ಬೆಂಗಳೂರು: ಬೆಂಗಳೂರು ಬಂದ್ (Bengaluru Bandh) ಶಾಂತಿಯುತವಾಗಿ ಆಗಿದೆ. ಬೆಂಗಳೂರು ನಾಗರಿಕರಿಗೆ ನನ್ನ ಅಭಿನಂದನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.
ಕರ್ನಾಟಕದಲ್ಲಿ (Karnataka) ಬರ ಇದ್ದಾಗಲೂ ತಮಿಳುನಾಡಿಗೆ (Tamil Nadu) ನೀರು ಹರಿಸುತ್ತಿರುವುದನ್ನು ಖಂಡಿಸಿ ರೈತ ಮುಖಂಡರು ಹಾಗೂ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಡಿಕೆಶಿ, ಪ್ರತಿಭಟನೆ ಮಾಡಲಿ. ಅವರ ಧ್ವನಿ, ಹೋರಾಟ ನಡೆಯಲಿ. ಎಲ್ಲರೂ ಸಹಕಾರ ಕೊಟ್ಟಿದ್ದಾರೆ. ಸಂಘಟನೆಯವರಿಗೆ ಅಭಿನಂದನೆಗಳು ಎಂದರು. ಇದನ್ನೂ ಓದಿ: ಅನ್ನ ಕೊಟ್ಟ ದೇವ್ರು ನೀನು ಚೆನ್ನಾಗಿರಪ್ಪ- ಸಿಎಂ ಕಂಡು ಕೈ ಮುಗಿದ ಮಹಿಳೆ
ಕಾವೇರಿ ನಿರ್ವಹಣಾ ಸಮಿತಿ (CWRC) ಸಭೆ ನಡೆಯುತ್ತಿದೆ. ಕಾವೇರಿ ಒಳಹರಿವು ಜಾಸ್ತಿ ಆಗಿದೆ. ಪ್ರಸ್ತುತ 10,000 ಕ್ಯೂಸೆಕ್ ನೀರು ಒಳಹರಿವಿದೆ. ರಾಜ್ಯದ ಹಿತಕ್ಕೆ ನಾವು ಕೆಲಸ ಮಾಡುತ್ತೇವೆ. ಅವರು 12,500 ಕ್ಯೂಸೆಕ್ ನೀರು ಕೇಳಿದ ತಕ್ಷಣ ಕೊಡಲು ಆಗಲ್ಲ. ಅದಕ್ಕೆ ಲೆಕ್ಕಾಚಾರ ಇದೆ. 5,000 ಕ್ಯೂಸೆಕ್ ನೀರು ಬಿಡಲು ಕಷ್ಟವಾಗುತ್ತಿದೆ. 12,500 ಕ್ಯೂಸೆಕ್ ನೀರು ಕೇಳಿದರೆ ಆಗಲ್ಲ. ನಮ್ಮ ಅಫಿಡವಿಟ್ ನಾವು ಹಾಕುತ್ತೇವೆ. ತಾಂತ್ರಿಕ ಸಮಿತಿ ಅದನ್ನು ಮಾಡುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಸತ್ತ ಇಲಿ ಬಾಯಲ್ಲಿಟ್ಟುಕೊಂಡು ಕಾವೇರಿ ನೀರು ಹರಿಸುವಂತೆ ತಮಿಳುನಾಡಿನ ರೈತರು ಪ್ರತಿಭಟನೆ
ಬಿಜೆಪಿ-ಜೆಡಿಎಸ್ ಕಾವೇರಿ ಹೋರಾಟದಲ್ಲಿ ಭಾಗಿಯಾಗಿರುವ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ರಾಜಕಾರಣ ಬಿಡಿ. ರಾಜ್ಯದ ಹಿತ ಕಾಪಾಡಲು ಮುಂದಾಗಲಿ ಎಂದರು. ಇದು ಸ್ಟಾಲಿನ್ ಸರ್ಕಾರ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಮಾತನಾಡಿ, ಅವರ ತಂದೆಯವರು ಏನು ಹೇಳಿದ್ದಾರೆ ಅದನ್ನು ಮೊದಲು ಅರ್ಥ ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಬರೋಬ್ಬರಿ 83 ಟಿಎಂಸಿ ನೀರಿಗೆ ಬೇಡಿಕೆ ಇಟ್ಟ ತಮಿಳುನಾಡು
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]