್ದು, ಅವರ ಎದುರಾಳಿ ಅಭ್ಯರ್ಥಿ ಕೇವಲ 7,883 ಮತ ಪಡೆದಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧ ಡಿ.9 ರಂದು ಆರಂಭವಾದ ಏಕದಿನ ಸರಣಿಯಲ್ಲಿ ತಂಡವನ್ನು ಮುನ್ನಡೆಸಿದ್ದ ಮೊರ್ತಜಾ ಚುನಾವಣಾ ಪ್ರಚಾರದಲ್ಲಿ ಭಾಗವಹಿಸುವುದರಿಂದ ನನ್ನ ಆಟದ ಮೇಲೆ ಯಾವುದೇ ಪರಿಣಾಮ ಉಂಟು ಮಾಡುವುದಿಲ್ಲ ಎಂದು ತಿಳಿಸಿದ್ದರು.

ರಾಜಕೀಯ ಪ್ರವೇಶದ ಕುರಿತು ಈ ಹಿಂದೆ ಹೇಳಿಕೆ ನೀಡಿದ್ದ 35 ವರ್ಷದ ಮೊರ್ತಜಾ, ದೇಶ ಸೇವೆ ಮಾಡಲು ಜನರ ಬಳಿ ಅವಕಾಶ ನೀಡಲು ಜನರ ಬಳಿ ಮನವಿ ಮಾಡುತ್ತಿರುವುದಾಗಿ ತಿಳಿಸಿದ್ದರು. ಅಲ್ಲದೇ ದೇಶದ ಪ್ರಧಾನಿಗಳು ಈ ಅವಕಾಶವನ್ನು ನನಗೆ ನೀಡಿದ್ದಾಗಿ ಹೇಳಿದ್ದರು. ಕ್ರಿಕೆಟ್ ವೃತ್ತಿ ಜೀವನದ ಕುರಿತ ಪ್ರಶ್ನೆಗೆ ಉತ್ತರಿಸಿ, 2019ರ ವಿಶ್ವಕಪ್ ತಮ್ಮ ಗುರಿ ಆಗಿದ್ದು, ಆ ಬಳಿಕ ನಿವೃತ್ತಿ ಬಗ್ಗೆ ಯೋಚಿಸುವುದಾಗಿ ತಿಳಿಸಿದ್ದರು.

ಅಂದಹಾಗೇ ಮಷ್ರಫೆ ಮೊರ್ತಜಾ ಚುನಾವಣೆ ಸ್ಪರ್ಧಿಸಿದ್ದ ಪಕ್ಷ ಆಡಳಿತಾ ರೂಢ ಶೇಖ್ ಹಸೀನ ಅವರ ನಾಯಕತ್ವದಲ್ಲಿ ಮೂರನೇ ಬಾರಿಗೆ ಸರ್ಕಾರ ರಚನೆ ಮಾಡುವ ಅವಕಾಶ ಪಡೆದಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *