ಚಿಕ್ಕಮಗಳೂರು: ಯಗಚಿ ಜಲಾಶಯದ ನೀರನ್ನು ಹಾಸನಕ್ಕೆ ಹರಿಯಬಿಡ್ತಿರೋದನ್ನ ವಿರೋಧಿಸಿ ಚಿಕ್ಕಮಗಳೂರಿನ ಬಿಜೆಪಿ ಹಾಗೂ ಕನ್ನಡಪರ ಸಂಘಟನೆಗಳು ಇಂದು ಚಿಕ್ಕಮಗಳೂರು ಬಂದ್‍ಗೆ ಕರೆ ನೀಡಿವೆ.
Advertisement
ಬಂದ್‍ಗೆ ಬೆಳಗ್ಗಿನಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ವರ್ತಕರು ಕೂಡ ಸ್ವಯಂಪ್ರೇರಿತರಾಗಿ ಅಂಗಡಿ-ಮುಗ್ಗಟ್ಟುಗಳನ್ನು ಬಂದ್ ಮಾಡುವ ಮೂಲಕ ಬಂದ್‍ಗೆ ಬೆಂಬಲ ನೀಡಿವೆ. ವಿವಿಧ ಕನ್ನಡಪರ ಸಂಘಟನೆಗಳು ಚಿಕ್ಕಮಗಳೂರಿನ ವಾಹನ ಹಾಗೂ ಆಟೋಗಳನ್ನ ಬಂದ್ ಮಾಡುವಂತೆ ಮನವಿ ಮಾಡಿಕೊಂಡಿದ್ದು, ಬಹುತೇಕ ಆಟೋಗಳು ಸಂಚಾರ ಸ್ಥಗಿತಗೊಳಿಸಿವೆ. ಜನಸಾಮಾನ್ಯರು ಕೂಡ ಬಂದ್‍ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
Advertisement
Advertisement
ನಗರದ ಹನುಮಂತಪ್ಪ ವೃತ್ತದಲ್ಲಿ ಕನ್ನಡಪರ ಸಂಘಟಕರು ಉರುಳು ಸೇವೆ ಕೈಗೊಂಡಿದ್ದರು. ಕೆಎಸ್‍ಆರ್‍ಟಿಸಿ ಬಸ್ ಸ್ಟ್ಯಾಂಡ್‍ಗೆ ಮುತ್ತಿಗೆ ಹಾಕಿದ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಚಿಕ್ಕಮಗಳೂರು ಡಿಪೋ ಗಾಡಿಗಳು ರಸ್ತೆಗಿಳಿಯದಂತೆ ಆಗ್ರಹಿಸಿದ್ರು. ಇದರಿಂದ ಬಸ್ ಸ್ಟ್ಯಾಂಡ್‍ನಲ್ಲಿದ್ದ ಕೆಲ ಪ್ರಯಾಣಿಕರು ಸಂಕಷ್ಟಕ್ಕೀಡಾಗಿದ್ದಾರೆ.