ಬೆಂಗಳೂರು: ಭಾರತ (India) ಪಾಕಿಸ್ತಾನದ (Pakistan) ಮಧ್ಯೆ ದಾಳಿ ಆರಂಭವಾದ ಬಳಿಕ ಸಾಮಾಜಿಕ ಜಾಲತಾಣದಲ್ಲಿ (Social Media) ವಿಪರೀತ ಸುಳ್ಳು ಸುದ್ದಿಗಳು ಹರಿದಾಡಲು ಆರಂಭವಾಗಿದೆ. ಅದರಲ್ಲೂ ಪಾಕ್‌ನ ಒಬ್ಬಾತ ಬೆಂಗಳೂರಿನ ಬಂದರನ್ನು ಪಾಕಿಸ್ತಾನ ಧ್ವಂಸ ಮಾಡಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾನೆ.
Bangalore Port destroyed By Pakistan Navy ಎಂದು ಬರೆದು ಪಾಕ್ ರಾಷ್ಟ್ರಧ್ವಜ ಚಿಹ್ನೆಯನ್ನು ಹಾಕಿ ಟೈಪಿಸಿದ್ದಾನೆ. ಈ ಪೋಸ್ಟ್‌ನ ಸ್ಕ್ರೀನ್ ಶಾಟ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇನ್ನೊಬ್ಬ ಪಾಟ್ನಾದ ಬಂದರನ್ನು ಪಾಕಿಸ್ತಾನ ನೌಕಾಸೇನೆ ಧ್ವಂಸ ಮಾಡಿದೆ ಎಂದು ಪೋಸ್ಟ್ ಮಾಡಿದ್ದಾನೆ.
Congratulations Pakistan on destroying the Bengaluru Port 👏
The entire world is shocked to see how they have breached the advanced defence interception systems in the Silk Board, Tin Factory, Hebbal, Goraguntepalya, Kengeri & Whitefield Naval Bases in India
Stay safe Bangalore pic.twitter.com/GQqrbVrKJj
— Karnataka Weather (@BengaluruRains_) May 10, 2025
ಸಾಮಾಜಿಕ ಜಾಲತಾಣದಲ್ಲಿ ಈ ಸ್ಕ್ರೀನ್ ಶಾಟ್‌ಗೆ ಬಗೆ ಬಗೆಯ ಕಮೆಂಟ್‌ಗಳು ಬರುತ್ತಿದೆ. ಪೋರ್ಕಿಸ್ತಾನಕ್ಕೆ ಮಾತ್ರ ಗೋಚರಿಸುವ ಬೆಂಗಳೂರಿನ ಅದೃಶ್ಯದ ಬಂದರನ್ನು ಅಭಿವೃದ್ಧಿಪಡಿಸಿದ್ದಕ್ಕಾಗಿ ನಮ್ಮ ವಿಜ್ಞಾನಿಗಳಿಗೆ ಧನ್ಯವಾದಗಳು ಎಂದು ಒಬ್ಬರು ಬರೆದುಕೊಂಡಿದ್ದಾರೆ. ಅರೆರೆ ಬೆಂಗಳೂರಿನಲ್ಲಿ ಬಂದರು ಇದ್ಯಾ? ನಮ್ಮಿಂದ ಯಾಕೆ ಪೋರ್ಟ್ ಅನ್ನು ಮರೆಮಾಚಲಾಯ್ತು ಅಂತಾ ಲೇವಡಿ ಮಾಡಿ ಕಮೆಂಟ್ ಮಾಡುತ್ತಿದ್ದಾರೆ.
Thanks to our scientists for developing an invisible port in Bangalore that can only be visible to Porkistan! 🤲 pic.twitter.com/xwCVnlBk7U
— I am JJ (@JJShankar007) May 10, 2025
ಕಳೆದ ರಾತ್ರಿ ಪಾಕಿಸ್ತಾನವು ಉಧಂಪುರ, ಪಠಾಣ್‌ಕೋಟ್ ಮತ್ತು ಬಟಿಂಡಾದಲ್ಲಿನ ಭಾರತೀಯ ವಾಯುನೆಲೆಗಳು ಮತ್ತು ಇತರ 23 ಭಾರತೀಯ ನಗರಗಳ ಮೇಲೆ ಇಂದು ದಾಳಿ ಮಾಡಿತ್ತು. ಕ್ಷಿಪಣಿ, ಡ್ರೋನ್ ದಾಳಿಗಳನ್ನು ಭಾರತ ತಟಸ್ಥಗೊಳಿಸಿತ್ತು. ಇದನ್ನೂ ಓದಿ: ಪೊಲೀಸರೇ ಅರೆಸ್ಟ್ – ಪಾಕ್ ಹಿಡಿತದಲ್ಲಿದ್ದ ನಗರ ವಶಕ್ಕೆ ಪಡೆದ ಬಲೂಚ್ ಹೋರಾಟಗಾರರು
ಪಾಕ್ ಸೇನೆ ಭಾರತದ ನಾಗರಿಕರು, ಆಸ್ಪತ್ರೆ, ಶಾಲೆಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿವೆ. ಪ್ರಯಾಣಿಕ ವಿಮಾನವನ್ನು ಗುರಾಣಿಯನ್ನಾಗಿ ಬಳಸಿಕೊಳ್ಳುತ್ತಿದೆ.
Shocking and disturbing News
Patna Sea Port and Banglore sea port destroyed by Pakistan
People living near Patna Sea and Banglore sea please verify this news
I think it’s the sea port near Koramangala beach in Bangalore
Mudi shud regine now https://t.co/vEFOGo1Enu pic.twitter.com/PUhncwJa5A
— Woke Eminent (@WokePandemic) May 10, 2025
ಪಾಕಿಸ್ತಾನ ಶೆಲ್ ದಾಳಿ ನಡೆಸಿ ಅಮಾಯಕರನ್ನ ಗುರಿ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಗಡಿ ಜಿಲ್ಲೆಗಳಾದ ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ರಾಜಸ್ಥಾನ, ಹರಿಯಾಣ ಹಾಗೂ ಹಿಮಾಚಲ ಪ್ರದೇಶದಲ್ಲಿ ಗಡಿ ಭಾಗದಲ್ಲಿ ತುರ್ತು ಪರಿಸ್ಥಿತಿ ಹೇರಲಾಗಿದೆ. ಜಮ್ಮು-ಕಾಶ್ಮೀರದಲ್ಲಿ (Jammu And Kashmir) ಬೆಳಗ್ಗಿನವರೆಗೂ ಬ್ಲಾಕ್‌ಔಟ್ ಘೋಷಿಸಲಾಗಿತ್ತು. ಇದನ್ನೂ ಓದಿ: ಪಾಕ್ ತತ್ತರ – ಇಸ್ಲಾಮಾಬಾದ್‌ನಲ್ಲಿ 48 ಗಂಟೆಗಳವರೆಗೆ ಪೆಟ್ರೋಲ್ ಪಂಪ್‌ಗಳು ಬಂದ್
I can see why the confusion is
Pakistani googled Bangalore, found this image and assumed it’s a fkin port https://t.co/hz6hJZhnpq pic.twitter.com/2d8DETPJfz
— Abhi (@_Avykt) May 10, 2025
ಭಾರತ ನಡೆಸಿದ ವಾಯುದಾಳಿಯಲ್ಲಿ ಸಿಯಾಲ್‌ಕೋಟ್, ಪಸ್ರೂರ್ ರಾಡಾರ್ ಸೈಟ್, ರಹೀಮ್ ಯಾರ್ ಖಾನ್, ಮುರಿದ್, ರಫೀಕ್, ಚುನಿಯನ್, ಚಕ್ಲಾಲಾ, ಸುಕ್ಕೂರ್ ಮೊದಲಾದ ಪಾಕಿಸ್ತಾನ ವಾಯುನೆಲೆಗಳನ್ನು ಧ್ವಂಸಗೊಳಿಸಿದೆ. ಜೊತೆಗೆ ಭಾರತದ ಮೇಲೆ ಪದೇ ಪದೇ ದಾಳಿಗೆ ಯತ್ನಿಸುತ್ತಿದ್ದ ಡ್ರೋನ್ ಲಾಂಚ್‌ಪ್ಯಾಡನ್ನೇ ಉಡೀಸ್ ಮಾಡಿದೆ.