ನವದೆಹಲಿ: ಕೇಂದ್ರ ಬಜೆಟ್ (Union Budget 2025) ಗುಂಡಿನ ಗಾಯಗಳಿಗೆ ಬ್ಯಾಂಡೇಜ್ ನೆರವಿನಂತಿದೆ ಎಂದು ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ವ್ಯಂಗ್ಯವಾಡಿದ್ದಾರೆ.
A band-aid for bullet wounds!
Amid global uncertainty, solving our economic crisis demanded a paradigm shift.
But this government is bankrupt of ideas.
— Rahul Gandhi (@RahulGandhi) February 1, 2025
Advertisement
ಬಜೆಟ್ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ನಮ್ಮ ಆರ್ಥಿಕ ಬಿಕ್ಕಟ್ಟನ್ನು ಪರಿಹರಿಸುವ ಮಾದರಿ ಬದಲಾವಣೆಯ ಅಗತ್ಯವಿತ್ತು. ಆದರೆ ಈ ಸರ್ಕಾರ ದಿವಾಳಿಯಾಗಿದೆ. ಐಡಿಯಾಗಳ ದಿವಾಳಿತನದಿಂದ ಕೇಂದ್ರ ಬಳಲುತ್ತಿದೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಮಧ್ಯಮ ವರ್ಗಕ್ಕೆ ಮತ್ತೊಂದು ಸಿಹಿ – ಎರಡನೇ ಮನೆಗೂ ತೆರಿಗೆ ಪಾವತಿಯಿಂದ ವಿನಾಯಿತಿ
Advertisement
Advertisement
ಬಿಹಾರಕ್ಕೆ ಹಲವಾರು ಯೋಜನೆಗಳನ್ನು ಘೋಷಿಸಲಾಗಿದೆ. ಇನ್ನೂ NDAಯ ಇನ್ನೊಂದು ಆಧಾರಸ್ತಂಭವಾದ ಆಂಧ್ರಪ್ರದೇಶವನ್ನು ನಿರ್ಲಕ್ಷಿಸಲಾಗಿದೆ. ಈ ವರ್ಷದ ಕೊನೆಯಲ್ಲಿ ಬಿಹಾರದ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ, ಬಿಹಾರಕ್ಕೆ ಮಖಾನಾ ಮಂಡಳಿ ಸ್ಥಾಪನೆ, ಪಶ್ಚಿಮ ಕೋಸಿ ಕಾಲುವೆಗೆ ಆರ್ಥಿಕ ನೆರವು ಮತ್ತು ಐಐಟಿ ಕೇಂದ್ರಗಳನ್ನು ಹೆಚ್ಚಿಸಲು ಯೋಜನೆಗಳನ್ನು ಮೀಸಲಿಡಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
Advertisement
ಪ್ರಧಾನಿ ನರೇಂದ್ರ ಮೋದಿಯವರು ಬಜೆಟ್‌ನ್ನು ʻಜನರ ಬಜೆಟ್ʼ ಎಂದು ಬಣ್ಣಿಸಿದ್ದಾರೆ ಮತ್ತು ಇದು ಹೂಡಿಕೆಯನ್ನು ಹೆಚ್ಚಿಸುತ್ತದೆ ಮತ್ತು ‘ವಿಕ್ಷಿತ್ ಭಾರತ್’ (ಅಭಿವೃದ್ಧಿ ಹೊಂದಿದ ಭಾರತ) ಗೆ ದಾರಿ ಮಾಡಿಕೊಡುತ್ತದೆ ಎಂದು ಬಣ್ಣಿಸಿದ್ದಾರೆ. ಇದನ್ನೂ ಓದಿ: ಲೆಕ್ಕರಾಮಯ್ಯನವರೇ ನಿಮ್ಗೆ ಕೊಟ್ರೆ ತಿಂದು ಹಾಕ್ತೀರಾ, ಅದ್ಕೆ ಬಡವರಿಗೆ ಕೊಟ್ಟಿದ್ದಾರೆ – ಆರ್.ಅಶೋಕ್ ಲೇವಡಿ