ಬೆಂಗಳೂರು: ಬೆಂಗಳೂರೇನು ಪೂರ್ತಿಯಾಗಿ ಮುಳುಗಿಲ್ಲ, ಪ್ರತಿಪಕ್ಷಗಳು ಆ ರೀತಿ ಬಿಂಬಿಸುತ್ತಿವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸಿಲಿಕಾನ್ ಸಿಟಿ ಈಗ ಪ್ರವಾಹದೂರಾಗಿದೆ. ಜುಲೈನಿಂದ ಸೆಪ್ಟೆಂಬರ್ 3ರ ವರೆಗೆ ಸಾಮಾನ್ಯವಾಗಿ 300 ಮಿಲಿಮೀಟರ್ ಮಳೆ ಆಗಬೇಕಿತ್ತು. ಆದ್ರೆ ಈ ವರ್ಷ ಬರೋಬ್ಬರಿ 709 ಮಿಲಿಮೀಟರ್ ಮಳೆ ಆಗಿದೆ. ಇದನ್ನೂ ಓದಿ: ಮಳೆ; ನಾಳೆ ಬೆಂಗಳೂರು ಪೂರ್ವ ಭಾಗದ ಶಾಲೆಗಳಿಗೆ ರಜೆ
Advertisement
Advertisement
ಇದು 1971ರ ಬಳಿಕ ಅತಿ ಹೆಚ್ಚಿನ ಮಳೆ. 1971ರಲ್ಲಿ 725 ಮಿಲಿಮೀಟರ್ ಮಳೆ ಆಗಿದ್ದೇ ಈವರೆಗಿನ ದಾಖಲೆ ಆಗಿದೆ. ಕಳೆದ ಮೂರು ದಿನದಲ್ಲಿ ಇನ್ನೂರಕ್ಕೂ ಹೆಚ್ಚು ಮಿಲಿಮೀಟರ್ ಮಳೆ ಆಗಿದೆ. ಪೂರ್ವ ಮತ್ತು ದಕ್ಷಿಣ ಬೆಂಗಳೂರು ತತ್ತರಿಸಿಹೋಗಿದೆ. ಒಂದು ರೀತಿಯಲ್ಲಿ ಆ ಭಾಗದ ಜನ ನರಕಯಾತನೆ ಅನುಭವಿಸ್ತಿದ್ದಾರೆ. ಆದರೆ ಸರ್ಕಾರ ಮಾತ್ರ ಜನರ ಕಣ್ಣೀರು ಒರೆಸಲು ಮುಂದಾಗಿಲ್ಲ.
Advertisement
Advertisement
ಕಳೆದ ವಾರ ಮೋದಿ ಬೆಂಗಳೂರಿಗೆ ಬರೋದಕ್ಕೆ ಎರಡು ದಿನ ಮೊದಲು, ಉದ್ಯಮಿ ಮೋಹನ್ ದಾಸ್ ಪೈ ಪ್ರಧಾನಿಗೆ ಟ್ವೀಟ್ ಮಾಡಿದರೆಂಬ ಕಾರಣಕ್ಕೆ ಸಿಎಂ ಬೊಮ್ಮಾಯಿ ದಿಢೀರ್ ಎಂದು ಆಕ್ಟೀವ್ ಆಗಿದ್ರು. ಮೋದಿ ಬರುವ ಮುನ್ನಾದಿನ ಸಂಜೆ ನೆಪಮಾತ್ರಕ್ಕೆ ಸಿಟಿರೌಂಡ್ಸ್ ಮಾಡಿದ್ರು. ಎಲ್ಲಾ ಸಮಸ್ಯೆ ಬಗೆಹರಿಸ್ತೀವಿ ಎಂದು ಆಶ್ವಾಸನೆ ನೀಡಿದ್ದರು. ನಿನ್ನೆ ಬೆಳಗ್ಗೆ ಮತ್ತು ಸಂಜೆ ಎರಡು ಮೀಟಿಂಗ್ ಮಾಡಿದ್ರು. ಬೆಂಗಳೂರಿಗೆಂದು ಮತ್ತೆ 300 ಕೋಟಿ ರಿಲೀಸ್ ಮಾಡೋದಾಗಿ ಘೋಷಣೆ ಮಾಡಿದ್ರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಮಳೆ ಹಾವಳಿ: ನಾಳೆ ಸಾಫ್ಟ್‌ವೇರ್ ಕಂಪನಿಗಳ ಜತೆ ಸಭೆ
ಸರ್ಕಾರದ ಮೇಲೆ ನಂಬಿಕೆಯಿಡಿ. ಎಲ್ಲಾ ಸಮಸ್ಯೆ ಬಗೆಹರಿಸ್ತೇವೆ ಎಂದೂ ಆಶ್ವಾಸನೆ ನೀಡಿದ್ರು. ಇದೀಗ ಬೆಂಗಳೂರಿನ ಇಂದಿನ ಸ್ಥಿತಿಗೆ ಕಾಂಗ್ರೆಸ್ ಕಾರಣ ಎಂದು ಸಿಎಂ ದೂಷಿಸಿದ್ದಾರೆ. ಅಷ್ಟೇ ಅಲ್ಲ, ಬೆಂಗಳೂರೇನು ಪೂರ್ತಿಯಾಗಿ ಮುಳುಗಡೆ ಆಗಿಲ್ಲ. ಆ ರೀತಿ ಬಿಂಬಿಸ್ತಿದ್ದಾರೆ ಅಷ್ಟೇ ಎಂದು ಆರೋಪಗಳನ್ನು ತಳ್ಳಿಹಾಕಿದ್ದಾರೆ.
ಸರ್ಕಾರದ ಕಾರ್ಯವೈಖರಿಗೆ ಎಲ್ಲೆಡೆ ಆಕ್ಷೇಪಗಳು ವ್ಯಕ್ತವಾಗುತ್ತಿದೆ. ಈ ಮಧ್ಯೆ ಕಾಂಗ್ರೆಸ್ ಮೇಲೆ ಆರೋಪ ಮಾಡಿದ ಸಿಎಂ ಬೊಮ್ಮಾಯಿ ವಿರುದ್ಧ ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ. ಸದ್ಯ ಮೈಸೂರಿನಲ್ಲಿರುವ ಸಿಎಂ ಬೊಮ್ಮಾಯಿ ಇಂದು ರಾತ್ರಿ ಬೆಂಗಳೂರು ರೌಂಡ್ಸ್ ಮಾಡೋದಾಗಿ ಘೋಷಣೆ ಮಾಡಿದ್ದಾರೆ.