13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಗುರುವಾರವಷ್ಟೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ಕೊಟ್ಟಿದ್ದಾರೆ. ಫೆ.3 ರಿಂದ ಫೆ.10 ವರೆಗೆ ಏಳು ದಿನಗಳ ಕಾಲ ಚಿತ್ರೋತ್ಸವ ನಡೆಯಲಿದೆ.
ಈ ಬಾರಿ 55 ರಾಷ್ಟ್ರಗಳ 200 ಚಲನಚಿತ್ರಗಳು ಪ್ರದರ್ಶನವಾಗಲಿದ್ದು ಅವುಗಳಲ್ಲಿ ಪ್ರಾದೇಶಿಕ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ ಚಿತ್ರಗಳು ಆಯ್ಕೆಯಾಗಿವೆ. ಚಿತ್ರಗಳನ್ನು ಪ್ರದರ್ಶಿಸಲ ಬೆಂಗಳೂರಿನ ಒರಾಯನ್ ಮಾಲ್‌ನಲ್ಲಿ ೧೧ ಪ್ರದರ್ಶನ ಮಂದಿರಗಳನ್ನು ಮೀಸಲಿಡಲಾಗಿದೆ. ಇಲ್ಲಿ ಚಿತ್ರ ಪ್ರದರ್ಶನ ಮಾತ್ರವಲ್ಲದೆ ನಿರ್ದೇಶಕರು, ಕಲಾವಿದರು, ತಂತ್ರಜ್ಞರೊಂದಿಗೆ ಸಂವಾದ, ಸಂದರ್ಶನವನ್ನು ಏರ್ಪಡಿಸಲಾಗಿದೆ. ಅಲ್ಲದೇ, ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘ ಡಾ.ರಾಜ್ ಭವನ ಮತ್ತು ಸುಚಿತ್ರಾ ಫಿಲಂ ಸೊಸೈಟಿಯಲ್ಲೂ ಚಿತ್ರಗಳ ಪ್ರದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಇದನ್ನೂ ಓದಿ : ಮಾರ್ಚ್ 27ಕ್ಕೆ ಕೆಜಿಎಫ್ 2 ಟ್ರೈಲರ್ ರಿಲೀಸ್
Advertisement
Advertisement
ಸಿನಿಮಾ ಕ್ಷೇತ್ರದ ಹೆಸರಾಂತ ವೃತ್ತಿಪರ ಪರಿಣಿತರು, ಕಲಾವಿದರು, ತಂತ್ರಜ್ಞರಿಂದ ನಾನಾ ವಿಷಯಗಳ ಕುರಿತಾಗಿ ಉಪನ್ಯಾಸ ಹಾಗೂ ಸಂವಾದವನ್ನೂ ಈ ಸಂದರ್ಭದಲ್ಲಿ ಏರ್ಪಡಿಸಿದ್ದಾರೆ. ಈ ಬಾರಿ ಚಿತ್ರಮಂದಿರಗಳಲ್ಲಿನ ಪ್ರದರ್ಶನದ ಜೊತೆಗೆ, ಆನ್‌ಲೈನ್‌ನಲ್ಲೂ ಪ್ರದರ್ಶನದ ಅನುಕೂಲ ಕಲ್ಪಿಸಲಾಗಿದ್ದು ವಿದೇಶ.
Advertisement
ಈ ಬಾರಿಯ ಚಲನಚಿತ್ರೋತ್ಸವದ ವಸ್ತುವಿಷಯವಾಗಿ ಪ್ರದರ್ಶಕ ಕಲೆಗಳು ಹಾಗೂ ಆಜಾದಿ ಕಿ ಅಮೃತ್ ಮಹೋತ್ಸವವಾಗಿ ಆಯ್ದುಕೊಳ್ಳಲಾಗಿದೆ. ಏಷ್ಯಾ ಚಲನಚಿತ್ರ ವಿಭಾಗ, ಭಾರತೀಯ ಚಲನಚಿತ್ರಗಳ ವಿಭಾಗ, ಕನ್ನಡ ಚಲನಚಿತ್ರಗಳ ಸ್ಪರ್ಧಾ ವಿಭಾಗ, ಕನ್ನಡದ ಜನಪ್ರಿಯ ಮನೋರಂಜನಾ ಪ್ರಧಾನ ಚಿತ್ರಗಳ ಸ್ಪರ್ಧಾ ವಿಭಾಗ, ಸಮಕಾಲೀನ ವಿಶ್ವಸಿನಿಮಾ, ವಿದೇಶವೊಂದರ ವಿಶೇಷ ನೋಟ, ಈಶಾನ್ಯ ರಾಜ್ಯಗಳ ವಿಶೇಷ ನೋಟ ಹೀಗೆ ನಾನಾ ವಿಭಾಗಗಳಲ್ಲಿ ಸ್ಪರ್ಧೆ ಮತ್ತು ಸಿನಿಮಾ ಪ್ರದರ್ಶನಗಳನ್ನು ಕೂಡ ಈ ಚಿತ್ರೋತ್ಸವದಲ್ಲಿ ಆಯೋಜನೆ ಮಾಡಲಾಗಿದೆ.
Advertisement
ಶ್ರೀಮತಿ ಭಾರತಿ ವಿಷ್ಣುವರ್ಧನ್ ಜೀವನ ಕುರಿತಾದ ಕಿರುಚಿತ್ರ ಪ್ರದರ್ಶನ, ಆಜಾದಿ ಕಿ ಅಮೃತ್‌ಮಹೋತ್ಸವ್ ನೆನಪಿನಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದ ಚಿತ್ರಗಳು ಪ್ರದರ್ಶನಗೊಳ್ಳಲಿವೆ. ತುಳು ಚಿತ್ರರಂಗದ ಸುವರ್ಣ ಮಹೋತ್ಸವಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ. ಇತ್ತೀಚೆಗಷ್ಟೇ ಅಗಲಿರುವ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಪುನೀತ್ ರಾಜ್ ಕುಮಾರ್ ಮತ್ತು ಕಳೆದ ವರ್ಷ ನಿಧನರಾದ ಸಂಚಾರಿ ವಿಜಯ್ ಅವರ ಸಾಧನೆಯನ್ನು ಚಿತ್ರೋತ್ಸವದಲ್ಲಿ ಸ್ಮರಿಸಲಾಗುವುದು. ಭಾರತದಿಂದ ಆಹ್ವಾನಿತರಾದ ಪ್ರತಿನಿಧಿಗಳಲ್ಲಿ ಚಲನಚಿತ್ರ ನಿರ್ಮಾಪಕರು, ಚಿತ್ರೋತ್ಸವ ಸಂಘಟಕರು/ಕಾರ್ಯಕ್ರಮ ನಿಯೋಜಕರು ಹಾಗೂ ಪಶ್ಚಿಮ ಬಂಗಾಳ, ಮಹಾರಾಷ್ಟ, ರಾಜಸ್ಥಾನ, ತೆಲಂಗಾಣ, ದೆಹಲಿ, ಕೇರಳ, ತಮಿಳುನಾಡು ಮತ್ತು ಈಶಾನ್ಯ ರಾಜ್ಯಗಳ ಪತ್ರಕರ್ತರು ಮತ್ತು ವಿಮರ್ಶಕರು ಸೇರಿದ್ದಾರೆ ಚಿತ್ರೋತ್ಸವದಲ್ಲಿ ಭಾಗಿಯಾಗಿ ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ.
ಸಮಾರೋಪ ಸಮಾರಂಭ ಮಾರ್ಚ್ 10ರಂದು ಸಂಜೆ ನಡೆಯಲಿದ್ದು ಅಂದು ಏಷಿಯನ್, ಭಾರತೀಯ ಹಾಗು ಕನ್ನಡ ಚಲನಚಿತ್ರ ಸ್ಪರ್ಧೆಗಳ ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ.