ಝೈದ್ ಖಾನ್ (Zaid Khan) ನಟನೆಯ ಮತ್ತು ಸೋನಲ್ (Sonal) ಕಾಂಬಿನೇಷನ್ ನ ‘ಬನಾರಸ್’ ಸಿನಿಮಾ ತಂಡದಿಂದ ದಿನಕ್ಕೊಂದು ಹೊಸ ಹೊಸ ಅಚ್ಚರಿಗಳು ಎದುರುಗೊಳ್ಳುತ್ತಿವೆ. ಇದೊಂದು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ. ಹಾಗಾಗಿ ಈಗಿನಿಂದಲೇ ಬಿಡುಗಡೆಗೆ ಭರ್ಜರಿ ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತಿದೆ.
Advertisement
ನವೆಂಬರ್ 4ರಂದು ಬನಾರಸ್ (Banaras) ಸಿನಿಮಾ ದೇಶಾದ್ಯಂತ ರಿಲೀಸ್ ಆಗುತ್ತಿದ್ದು, ಸಿನಿಮಾದ ಬಗ್ಗೆ ಸಹಜವಾಗಿಯೇ ದೊಡ್ಡ ಮಟ್ಟದಲ್ಲಿ ನಿರೀಕ್ಷೆಗಳು ಮೂಡಿವೆ. ಅದಕ್ಕೆ ಕಾರಣ ಟ್ರೇಲರ್ ನಲ್ಲಿ ಕಂಡ ಅದ್ಭುತ ಪ್ರಪಂಚ. ಮಾಯಗಂಗೆ ಹಾಡಿನಲ್ಲಿ ಕಂಡ ಸುಂದರ ಕಾಶಿ. ಇದು ಯಾವ ಜಾನರಿನ ಸಿನಿಮಾ ಅಂತ ಊಹೆ ಮಾಡಿಕೊಳ್ಳುವುದಕ್ಕು ಮೊದಲೇ ನಿರ್ದೇಶಕ ಜಯತೀರ್ಥ ಅವರು ಇದು ಎಲ್ಲಾ ಜಾನರಿನ ಸಿನಿಮಾ ಎಂಬುದನ್ನು ಸ್ಪಷ್ಟ ಪಡಿಸಿದ್ದಾರೆ. ಇದೀಗ ರಿಲೀಸ್ ಗೆ ರೆಡಿಯಾಗಿರುವ ಬನಾರಸ್ ಕಡೆಯಿಂದ ಬ್ಯಾಕ್ ಟು ಬ್ಯಾಕ್ ಖುಷಿಯ ಸಂದೇಶಗಳು ರವಾನೆಯಾಗುತ್ತಿವೆ.
Advertisement
Advertisement
ಬನಾರಸ್ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ. ಐದು ಭಾಷೆಯಲ್ಲಿ ರೆಡಿಯಾಗಿರುವ ಈ ಸಿನಿಮಾವನ್ನು ದೊಡ್ಡ ದೊಡ್ಡ ಸಂಸ್ಥೆಗಳೇ ವಿತರಣೆ ಮಾಡುತ್ತಿರುವುದು ದೊಡ್ಡ ಪ್ಲಸ್ ಪಾಯಿಂಟ್ ಎಂದೇ ಹೇಳಬಹುದು. ಕರ್ನಾಟಕದಲ್ಲಿ ಡಿ ಬೀಟ್ಸ್, ಕೇರಳದಲ್ಲಿ ಮುಲಕುಪ್ಪಡಂ ಇತ್ತೀಚೆಗೆ ವಿತರಣಾ ಹಕ್ಕು ಪಡೆದ ವಿಚಾರವನ್ನು ಚಿತ್ರತಂಡ ಹಂಚಿಕೊಂಡಿತ್ತು. ಇದಾದ ಬಳಿಕ ಎಲ್ಲರ ಚಿತ್ತ ಹರಿದಿದ್ದು ಉತ್ತರ ಭಾರತದಲ್ಲಿ ಯಾರು ಹಂಚಿಕೆ ಮಾಡುತ್ತಾರೆ ಎಂಬುದರತ್ತ.
Advertisement
ಈಗಾಗಲೇ ಎರಡು ದೊಡ್ಡ ದೊಡ್ಡ ಸಂಸ್ಥೆಗಳು ಅಸ್ತು ಎಂದಾಗ ಮತ್ತೊಂದು ದೊಡ್ಡ ಸಂಸ್ಥೆಯೇ ಆಗಿರಬೇಕು ಎಂಬ ಊಹೆ ಎಲ್ಲರಲ್ಲೂ ಇತ್ತು. ಅದೀಗ ನಿಜವಾಗಿದೆ. ಉತ್ತರ ಭಾರತದಾದ್ಯಂತ ಬನಾರಸ್ ವಿತರಿಸಲು ಪನೋರಮಾ ಸ್ಟುಡಿಯೋ (Panorama Studio) ಅಸ್ತು ಎಂದಿದೆ. ಖ್ಯಾತ ನಟ ಅಜಯ್ ದೇವಗನ್ (Ajay Devgn) ಕೂಡ ಪನೋರಮಾ ಸ್ಟುಡಿಯೋದ ಪಾಲುದಾರರಾಗಿದ್ದಾರೆ. ಇದೀಗ ಇಂಥ ದೊಡ್ಡ ಸ್ಟಾರ್ ಬನಾರಸ್ ಸಿನಿಮಾ ರಿಲೀಸ್ ಮಾಡುತ್ತಿರುವುದು ಸಹಜವಾಗಿಯೇ ಮತ್ತೊಂದು ಮಗ್ಗುಲಿನಲ್ಲಿ ನಿರೀಕ್ಷೆ ದೊಡ್ಡ ಮಟ್ಟದಲ್ಲಿ ಶುರುವಾಗಿದೆ.
ಸದ್ಯ ಬನಾರಸ್ ಸಿನಿಮಾ ನವೆಂಬರ್ 4ಕ್ಕೆ ತೆರೆಗೆ ಬರಲಿದ್ದು, ಪ್ರಚಾರ ಕಾರ್ಯದಲ್ಲಿ ತಂಡ ಬ್ಯುಸಿಯಾಗಿದೆ. ಝೈದ್ ಖಾನ್ ಮೊದಲ ಬಾರಿಗೆ ನಾಯಕ ನಟನಾಗಿ ಎಂಟ್ರಿಯಾಗುತ್ತಿದ್ದು, ಸೋನಲ್ ಜೋಡಿಯಾಗಿದ್ದಾರೆ. ತಿಲಕ್ ರಾಜ್ ಬಲ್ಲಾಳ್ ಅದ್ದೂರಿಯಾಗಿ ಬನಾರಸ್ ಅನ್ನು ನಿರ್ಮಾಣ ಮಾಡಿದ್ದಾರೆ.