ಬೆಂಗಳೂರು: ಸಾವಿರಾರು ಜನರಿಗೆ ಮೋಸ ಮಾಡಿ ತಲೆಮರೆಸಿಕೊಂಡಿರುವ ಐಎಂಎ ಸಂಸ್ಥಾಪಕ ಮೊಹಮ್ಮದ್ ಮನ್ಸೂರ್ ಖಾನ್ ಸಾವಿರಾರು ಕೋಟಿ ರೂ. ಆಸ್ತಿಯನ್ನು ಹೊಂದಿದ್ದಾನೆ.
ಮನ್ಸೂರ್ ಖಾನ್ ತನ್ನ ಹೆಸರಿನಲ್ಲಿ 488 ಕೋಟಿ ಮೌಲ್ಯದ ಚರಾಸ್ತಿ, 1,888 ಕೆಜಿ ಚಿನ್ನಾಭರಣ, 18.64 ಕೆ.ಜಿ ಪ್ಲಾಟಿನಂ, 463 ಕೆ.ಜಿಯ ಬೆಳ್ಳಿ ವಸ್ತುಗಳು, 30 ಸಾವಿರ ಕ್ಯಾರೆಟ್ ವಜ್ರ, 110 ಕೆ.ಜಿ ಬಿಳಿ ಬಂಗಾರ ಇದೆ ಎಂದು ಘೋಷಿಸಿಕೊಂಡಿದ್ದ.
ಇಷ್ಟೇ ಅಲ್ಲದೇ ಐಎಂಎ ಗೋಲ್ಡ್‍ನಿಂದ ಅಡಮಾನ ಪಡೆದ 350 ಕೆ.ಜಿ ಚಿನ್ನ, ಕೋಟ್ಯಂತರ ರೂಪಾಯಿ ಬೆಲೆಬಾಳುವ ಅಮೂಲ್ಯ ರತ್ನಗಳು ಹೊಂದಿದ್ದೇನೆ ಎಂದು ಸ್ವತಃ ಘೋಷಿಸಿಕೊಂಡಿದ್ದನು.
ಐಎಂಎ ನಲ್ಲಿ ಕೇವಲ ಹಣ ಮಾತ್ರ ಹೂಡಿಕೆ ಮಾಡದೇ ಜನರು ಚಿನ್ನವನ್ನು ಕೊಡ ಗಿರವಿ ಇಟ್ಟಿದ್ದಾರೆ. ಚಿನ್ನ ಗಿರವಿ ಇಟ್ಟು ಸಾಲ ಕೂಡ ಪಡೆದಿದ್ದಾರೆ. ಐಎಂಎ ವಿರುದ್ಧ ಇದುವರೆಗೂ 14 ಸಾವಿರಕ್ಕೂ ಅಧಿಕ ದೂರು ದಾಖಲಾಗಿದ್ದು. 14 ಸಾವಿರದಲ್ಲಿ 300 ರಿಂದ 400 ಜನ ಚಿನ್ನಾಭರಣಗಳನ್ನು ಗಿರವಿ ಇಟ್ಟವರು ದೂರು ನೀಡಿದ್ದಾರೆ. ಲಾಕರ್‍ನಲ್ಲಿ ಚಿನ್ನಾಭರಣ ಇಟ್ಟು ಹಣ ಪಡದು ಬಡ್ಡಿ ಕಟ್ಟುತ್ತಿದ್ದ ದೂರುದಾರು ಶೇ.4 ರಿಂದ ಶೇ.5 ಬಡ್ಡಿ ಕಟ್ಟುತ್ತಿದ್ದರು.
ಸದ್ಯ ಚಿನ್ನಾಭರಣಗಳನ್ನು ಗಿರವಿ ಇಟ್ಟು ಸಾಲ ಪಡೆದವರ ಚಿನ್ನ ಸೇಫ್ ಇದ್ಯಾ ಇಲ್ವಾ ಅನ್ನೋ ಅನುಮಾನದಲ್ಲಿ ಇದ್ದಾರೆ.