ಬಾಳೆಕಾಯಿ ತಿನ್ನುವುದರಿಂದ ನಮ್ಮ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ಇದು ಪೌಷ್ಟಿಕಾಂಶವನ್ನು ಹೊಂದಿದ್ದು, ಜೀರ್ಣಕ್ರಿಯೆಯಲ್ಲಿ ಪ್ರಮುಖ ಪಾತ್ರವನ್ನು ಹೊಂದಿದೆ. ಅಷ್ಟು ಮಾತ್ರವಲ್ಲದೇ ಇದು ಕಿಡ್ನಿ ಸಮಸ್ಯೆಯನ್ನು ದೂರ ಮಾಡಿ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ಬಾಳೆಕಾಯಿಯನ್ನು ನಮ್ಮ ನಿತ್ಯದ ಆಹಾರದಲ್ಲಿ ಹೆಚ್ಚೆಚ್ಚು ಬಳಸುವುದು ಉತ್ತಮ. ಇವತ್ತಿನ ನಮ್ಮ ರೆಸಿಪಿಯಲ್ಲಿ ಬನಾನ ಕಟ್ಲೆಟ್ ಹೇಗೆ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತೇವೆ. ಹಾಗಿದ್ರೆ ಇದನ್ನು ಯಾವ ರೀತಿ ತಯಾರಿಸಬಹುದು ಎಂಬುದನ್ನು ತಿಳಿದುಕೊಳ್ಳೋಣ. ಇದನ್ನೂ ಓದಿ: ಚಾಕ್ಲೇಟ್, ಕುಂಬಳಕಾಯಿ ಕಾಂಬಿನೇಷನ್‌ನಲ್ಲಿ ಮಾಡಿ ರುಚಿಕರ ಪ್ಯಾನ್‌ಕೇಕ್
Advertisement
ಬೇಕಾಗುವ ಸಾಮಗ್ರಿಗಳು:
ಬಾಳೆಕಾಯಿ – 6
ಜೋಳದ ಹಿಟ್ಟು- 2 ಚಮಚ
ಹಸಿರು ಮೆಣಸಿನಕಾಯಿ – ಅಗತ್ಯಕ್ಕೆ ತಕ್ಕಷ್ಟು
ಅಚ್ಚಖಾರದ ಪುಡಿ – 1 ಚಮಚ
ಅರಶಿಣ ಪುಡಿ – ಅರ್ಧ ಚಮಚ
ಕೊತ್ತಂಬರಿ ಪೌಡರ್ – ಅರ್ಧ ಚಮಚ
ಗರಂ ಮಸಾಲ – ಅರ್ಧ ಚಮಚ
ಪೆಪ್ಪರ್ ಪೌಡರ್- ಅರ್ಧ ಚಮಚ
ನಿಂಬೆ ರಸ – 1 ಚಮಚ
ಸಾಸಿವೆ – ಅರ್ಧ ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ಅಗತ್ಯಕ್ಕೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು – ಸ್ವಲ್ಪ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಒಂದು ಪ್ಯಾನ್ ಅಲ್ಲಿ ಸ್ವಲ್ಪ ನೀರನ್ನು ಬಿಸಿಗಿಟ್ಟು, ಕಾದ ಬಳಿಕ ಅದಕ್ಕೆ ಬಾಳೆಕಾಯಿಯನ್ನು ಹಾಕಿ ಬೇಯಲು ಬಿಡಿ.
* ಬಾಳೆಕಾಯಿ ಸರಿಯಾಗಿ ಬೆಂದ ಬಳಿಕ ಅದನ್ನು ಬಿಸಿ ನೀರಿನಿಂದ ಅದನ್ನು ಹೊರತೆಗೆದು ಆರಲು ಬಿಡಿ. ನಂತರ ಅದರ ಸಿಪ್ಪೆ ಬಿಡಿಸಿಕೊಂಡು ಬಾಳೆಕಾಯಿಯನ್ನು ಚನ್ನಾಗಿ ಪುಡಿ ಮಾಡಿಕೊಳ್ಳಿ.
* ಬಳಿಕ ಒಂದು ಬೌಲ್‌ಗೆ ಅಚ್ಚಖಾರದ ಪೌಡರ್, ಜೋಳದ ಹಿಟ್ಟು, ನಿಂಬೆರಸ, ಕೊತ್ತಂಬರಿ ಪೌಡರ್, ಸಾಸಿವೆ, ರುಚಿಗೆ ತಕ್ಕಷ್ಟು ಉಪ್ಪು, ಕೊತ್ತಂಬರಿ ಸೊಪ್ಪು ಮತ್ತು ಗರಂ ಮಸಾಲವನ್ನು ಹಾಕಿಕೊಳ್ಳಿ.
* ಈಗ ಇದಕ್ಕೆ ಬೇಯಿಸಿ ಪುಡಿ ಮಾಡಿದ್ದ ಬಾಳೆಕಾಯಿಯನ್ನು ಸೇರಿಸಿಕೊಂಡು ಚನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಬಳಿಕ ಸ್ವಲ್ಪ ಸ್ವಲ್ಪ ಮಿಶ್ರಣವನ್ನು ತೆಗೆದುಕೊಂಡು ಅದಕ್ಕೆ ಕಟ್ಲೆಟ್ ರೂಪವನ್ನು ನೀಡಿ.
* ಈಗ ಒಂದು ಪ್ಯಾನ್ ಅಲ್ಲಿ ಸ್ವಲ್ಪ ಎಣ್ಣೆಯನ್ನು ಹಾಕಿ ಬಿಸಿಗಿಡಿ. ಎಣ್ಣೆ ಕಾದ ಬಳಿಕ ಅದಕ್ಕೆ ಕಟ್ಲೆಟ್ ಅನ್ನು ಹಾಕಿಕೊಂಡು ಗೋಲ್ಡನ್ ಬಣ್ಣ ಬರುವವರೆಗೆ ಚನ್ನಾಗಿ ಫ್ರೈ ಮಾಡಿಕೊಳ್ಳಿ.
* ಹೀಗೇ ಎರಡೂ ಬದಿ ಚನ್ನಾಗಿ ಫ್ರೈ ಮಾಡಿದ ಬಳಿಕ ಅದನ್ನು ಸರ್ವಿಂಗ್ ಪ್ಲೇಟ್‌ಗೆ ಹಾಕಿ ಸಾಸ್ ಅಥವಾ ಗ್ರೀನ್ ಚಟ್ನಿಯೊಂದಿಗೆ ಬಿಸಿ ಬಿಸಿಯಾಗಿ ಸರ್ವ್ ಮಾಡಿ. ಇದನ್ನೂ ಓದಿ: ಆರೋಗ್ಯಕರ ಪಾಲಕ್ ದಾಲ್ ಕಿಚಡಿ ರೆಸಿಪಿ ನಿಮಗಾಗಿ..
Advertisement
Web Stories