ಬೆಂಗಳೂರು: ಟ್ರಾನ್ಸ್‌ಫಾರ್ಮರ್ ಸ್ಫೋಟದಿಂದ ಮೃತಪಟ್ಟವರ ಕುಟುಂಬಕ್ಕೆ ಇಂಧನ ಸಚಿವ ವಿ.ಸುನೀಲ್‍ಕುಮಾರ್ 20 ಲಕ್ಷ ರೂ. ಪರಿಹಾರವನ್ನು ಫೋಷಿಸಿದರು.
ವಿಧಾನಸಭೆಯಲ್ಲಿ ಗುರುವಾರ ನಡೆದ ಶೂನ್ಯವೇಳೆಯಲ್ಲಿ, ಟ್ರಾನ್ಸ್‍ಫಾರ್ಮರ್ ದುರ್ಘಟನೆ ಬಗ್ಗೆ ಪ್ರಸ್ತಾಪಿಸಿ ಶಿವರಾಜ್ ಮತ್ತು ಪುತ್ರಿ ಚೈತನ್ಯ ಘಟನೆಯಿಂದ ಮೃತಪಟ್ಟಿರುವುದನ್ನು ವಿವರಿಸಿದರು. ಇದನ್ನೂ ಓದಿ: ಮಂತ್ರಿ ಒಳಗೆ ಶುರು ಹಚ್ಕೊಂಡಿದ್ದ, ಬಾಗಿಲಲ್ಲಿ ಪೊಲೀಸರು ಇದ್ರು: ಅರಗ ಜ್ಞಾನೇಂದ್ರ
ಟ್ರಾನ್ಸ್‌ಫಾರ್ಮರ್ ನಲ್ಲಿ ಲೀಡ್ ವಯರ್ ಸುಟ್ಟು ಆಯಿಲ್ ಸೋರಿಕೆಯಿಂದ ಸ್ಫೋಟ ಸಂಭವಿಸಿದೆ. ಬೆಳಗ್ಗೆ 11:50ರ ವೇಳೆಗೆ ಟ್ರಾನ್ಸ್‍ಫಾರ್ಮರ್ ನಲ್ಲಿ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ಸ್ಥಳೀಯರು ಮಾಹಿತಿ ಕೊಟ್ಟಿದ್ದಾರೆ. ಆದರೆ ಸಿಬ್ಬಂದಿ ಅದರ ಕಡೆ ಗಮನಹರಿಸದೆ ನಿರ್ಲಕ್ಷ್ಯ ಮಾಡಿದ್ದಾರೆ. ಪರಿಣಾಮ ಈ ದುರಂತ ನಡೆದಿದೆ. ಟ್ರಾನ್ಸ್‍ಫಾರ್ಮರ್ ಮಧ್ಯಾಹ್ನ 3:10ಕ್ಕೆ ಸ್ಫೋಟಗೊಂಡಿತು. ದುರದೃಷ್ಟವಶಾತ್ ಅದೇ ದಾರಿಯಲ್ಲಿ ಶಿವರಾಜ್ ಮತ್ತು ಚೈತನ್ಯ ಬರುತ್ತಿದ್ದರು. ಈ ವೇಳೆ ಬೆಂಕಿಗೆ ತಗುಲಿ ತಂದೆ-ಮಗಳು ಮೃತಪಟ್ಟಿದ್ದಾರೆ. ಇದಕ್ಕಾಗಿ ನಾನು ವಿಷಾದಿಸುತ್ತೇನೆ. ಮುಂದೆ ಈ ರೀತಿಯ ತಪ್ಪುಗಳು ಆಗದಂತೆ ನಾವು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ಕೊಟ್ಟರು.
ಇಂದು ಬೆಳಗ್ಗೆ ಅಧಿಕಾರಿಗಳ ಸಭೆ ನಡೆಸಿದ್ದೇನೆ. 20 ಲಕ್ಷ ರೂ. ಪರಿಹಾರ ನೀಡಬೇಕೆಂದು ತಿರ್ಮಾನಿಸಿದ್ದೇವೆ. ಅಪಾಯದ ಸ್ಥಿತಿಯಲ್ಲಿರುವ ಟ್ರಾನ್ಸ್‍ಫಾರ್ಮರ್ ಗಳ ಆಡಿಟ್ ನಡೆಸಿ ವರದಿ ಸಲ್ಲಿಸುವಂತೆ ಸೂಚನೆ ನೀಡಿದ್ದೇವೆ ಎಂದು ವಿವರಿಸಿದರು. ಇದನ್ನೂ ಓದಿ: ವಿಸ್ತಾರವಾದ, ಪ್ರತ್ಯೇಕವಾದ ನಿಲ್ಲುವವರೆಗೂ ಮುಸ್ಲಿಮರಿಗೆ ಆರ್ಥಿಕ ಬಹಿಷ್ಕಾರ: ಮುತಾಲಿಕ್