ಕಾರವಾರ: ಹಣ ಕಟ್ಟಲು ತಕರಾರು ತೆಗೆದು ಟೋಲ್ ಸಿಬ್ಬಂದಿ ಮೇಲೆ ಬೆಂಗಳೂರಿನ ಪೊಲೀಸರು ಹಲ್ಲೆ ನಡೆಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.
ಅಂಕೋಲಾ ತಾಲೂಕಿನ ಹಟ್ಟಿಕೇರಿ ಟೋಲ್ ಗೇಟ್‌ನಲ್ಲಿ ಈ ಘಟನೆ ನಡೆದಿದೆ. ಬೆಂಗಳೂರಿನಿಂದ ಗೋವಾಕ್ಕೆ ಪೊಲೀಸರು ಕುಟುಂಬದೊಂದಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಅಂಕೋಲಾ ತಾಲೂಕಿನ ಹಟ್ಟಿಕೇರಿ ಟೋಲ್ ಗೇಟ್‌ನಲ್ಲಿ ಹಣ ಕಟ್ಟದೇ ತಕರಾರು ತೆಗೆದಿದ್ದಾರೆ. ಇದಲ್ಲದೇ ಖಾಸಗಿ ವಾಹನಕ್ಕೆ ಪೊಲೀಸ್ ಎಂದು ಸ್ಟಿಕರ್ ಸಹ ಹಾಕಿದ್ದರು. ಇದನ್ನೂ ಓದಿ: ಸೋಮವಾರ ಯಾದಗಿರಿಯಲ್ಲಿ ಚುನಾವಣೆ – ಪೊಲೀಸ್ ಇಲಾಖೆ ಸಜ್ಜು
Advertisement
Advertisement
ಖಾಸಗಿ ವಾಹನವಾದ್ದರಿಂದ ಟೋಲ್ ಸಿಬ್ಬಂದಿ ತಡೆದಿದ್ದು, ಟೋಲ್ ಕಟ್ಟುವಂತೆ ಕೇಳಿದ್ದಾರೆ. ಇದಕ್ಕೆ ತಕರಾರು ತೆಗೆದ ಪೊಲೀಸರು ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ. ಈ ಘಟನೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: 7ರ ಬಾಲಕಿ ಮೇಲೆ ಅತ್ಯಾಚಾರ- ಹತ್ಯೆಗೈದವರಿಗಾಗಿ ಶೋಧ ಕಾರ್ಯ