ಬೆಂಗಳೂರು: ರಜೆಗೆಂದು ಮನೆಗೆ ಬಂದ ಸ್ನೇಹಿತನೊಬ್ಬ ತನ್ನ ಸ್ನೇಹಿತೆಯ ಮಕ್ಕಳ ಮೇಲೆಯೇ ಹಲ್ಲೆ ಮಾಡಿರುವ ಘಟನೆ ಸಿಲಿಕಾನ್ ಸಿಟಿಯ ಅಶೋಕ್ ನಗರದ ವಿಕ್ಟೋರಿಯೋ ಲೇಔಟ್ನಲ್ಲಿ ನಡೆದಿದೆ.
ಹಲ್ಲೆ ಮಾಡಿದ ಸ್ನೇಹಿತನನ್ನು ಈಗನ್ ವಿಕ್ಟರ್ ಎಂದು ಗುರುತಿಸಲಾಗಿದೆ. ರಜೆಗೆಂದು ಸ್ನೇಹಿತೆಯ ಮನೆಗೆ ಬಂದಿದ್ದ ವಿಕ್ಟರ್ ಆಕೆಯ ಮಕ್ಕಳ ಮೇಲೆ ಬೆಲ್ಟ್ ನಿಂದ ಹಲ್ಲೆ ಮಾಡಿ ಅನಾಗರೀಕ ವರ್ತನೆ ತೋರಿದ್ದಾನೆ. ಈ ದೃಶ್ಯಗಳು ಮನೆಯಲ್ಲಿ ಅಳವಡಿಸಿದ್ದ ಹಿಡನ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಇದಲ್ಲದೆ ಸ್ನೇಹಿತೆಯ ಪತಿ ಮೈಕಲ್ನನ್ನು ಹೆದರಿಸಿ 2 ದಿನದಿಂದ ಮನೆಯಿಂದ ಹೊರ ಹಾಕಿದ್ದಾನೆ ಎನ್ನಲಾಗಿದೆ. ಇಂದು ತನ್ನ ಪತ್ನಿಗೆ ವಾಟ್ಸಪ್ ಮಾಡಿದರೂ ಪ್ರತಿಕ್ರಿಯೆ ನೀಡದ ಹಿನ್ನಲೆ ಪತಿ ಮೈಕಲ್ ರೆಬೆಲ್ಲೋ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.