ಪ್ರಭಾಸ್ (Prabhas) ಅಭಿನಯದ ಆದಿ ಪುರುಷ (Adi Purush)ಸಿನಿಮಾ ಬ್ಯಾನ್ ಮಾಡುವಂತೆ ಹಿಂದೂ ಪರ ಸಂಘಟನೆಗಳು ದೆಹಲಿ ಹೈಕೋರ್ಟ್ (Delhi High Court) ಮೆಟ್ಟಿಲು ಏರಿದ್ದವು. ಬ್ಯಾನ್ ಕುರಿತಾಗಿ ತುರ್ತು ಕ್ರಮ ತಗೆದುಕೊಳ್ಳುವಂತೆ ನ್ಯಾಯಾಲಯಕ್ಕೆ ಅವು ಮನವಿ ಮಾಡಿದ್ದವು. ನಿನ್ನೆ ವಿಚಾರಣೆ ನಡೆಸಿದ ನ್ಯಾಯಾಲಯವು ಜೂ 30ಕ್ಕೆ ಬರುವಂತೆ ಹೇಳಿ ವಿಚಾರಣೆಯನ್ನು ಮುಂದೂಡಿತು.
Advertisement
ಆದಿ ಪುರುಷ ಸಿನಿಮಾದಲ್ಲಿ ಹಿಂದೂಗಳ ಭಾವನೆಗೆ ಧಕ್ಕೆ ಆಗುವಂತಹ ಸಾಕಷ್ಟು ಅಂಶಗಳು ಇವೆ. ಈಗಾಗಲೇ ನೇಪಾಳ ಸರಕಾರ ಸಿನಿಮಾವನ್ನು ಬ್ಯಾನ್ (Ban) ಮಾಡಿದೆ. ಭಾರತದಲ್ಲೂ ಈ ಚಿತ್ರ ಬ್ಯಾನ್ ಆಗಲಿ ಎಂದು ಹಿಂದೂ ಪರ ಸಂಘಟನೆಯ ಅಧ್ಯಕ್ಷ ವಿಷ್ಣು ಗುಪ್ತಾ (Vishnu Gupta) ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಕೂಡಲೇ ಅರ್ಜಿಯನ್ನು ಕೈಗೆತ್ತಿಕೊಳ್ಳಬೇಕು ಎಂದು ಅವರು ಮನವಿ ಕೂಡ ಮಾಡಿದ್ದರು.
Advertisement
Advertisement
ನಿನ್ನೆ ಅರ್ಜಿಯ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯವು, ‘ಈಗಾಗಲೇ ಸಿನಿಮಾ ರಿಲೀಸ್ ಆಗಿದೆ. ಆತುರದಲ್ಲಿ ವಿಚಾರಣೆಯನ್ನು ಮಾಡಲು ಸಾಧ್ಯವಿಲ್ಲ. ಜೂ.30ರಂದು ವಿಚಾರಣೆ ನಡೆಸಲಾಗುವುದು ಎಂದು ವಿಷ್ಣು ಗುಪ್ತಾ ಪರ ವಕೀಲರಿಗೆ ನ್ಯಾಯಾಲಯ ತಿಳಿಸಿತು. ಅಲ್ಲಿಗೆ ಚಿತ್ರತಂಡಕ್ಕೆ ಎಂಟು ದಿನಗಳ ಕಾಲ ಬಿಗ್ ರಿಲೀಫ್ ಸಿಕ್ಕಂತಾಯಿತು.
Advertisement
ಒಂದು ಕಡೆ ಕಾನೂನು ಸಮರ ನಡೆದಿದ್ದರೆ ಮತ್ತೊಂದು ಕಡೆ ಆದಿ ಪುರುಷ ಸಿನಿಮಾದ ಡೈಲಾಗ್ ರೈಟರ್ ಮನೋಜ್ ಮುಂತಶೀರ್ (Manoj Mantashir) ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ‘ಹನುಮಾನ್ (Hanuman) ದೇವರೇ ಅಲ್ಲ’ ಎಂದು ಹೇಳುವ ಮೂಲಕ ಉರಿವ ಬೆಂಕಿಗೆ ತುಪ್ಪ ಸುರಿದ್ದಾರೆ. ಆದಿಪುರುಷ ಸಿನಿಮಾದಲ್ಲಿ ಹಿಂದೂ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಈಗಾಗಲೇ ಹಿಂದೂಪರ ಸಂಘಟನೆಗಳು ವಿರೋಧ ವ್ಯಕ್ತ ಪಡಿಸುತ್ತಿವೆ. ಈ ನಡುವೆ ಹನುಮಾನ್ ದೇವರೇ ಅಲ್ಲ ಅನ್ನುವ ಮಾತು ಮತ್ತೆ ವಿವಾದಕ್ಕೆ (Controversy) ಕಾರಣವಾಗಿದೆ. ಇದನ್ನೂ ಓದಿ:ಲೈಂಗಿಕ ಕಿರುಕುಳ ಆರೋಪ: ಧಾರಾವಾಹಿ ನಿರ್ಮಾಪಕನ ಮೇಲೆ ಎಫ್.ಐ.ಆರ್ ದಾಖಲು
ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು ‘ಹನುಮಾನ್ ದೇವರಲ್ಲ. ಭಜರಂಗಿಯನ್ನು ನಾವು ದೇವರು ಮಾಡಿದ್ದೇವೆಯಷ್ಟೆ. ಹನುಮ ರಾಮನ ಭಕ್ತ. ರಾಮನ ಭಕ್ತ ದೇವರು ಹೇಗೆ ಆಗುತ್ತಾನೆ. ರಾಮನನ್ನು ಪೂಜಿಸುತ್ತೇವೆ ಎನ್ನುವ ಕಾರಣಕ್ಕಾಗಿ ಹನುಮನನ್ನೂ ಪೂಜಿಸುತ್ತೇವೆ ಎಂದು ಹೇಳಿದ್ದಾರೆ. ಈ ಮಾತೇ ಅವರಿಗೆ ಮುಳುವಾಗಿದೆ.
ಆದಿಪುರುಷ (Adipurush) ಸಿನಿಮಾದ ಬಗ್ಗೆ ದಿನಕ್ಕೊಂದು ಹೇಳಿಕೆ ಕೊಡುತ್ತಿರುವ ಮನೋಜ್ ಅವರಿಗೆ ಜೀವ ಬೆದರಿಕೆ ಇದೆ ಎನ್ನುವ ಕಾರಣಕ್ಕಾಗಿ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ. ಈ ಭದ್ರತೆಯ ನಡುವೆಯೂ ಅವರು ಮತ್ತೆ ಮತ್ತೆ ವಿವಾದಾತ್ಮಕ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಇದು ಚಿತ್ರತಂಡಕ್ಕೆ ನುಂಗಲಾರದ ತುತ್ತಾಗಿದೆ.