ಎದೆ ಹಿಡಿದುಕೊಂಡು ಮೈದಾನದಲ್ಲೇ ಕುಸಿದು ಬಿದ್ದ ಲಂಕಾ ಕ್ರಿಕೆಟಿಗ

ಢಾಕಾ: ಬಾಂಗ್ಲಾದೇಶದ ಶೇರ್-ಎ-ಬಾಂಗ್ಲಾ ಸ್ಟೇಡಿಯಂನಲ್ಲಿ ಬಾಂಗ್ಲಾದೇಶದ ವಿರುದ್ಧ ನಡೆಯುತ್ತಿರುವ 2ನೇ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ವೇಳೆ ಶ್ರೀಲಂಕಾ ಕ್ರಿಕೆಟಿಗ ಕುಶಲ್ ಮೆಂಡಿಸ್ ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದು, ಮೈದಾನದಲ್ಲೇ ಎದೆ ಹಿಡಿದುಕೊಂಡು ಕುಸಿದು ಬಿದ್ದಿದ್ದಾರೆ.
ಭೋಜನ ವಿರಾಮಕ್ಕೆ ಮುನ್ನ ಕೊನೆಯ ಓವರ್‌ನಲ್ಲಿ ಮೆಂಡಿಸ್‌ಗೆ ಅನಾರೋಗ್ಯ ಕಾಣಿಸಿಕೊಂಡಿದ್ದು ಕುಸಿದಿದ್ದಾರೆ. ಕೂಡಲೇ ಅವರನ್ನು ವೈದ್ಯಕೀಯ ಸಿಬ್ಬಂದಿ ಪರೀಕ್ಷಿಸಿದೆ. ಬಳಿಕ ಎದೆ ಹಿಡಿದುಕೊಂಡೇ ಅವರು ಹೊರಗೆ ತೆರಳಿದ್ದಾರೆ. ಮೆಂಡೀಸ್ ಅವರನ್ನು ಹೆಚ್ಚಿನ ತಪಾಸಣೆಗೆ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ವೈದ್ಯ ಹೊಸೈನ್ ಚೌಧರಿ ತಿಳಿಸಿದ್ದಾರೆ. ಇದನ್ನೂ ಓದಿ: ಪಂದ್ಯವಾಡದೇ ಆರ್‌ಸಿಬಿ ಮನೆಗೆ ಬರುತ್ತಾ?
Kusal Mendis left the field holding his chest and has been hospitalized in Dhaka. Hope he's ok!!!#BANvSL pic.twitter.com/1C5lmJbV93
— Rahul Choudhary (@Rahulc7official) May 23, 2022
ಮೆಂಡಿಸ್ ಅವರಿಗೆ ನಿರ್ಜಲೀಕರಣ (ನೀರಿನಾಂಶ ಕೊರತೆ) ಸಮಸ್ಯೆಯಿತ್ತು. ಅದೇ ಅವರ ಅನಾರೋಗ್ಯಕ್ಕೆ ಕಾರಣವಾಗಿರಬಹುದು. ವೈದ್ಯಕೀಯ ಪರೀಕ್ಷೆ ಮುಗಿದ ಬಳಿಕ ಸ್ಪಷ್ಟ ಮಾಹಿತಿ ನೀಡಲಾಗುವುದು ಎಂದು ಬಿಸಿಬಿ ವೈದ್ಯ ಮಂಜೂರ್ ಹೊಸೈನ್ ಚೌಧರಿ ತಿಳಿಸಿದ್ದಾರೆ. ಇದನ್ನೂ ಓದಿ: ಪಂದ್ಯ ಗೆದ್ದು IPL ಸೀಸನ್‌ಗೆ ಗುಡ್‌ಬೈ ಹೇಳಿದ ಮುಂಬೈ- ಸೋಲಿಗೆ ಕಾರಣ ಬಿಚ್ಚಿಟ್ಟ ರಿಷಭ್ ಪಂತ್
ಕುಶಲ್ ಮೆಂಡಿಸ್ ಸ್ಥಾನಕ್ಕೆ ಕಮಿಂದು ಮೆಂಡಿಸ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಮೆಂಡಿಸ್ ಮೊದಲ ಟೆಸ್ಟ್ ಪಂದ್ಯದಲ್ಲಿ ಅರ್ಧಶತಕ ದಾಖಲಿಸಿದ್ದರು. 2ನೇ ಟೆಸ್ಟ್ ಪಂದ್ಯದಲ್ಲಿ 48 ರನ್‌ಗಳಿಸಿದ್ದರು. ಎದೆನೋವು ಕಾಣಿಸಿಕೊಂಡ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.