ಚಿತ್ರದುರ್ಗ: ಇಷ್ಟಾರ್ಥ ಸಿದ್ಧಿಗಾಗಿ ರಥೋತ್ಸವಕ್ಕೆ ಬಾಳೆಹಣ್ಣು ಎಸೆದು ಹರಕೆ ಸಲ್ಲಿಸುವ ಭಕ್ತರ ಬಗ್ಗೆ ಕೇಳಿದ್ದೇವೆ. ಆದರೆ ಮಹಾಮಾರಿ ಕೊರೊನಾ ವೈರಸ್ ದೇಶಾದ್ಯಂತ ಜನರನ್ನು ಆತಂಕಕ್ಕೀಡು ಮಾಡಿದೆ. ಆದ್ದರಿಂದ ಜಿಲ್ಲೆಯ ಯುವಕನೊಬ್ಬ ಕೊರೊನಾ ವೈರಸ್ ಭಾರತ ಬಿಟ್ಟು ತೊಲಗು ಎಂದು ಬಾಳೆಹಣ್ಣಿನ ಮೇಲೆ ಬರೆದು, ಅದೇ ಬಾಳೆ ಹಣ್ಣನ್ನು ತೇರಿಗೆ ಎಸೆಯುವ ಮೂಲಕ ದೇವರ ಮೊರೆ ಹೋಗಿದ್ದಾನೆ.
ಪ್ರದೀಪ್ ಕೊರೊನಾ ವೈರಸ್ ಭಾರತ ಬಿಟ್ಟು ತೊಲಗು ಎಂದು ಬಾಳೆಹಣ್ಣಿನ ಮೇಲೆ ಬರೆದು ತೇರಿಗೆ ಎಸೆದಿದ್ದಾನೆ. ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಎನ್.ಜಿ.ಹಳ್ಳಿಯಲ್ಲಿ ಶನಿವಾರ ಶ್ರೀ ಮುತ್ತಿನ ಕುಮಾರಿ ದೇವಿ ಜಾತ್ರೆ ನಡೆದಿದೆ. ಜಾತ್ರೆಯಲ್ಲಿ ತಮ್ಮ ಇಷ್ಟಾರ್ಥ ನೆರವೇರಲಿ ಎಂದು ರಥೋತ್ಸವಕ್ಕೆ ಬಾಳೆಹಣ್ಣು ಎಸೆದು ಹರಕೆ ಸಲ್ಲಿಸುತ್ತಾರೆ.
Advertisement
Advertisement
ಆದರೆ ಇದೇ ಗ್ರಾಮದ ಪ್ರದೀಪ್ ಕೊರೊನಾ ವೈರಸ್ ಭಾರತ ಬಿಟ್ಟು ತೊಲಗು ಎಂದು ಬಾಳೆಹಣ್ಣಿನ ಮೇಲೆ ಬರೆದಿದ್ದಾನೆ. ನಂತರ ಅದನ್ನು ತೇರಿಗೆ ಎಸೆಯುವ ಮೂಲಕ ದೇವರನ್ನು ಪ್ರಾರ್ಥಿಸಿದ್ದಾನೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
Advertisement
ಈಗಾಗಲೇ ಅನೇಕ ಜಿಲ್ಲೆಗಳಲ್ಲೂ ಸೋಂಕಿನ ಪ್ರಕರಣಗಳು ಕಂಡು ಬಂದಿದೆ. ಹೀಗಾಗಿ ರಾಜ್ಯದ ಜನತೆಯನ್ನು ಕೊರೊನಾ ವೈರಸ್ ಬಾರಿ ಆತಂಕಕ್ಕೀಡು ಮಾಡಿದೆ. ಆದ್ದರಿಂದ ಅನೇಕರು ಪೂಜೆ ಹಾಗೂ ಯಜ್ಞ ಯಾಗಾದಿಗಳನ್ನು ಮಾಡುತ್ತಿದ್ದಾರೆ.