‘ದಳಪತಿ’ ಸಾಮ್ರಾಜ್ಯದ ಯುವರಾಜ ಪಟ್ಟ ನಿಖಿಲ್‍ಗಾ, ಪ್ರಜ್ವಲ್‍ಗಾ?

Public TV
1 Min Read
collage hdd

ಬೆಂಗಳೂರು: ರಾಜ್ಯ ಸರ್ಕಾರದ ಸಂಪುಟ ವಿಸ್ತರಣೆಗಿಂತಲೂ ಜೆಡಿಎಸ್ ‘ದಳಪತಿ’ ಸಾಮ್ರಾಜ್ಯದ ಯುವರಾಜ ಪಟ್ಟದ ಸಾರಥಿ ಯಾರು? ಯಾರಿಗೆ ಒಲಿಯುತ್ತೆ ಜೆಡಿಎಸ್‍ನ ಯುವರಾಜನ ಪಟ್ಟ ಎಂಬ ಪ್ರಶ್ನೆಯೊಂದು ಈಗ ಜೆಡಿಎಸ್ ಪಾಳ್ಯದಲ್ಲಿ ಶುರುವಾಗಿದೆ.

ಹೌದು ಜೆಡಿಎಸ್ ಯುವಘಟಕದ ಮಧುಬಂಗಾರಪ್ಪ ಸ್ಥಾನವನ್ನು ಮೊಮ್ಮಕ್ಕಳಿಗೆ ನೀಡಲು ದೇವೇಗೌಡರು ಚಿಂತನೆ ಮಾಡಿದ್ದಾರೆ. ಆದರೆ ಈ ಸ್ಥಾನ ಮಂಡ್ಯದಲ್ಲಿ ಸೋತಾ ನಿಖಿಲ್‍ಗಾ ಇಲ್ಲಾ ಹಾಸನದಲ್ಲಿ ಗೆದ್ದ ಪ್ರಜ್ವಲ್‍ಗಾ? ಯಾವ ಮೊಮ್ಮಗನಿಗೆ ಗಿಫ್ಟ್ ಕೊಡ್ತಾರೆ ದೇವೇಗೌಡರು ಎಂದು ಎಲ್ಲರೂ ಎದುರು ನೋಡುವಂತಾಗಿದೆ.

madhu bangarappa

ಲೋಕಸಭಾ ಚುನಾವಣೆಯಲ್ಲಿ ಒಂದೇ ಒಂದು ಸೀಟು ಗೆದ್ದಿದ್ದು. ತುಮಕೂರಿನಲ್ಲಿ ತನ್ನ ಸೋಲು, ಮಂಡ್ಯದಲ್ಲಿ ಮೊಮ್ಮಗನ ಪರಾಭವ ಇವೆಲ್ಲವೂ ಮಾಜಿ ಪ್ರಧಾನಿ ದೇವೇಗೌಡರನ್ನು ಕಂಗೆಡಿಸಿದೆ. ಅದರಿಂದ ಪಕ್ಷದ ಬಲವರ್ಧನೆಯ ಬಗ್ಗೆ ಚಿಂತೆ ಮಾಡುತ್ತಿರುವ ಗೌಡರು ಈಗ ದಳಪತಿ ಸಾಮ್ರಾಜ್ಯದ ಯುವರಾಜನ ಪಟ್ಟವನ್ನು ಮಧುಬಂಗಾರಪ್ಪನವರ ಬದಲು ಮೊಮ್ಮಕ್ಕಳಿಗೆ ನೀಡಲು ಉತ್ಸುಕತೆ ತೋರಿದ್ದಾರೆ ಎನ್ನಲಾಗಿದೆ.

ಮಂಡ್ಯದಲ್ಲಿ ಸೋತಾ ನಿಖಿಲ್ ಅವರಿಗೆ ಸಾರಥ್ಯ ವಹಿಸಿಕೊಳ್ಳುವಂತೆ ಅವರ ಬೆಂಬಲಿಗರು ಒತ್ತಾಯ ಮಾಡುತ್ತಿದ್ದಾರಂತೆ. ಆದರೆ ಪಕ್ಷ ಸಂಘಟನೆಯಲ್ಲಿ ಪ್ರಜ್ವಲ್ ಆಸಕ್ತಿ ತೋರಿಸಿರುವುದರಿಂದ ಪ್ರಜ್ವಲ್ ಹೆಸರು ಚಾಲ್ತಿಯಲ್ಲಿದೆ.

jds

ಸೋತ ಬಳಿಕವೂ ನಿಖಿಲ್ ಸುಮಲತಾ ಹಾಗೂ ಅಭಿಷೇಕ್‍ಗೆ ಹಾರೈಸಿದ ಪರಿ, ಮಂಡ್ಯದ ಜನರ ಜೊತೆ ಸದಾ ಇರುತ್ತೇನೆ ಎಂದು ನೀಡಿರುವ ಭರವಸೆ ನಿಖಿಲ್ ಇಮೇಜ್ ಬದಲಾಯಿಸಿದೆ. ನಿಖಿಲ್ ನಡೆ ಒಬ್ಬ ಪ್ರಬುದ್ಧ ರಾಜಕಾರಣಿಯಂತಿದೆ. ನೀವು ಸಿನಿಮಾ ಬಿಟ್ಟಾಕಿ ರಾಜಕೀಯದ ಅಖಾಡದಲ್ಲಿ ಫುಲ್ ಟೈಂ ತೊಡಗಿಸಿಕೊಳ್ಳಿ ಎಂದು ಅಭಿಮಾನಿಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *