ಬಾಳೆಹಣ್ಣನ್ನು ಅತ್ಯಂತ ಆರೋಗ್ಯಕರ ಹಣ್ಣೆಂದು ಪರಿಗಣಿಸಲಾಗುತ್ತದೆ. ಈ ಹಣ್ಣನ್ನು ಪ್ರತಿನಿತ್ಯ ತಿನ್ನುವುದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಇದರಲ್ಲಿರುವ ಪೋಷಕಾಂಶಗಳಿಂದ ಉತ್ತಮ ಆರೋಗ್ಯವನ್ನು ಪಡೆಯಬಹುದು. ಹಾಗಿದ್ದರೆ ಬಾಳೆಹಣ್ಣಿನಿಂದ ನಿಮ್ಮ ಆರೋಗ್ಯಕ್ಕೆ ಸಿಗುವ ಲಾಭಗಳೇನು ಎಂದು ತಿಳಿದುಕೊಳ್ಳಲು ಇಲ್ಲಿದೆ ಕೆಲವು ಮಾಹಿತಿ.
Advertisement
* ಮುಖ್ಯವಾಗಿ ಬಾಳೆ ಹಣ್ಣಿನಲ್ಲಿರುವ ಅಂಟಿ-ಅಕ್ಸಿಡೆಂಟ್‍ಗಳು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ
Advertisement
* ಬಾಳೆಹಣ್ಣಿನಲ್ಲಿ ಪೋಷಕಾಂಶಗಳು ಹೇರಳವಾಗಿವೆ. ಇದರಲ್ಲಿ ವಿಟಮಿನ್ ಎ, ಬಿ, ಬಿ 6, ಸಿ, ಕಬ್ಬಿಣ, ಕ್ಯಾಲ್ಸಿಯಂ, ಮೆಗ್ನೀಸಿಯಮ್, ರಿಬೋಫ್ಲಾವಿನ್, ನಿಯಾಸಿನ್, ಫೋಲಿಕ್ ಆಸಿಡ್ ಮತ್ತು ಪೊಟ್ಯಾಸಿಯಮ್ ಸಮೃದ್ಧವಾಗಿದೆ. ಮಹಿಳೆಯರು ವಿಶೇಷವಾಗಿ ಬಾಳೆಹಣ್ಣನ್ನು ಪ್ರತಿದಿನ ತಿನ್ನಬೇಕು. ಆಗ ಮಾತ್ರ ಅವರು ದೇಹದಲ್ಲಿರುವ ಕಬ್ಬಿಣ ಮತ್ತು ಕ್ಯಾಲ್ಸಿಯಂ ಕೊರತೆಯನ್ನು ಹೋಗಲಾಡಿಸಬಹುದು.
Advertisement
Advertisement
* ರಕ್ತಹೀನತೆಯು ದೇಹದಲ್ಲಿ ಕಬ್ಬಿಣದ ಕೊರತೆಯಿಂದ ಉಂಟಾಗುತ್ತದೆ. ಬಾಳೆಹಣ್ಣಿನಲ್ಲಿ ಕಬ್ಬಿಣಾಂಶ ಅಧಿಕವಾಗಿದೆ. ಪ್ರತಿದಿನ ಬಾಳೆಹಣ್ಣನ್ನು ತಿನ್ನುವುದರಿಂದ ದೇಹದಲ್ಲಿ ರಕ್ತದ ಕೊರತೆ ಕಡಿಮೆಯಾಗುತ್ತದೆ. ಇದು ರಕ್ತಹೀನತೆಗೆ ಕಾರಣವಾಗಬಹುದಾದ ಅಂಶಗಳನ್ನು ದೂರ ಮಾಡುತ್ತದೆ.
* ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹೃದಯಾಘಾತ, ಪಾಶ್ರ್ವವಾಯು, ಹೃದ್ರೋಗದಿಂದ ಬಾಳೆಹಣ್ಣು ಮುಕ್ತಿ ನೀಡುತ್ತದೆ.
* ಬಾಳೆಹಣ್ಣಿನಲ್ಲಿ ವಿಟಮಿನ್-ಬಿ 6 ಸಮೃದ್ಧವಾಗಿದೆ. ಇದು ಮೆದುಳಿನ ಕಾರ್ಯವನ್ನು ಸುಧಾರಿಸಲು ಕೆಲಸ ಮಾಡುತ್ತದೆ. ಅಲ್ಲದೆ ಇದರಲ್ಲಿರುವ ಪ್ರೋಟೀನ್ ಮೆದುಳನ್ನು ಸಡಿಲಗೊಳಿಸುತ್ತದೆ. ಬಾಳೆಹಣ್ಣಿನಲ್ಲಿರುವ ಮೆಗ್ನೀಸಿಯಮ್ ನರಮಂಡಲದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.
* ಈ ಹಣ್ಣಿನಲ್ಲಿ ಹೆಚ್ಚಿನ ಫೈಬರ್ ಅಂಶವಿರುವುದರಿಂದ ಬೌಲ್ ಮೂವ್‍ಮೆಂಟ್ ಮತ್ತು ಮಲಬದ್ದತೆ ಸಮಸ್ಯೆಗೆ ಸಹಾಯ ಮಾಡುತ್ತದೆ.
* ಬಾಳೆಹಣ್ಣನ್ನು ಪ್ರತಿನಿತ್ಯ ತಿನ್ನುವುದರಿಂದ ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಬಹುದು. ಹಾಗೆಯೇ ಬಿಪಿ ನಿಯಂತ್ರಣದಲ್ಲಿರುತ್ತದೆ.