ಬೆಂಗಳೂರು: ಭಾನುವಾರ ರಾತ್ರಿ ಆತ್ಮಹತ್ಯೆಗೆ ಶರಣಾದ ಬಂಡೇಮಠದ ಬಸವಲಿಂಗ ಸ್ವಾಮೀಜಿ (Basavalinga Swamiji) ಯ ಕನಸು ಕನಸಾಗಿಯೇ ಉಳಿದಿದೆ.
ಹೌದು. ಇದೇ ತಿಂಗಳ 26 ರಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ (B.S Yediyurappa) ಅವರು ಮಠಕ್ಕೆ ಆಗಮಿಸುವವರಿದ್ದರು. ವಿದ್ಯಾರ್ಥಿ ನಿಲಯ ಪ್ರಸಾದ ನಿಲಯ ಹಾಗೂ ಅತಿಥಿ ಗೃಹಗಳ ನೂತನ ಕಟ್ಟಡಕ್ಕೆ ಗುದ್ದಲಿ ಪೂಜೆ ನೆರವೇರಿಸಲಿದ್ದರು. ಗುದ್ದಲಿ ಪೂಜೆಗೆ ಬರುವುದಾಗಿ ಯಡಿಯೂರಪ್ಪ ಕೂಡ ಭರವಸೆ ನೀಡಿದ್ದರು.
Advertisement
Advertisement
ಬಸವಲಿಂಗ ಸ್ವಾಮೀಜಿ ಅಂತ್ಯಸಂಸ್ಕಾರ ಆದ ಸ್ಥಳದ ಹಿಂಭಾಗದಲ್ಲಿ ನಿರ್ಮಾಣದ ನಕ್ಷೆ ಮಾಡಲಾಗಿತ್ತು. ಒಟ್ಟಿನಲ್ಲಿ ಬಸವಲಿಂಗ ಸ್ವಾಮೀಜಿ ಮಠದ ಅಭಿವೃದ್ಧಿಗೆ ಸಾಕಷ್ಟು ಚಿಂತನೆ ಮಾಡಿದ್ದರು. ಆದರೆ ಇಂದು ಮಠದ ಆವರಣದಲ್ಲಿ ನೀರವ ಮೌನ ಆವರಿಸಿದೆ. ಸ್ವಾಮೀಜಿ ಆತ್ಮಹತ್ಯೆಯಿಂದ ಮಠದ ಭಕ್ತರು ಮಕ್ಕಳು ಕಂಗಾಲಾಗಿದ್ದಾರೆ. ಇದನ್ನೂ ಓದಿ: ಸ್ವಾಮೀಜಿ ಆತ್ಮಹತ್ಯೆ ಪ್ರಕರಣ- ಮೂರು ಪುಟಗಳ ಡೆತ್‍ನೋಟ್ ಪತ್ತೆ
Advertisement
Advertisement
ಭಾನುವಾರ ರಾತ್ರಿ ಬಂಡೇಮಠದ ಬೆಟ್ಟ (Bandemutt Hills) ದ ಮೇಲಿನ ವಿಶ್ರಾಂತಿ ನಿಲಯದಲ್ಲಿ ಮೂರು ಪುಟಗಳ ಡೆತ್ ನೋಟ್ ಬರೆದು ನಂತರ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೂರು ಪುಟಗಳ ಡೆತ್ ನೋಟ್ ಬರೆದಿದ್ದು, ಅದರಲ್ಲಿ ಕಳೆದ ಆರು ತಿಂಗಳಿನಿಂದ ಸಾಕಷ್ಟು ಖಿನ್ನತೆಗೆ ಒಳಗಾಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಶತ್ರುಗಳಿಂದ ಸಾಕಷ್ಟು ಖಿನ್ನತೆಗೆ ಒಳಗಾಗಿ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಅದನ್ನ ತಡೆಯಲು ಸಾಧ್ಯವಾಗದೆ ಆತ್ಮಹತ್ಯೆಗೆ ದಾರಿ ಎಂದು ಉಲ್ಲೇಖಿಸಲಾಗಿದೆ. ಅಲ್ಲದೆ ಯಾರು ಯಾರು ಎಂದು ಶತ್ರುಗಳು ಎಂದು ಹೆಸರು ಉಲ್ಲೇಖ ಮಾಡಿದ್ದಾರೆ. ಸದ್ಯ ಡೆತ್ ನೋಟ್ ಕುದೂರು ಪೊಲೀಸರ ಕೈ ಸೇರಿದೆ.