ಬೆಂಗಳೂರು: ಕೇವಲ ಗುರಾಯಿಸಿದ್ದ ಎಂಬ ಕಾರಣಕ್ಕೆ ಚಾಕು ಇರಿದ ಪರಾರಿಯಾಗಿದ್ದ ಆರೋಪಿಯನ್ನು ಬೆಂಗಳೂರು ಪೊಲೀಸರು 24 ಗಂಟೆಯೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
2 ದಿನಗಳ ಹಿಂದೆ ಜೂನ್ 21 ರಂದು ಗುರಾಯಿಸಿದ್ದ ಎಂಬ ಕಾರಣಕ್ಕೆ ಅರುಣ್ ಎಂಬ ಯುವಕನನ್ನು ಚಾಕು ಇರಿದು ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಆರೋಪಿ ಅಮೀರ್ ಎಂಬವನನ್ನು ಸಿದ್ದಾಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ತಂದೆ ಜೊತೆ ಮಿಕ್ಸಿ ರಿಪೇರಿ ಕೆಲಸ ಮಾಡುತ್ತಿದ್ದ ಅರುಣ್ ಕೆಲಸ ಮುಗಿಸಿ ಮನೆಗೆ ಬರುವಾಗ ತಂದೆಯನ್ನು ಏರಿಯಾ ಹುಡುಗರು ಕಿಚಾಯಿಸಿದ್ದಾರೆ. ಈ ವೇಳೆ ತಂದೆಯನ್ನು ಕಿಚಾಯಿಸಿದ್ದಕ್ಕೆ ಅರುಣ್ ಹುಡುಗರ ಜೊತೆ ಜಗಳವಾಡಿದ್ದ. ನಂತರ ಅರುಣ್ ಮಾವ ಇಬ್ಬರಿಗೂ ಸಂಧಾನ ಮಾಡಿ ಮಾತುಕತೆ ನಡೆಸಿ ಬುದ್ಧಿವಾದ ಹೇಳಿ ಎಲ್ಲರನ್ನು ಮನೆಗೆ ವಾಪಸ್ ಕಳುಹಿಸಿದ್ದರು.
ಮನೆಗೆ ವಾಪಸ್ ಹೋಗುವ ಸಮಯದಲ್ಲಿ ಅರುಣ್, ಆರೋಪಿ ಅಮೀರ್ ಗೆ ಗುರಾಯಿಸಿದ್ದಾನೆ. ಈ ಕಾರಣದಿಂದ ಆರೋಪಿ ಆಮೀರ್ ಅರುಣ್‍ಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ. ಈ ಪ್ರಕರಣವನ್ನು ಕೈಗೆತ್ತಿಕೊಂಡ ಸಿದ್ದಾಪುರ ಠಾಣಾ ಪೊಲೀಸರು ಮಿಂಚಿನ ಕಾರ್ಯಚರಣೆ ಮಾಡಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]