ಚಾಮರಾಜನಗರ: ಕಾಡಿಗೆ ಬೆಂಕಿ ಬಿದ್ದ ಹಿನ್ನೆಲೆಯಲ್ಲಿ ಬಂಡೀಪುರರ ಹುಲಿರಕ್ಷಿತಾರಣ್ಯದಲ್ಲಿ ಕಳೆದ ಎಂಟು ದಿನಗಳಿಂದ ಸ್ಥಗಿತಗೊಳಿಸಲಾಗಿದ್ದ ಸಫಾರಿ ಇಂದಿನಿಂದ ಪುನರಾರಂಭಗೊಂಡಿದೆ.
ಒಂದು ವಾರ ಕಾಲ ಧಗಧಗನೆ ಹೊತ್ತಿ ಉರಿದ ಬೆಂಕಿ ಸತತ ಕಾರ್ಯಚರಣೆಯ ಫಲವಾಗಿ ಸಂಪೂರ್ಣವಾಗಿ ನಂದಿದ ಹಿನ್ನಲೆಯಲ್ಲಿ ಇಂದು ಬೆಳಿಗ್ಗೆಯಿಂದ ಸಫಾರಿ ಮತ್ತೆ ಆರಂಭಿಸಲಾಗಿದೆ. ಇನ್ನೊಂದೆಡೆ ಬಂಡೀಪುರದಲ್ಲಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಪ್ರವಾಸಿಗರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಬೆಟ್ಟದ ತಪ್ಪಲಿನಿಂದ ಎಂದಿನಂತೆ ಕೆಎಸ್‍ಆರ್ ಟಿಸಿ ಬಸ್ ಗಳು ಸಂಚಾರ ಆರಂಭಿಸಿವೆ.
ಬಂಡೀಪುರ ಅರಣ್ಯ ಪ್ರದೇಶಕ್ಕೆ ಕಿಡಿಗೇಡಿಗಳೇ ಬೆಂಕಿ ಹಾಕಿದ್ರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಕೆಲ ಸಂಘಟನೆಗಳು ಅರಣ್ಯ ಪ್ರದೇಶಕ್ಕೆ ಬೆಂಕಿ ಹಾಕಿ ವಿದೇಶಗಳಿಂದ ಹಣ ಪಡೆಯಲು ಮುಂದಾಗಿದ್ರು ಎಂಬ ಶಂಕೆ ವ್ಯಕ್ತವಾಗಿದೆ.
ಬಿದ್ದ ಜಾಗದ ಸ್ಯಾಟಲೈಟ್ ಪಿಕ್ಚರ್ ನಲ್ಲೂ ಕೂಡ ಇದು ಮಾನವನಿರ್ಮಿತ ಎಂದು ಬಯಲಾಗಿದೆ. ಗುಂಪು ಗುಂಪುಗಳಾಗಿ ಅಲ್ಲಲ್ಲಿ ಬೆಂಕಿ ಬಿದ್ದಿರೋದು ನೋಡಿದ್ರೆ ಇದು ಮಾನವ ನಿರ್ಮಿತ, ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಿರೋದು ಎಂದು ಅರಣ್ಯ ಇಲಾಖೆಯಿಂದ ಶಂಕೆ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಬಂಡೀಪುರ ಬೆಂಕಿ ಪ್ರಕರಣವನ್ನು ಉನ್ನತ ತನಿಖೆಗಾಗಿ ಆದೇಶಿಸುವ ಸಾಧ್ಯತೆಗಳಿವೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv