ಚೆನ್ನೈ: ಆನ್‍ಲೈನ್‍ನಲ್ಲಿ ಆರ್ಡರ್ ಮಾಡಿದ ನೂಡಲ್ಸ್ ನಲ್ಲಿ ಉಪಯೋಗಿಸಿದ ರಕ್ತದ ಕಲೆಗಳು ಇರುವ ಬ್ಯಾಂಡೇಜ್ ಪತ್ತೆಯಾದ ಹಿನ್ನೆಲೆಯಲ್ಲಿ ಸ್ವಿಗ್ಗಿ ಕಂಪನಿಯು ತಪ್ಪು ಮಾಡಿರುವ ರೆಸ್ಟೋರೆಂಟ್ ಹೆಸರನ್ನು ತನ್ನ ಆ್ಯಪ್‍ನಿಂದ ಅಮಾನತು ಮಾಡಿದೆ.
ಭಾನುವಾರದಂದು ಚೆನ್ನೈ ಮೂಲದ ಗ್ರಾಹಕ ಬಾಲಮುರುಘನ್ ಸ್ವಿಗ್ಗಿ ಆಪ್ ಮೂಲಕ ರೆಸ್ಟೋರೆಂಟ್‍ವೊಂದರಿಂದ ನೂಡಲ್ಸ್ ಆರ್ಡರ್ ಮಾಡಿದ್ದರು. ಆದರೆ ಅವರಿಗೆ ಕೊಟ್ಟ ನೂಡಲ್ಸ್ ನಲ್ಲಿ ರಕ್ತದ ಕಲೆಗಳು ಇದ್ದ ಬಳಕೆಯಾದ ಬ್ಯಾಂಡೇಜ್ ಪತ್ತೆಯಾಗಿತ್ತು. ಈ ವೇಳೆ ಕೋಪಗೊಂಡ ಗ್ರಾಹಕ ಆರ್ಡರ್ ಮಾಡಿದ್ದ ನೂಡಲ್ಸ್ ಫೋಟೋ ತೆಗೆದು ಸ್ವಿಗ್ಗಿ ಗ್ರಾಹಕರ ಸೇವೆಗೆ ದೂರು ನೀಡಿದ್ದಾರೆ.
Advertisement
Advertisement
ಆರ್ಡರ್ ಮಾಡಿದ್ದ ನೂಡಲ್ಸ್ ನಲ್ಲಿ ಗ್ರಾಹಕ ಅರ್ಧ ತಿಂದು ಮುಗಿಸಿ ಇನ್ನರ್ಧ ತಿನ್ನುವಾಗ ಅದರಲ್ಲಿ ಬ್ಯಾಂಡೇಜ್ ಪತ್ತೆಯಾಗಿತ್ತು. ಆಗ ಗ್ರಾಹಕ ಈ ಕುರಿತು ಸ್ವಿಗ್ಗಿ ಗ್ರಾಹಕರ ಸೇವೆಗೆ ಹಲವು ಬಾರಿ ಮೆಸೆಜ್ ಕಳುಹಿಸಿದ್ದರು. ಆದರೆ ಮೊದಲು ಈ ದೂರಿಗೆ ಸ್ವಿಗ್ಗಿ ಕಡೆಯಿಂದ ಯಾವ ಪ್ರತಿಕ್ರಿಯೆ ದೊರಕಿರಲಿಲ್ಲ. ಬಳಿಕ ನೂಡಲ್ಸ್ ನಲ್ಲಿ ಪತ್ತೆಯಾದ ಬ್ಯಾಂಡೆಜ್ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಗ್ರಾಹಕ ಶೇರ್ ಮಾಡಿದ ಬಳಿಕ ಎಚ್ಚೆತ್ತುಕೊಂಡ ಸ್ವಿಗ್ಗಿ ಕಂಪನಿ ಗ್ರಾಹಕ ಶೇರ್ ಮಾಡಿದ್ದ ಪೋಸ್ಟ್ ಗೆ ಪ್ರತಿಕ್ರಿಯಿಸಿದೆ.
Advertisement
ಬಾಲಮುರುಘನ್ ಅವರ ದೂರಿಗೆ ಪ್ರತಿಕ್ರಿಯಿಸಿದ ಸ್ವಿಗ್ಗಿ ಕಂಪನಿ ಈ ಕುರಿತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿತ್ತು. ಅದರಂತೆ ಬೇಜವಾಬ್ದಾರಿಯಿಂದ ಗ್ರಾಹಕರಿಗೆ ಆಹಾರ ಕಳುಹಿಸಿರುವ ರೆಸ್ಟೋರೆಂಟ್ ಮೇಲೆ ಸ್ವಿಗ್ಗಿ ಕ್ರಮ ತೆಗೆದುಕೊಂಡಿದೆ. ತನ್ನ ರೆಸ್ಟೋರೆಂಟ್ ಪಟ್ಟಿಯಿಂದ ಬೇಜವಾಬ್ದಾರಿ ತೋರಿದ ಆ ರೆಸ್ಟೋರೆಂಟ್ ಅನ್ನು ಅಮಾನತು ಮಾಡಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv