ಕೋಲಾರ: ಮಾತೃಪೂರ್ಣ ಯೋಜನೆಯ ಆಹಾರ ಕೇಳಿದ್ದಕ್ಕೆ ಬಾಣಂತಿಯನ್ನ ಅಂಗನವಾಡಿ ಸಹಾಯಕಿ ಹಾಗೂ ಅವರ ಕುಟುಂಬಸ್ಥರು ಹಲ್ಲೆ ಮಾಡಿರುವ ಘಟನೆ ಕೋಲಾರದಲ್ಲಿ ನಡೆದಿದೆ.
ವಡಗೂರು ಗ್ರಾಮದ ಮಮತಾ ಹಲ್ಲೆಗೊಳಗಾದ ಬಾಣಂತಿ. ಗುರುವಾರ ಮಧ್ಯಾಹ್ನ ಅಂಗನವಾಡಿ ಅಡುಗೆ ಸಹಾಯಕಿ ನಾರಾಯಣಮ್ಮಳನ್ನ ಮಮತಾ ಆಹಾರ ಪದಾರ್ಥ ನೀಡುವಂತೆ ಕೇಳಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಬಾಣಂತಿ ಮಮತಾ ಅವರನ್ನ ಅಂಗನವಾಡಿ ಸಹಾಯಕಿ ನಾರಾಯಣಮ್ಮ ಹಾಗೂ ಸಂಬಂಧಿಗಳಾದ ಸಹನಾ, ಪ್ರಮೋದ, ಹನುಮಕ್ಕ ಎಂಬುವವರು ಹಿಗ್ಗಾಮುಗ್ಗಾ ಮನಬಂದಂತೆ ಥಳಿಸಿದ್ದಾರೆ. ಇದರಿಂದ ಅಸ್ವಸ್ಥಳಾಗಿದ್ದ ಮಮತಾಳನ್ನ ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
Advertisement
ಈ ಹಿಂದೆಯೇ ಇಬ್ಬರ ಮಧ್ಯೆ ಮನಸ್ತಾಪ ಇದ್ದು, ಆಹಾರ ಪದಾರ್ಥಗಳನ್ನ ಸರಿಯಾಗಿ ವಿತರಣೆ ಮಾಡುತ್ತಿರಲಿಲ್ಲ. ಹಾಗಾಗಿ ಪ್ರಶ್ನೆ ಮಾಡುತ್ತಿದ್ದ ನನ್ನ ವಿರುದ್ಧ ಜಗಳ ತೆಗೆಯುತ್ತಿದ್ದಳು ಎಂದು ಮಮತಾ ಆರೋಪಿಸಿದ್ದಾರೆ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹಲ್ಲೆ ಕುರಿತು ಪ್ರಕರಣ ದಾಖಲಾಗಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv