ಮೊದಲು ಕರ್ನಾಟಕದಲ್ಲಿ ಮದರಸಾವನ್ನು ಬ್ಯಾನ್ ಮಾಡಿ: ಪ್ರಮೋದ್ ಮುತಾಲಿಕ್

Public TV
1 Min Read
Pramod Muthalik 4

ಮೈಸೂರು: ಮದರಸಾಗಳಲ್ಲಿ ಅಪ್ರಾಪ್ತರಿಗೆ ಕೊಲೆಯ ತರಬೇತಿ ನೀಡಲಾಗುತ್ತಿದೆ. ಹಾಗಾಗಿ ಮೊದಲು ಕರ್ನಾಟಕ ಸರ್ಕಾರ ಮದರಾಸ ಬ್ಯಾನ್ ಮಾಡಿ  ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ಹಿಂದೂ ಮುಖಂಡರ ಹತ್ಯೆಯ ಪ್ಲಾನ್ ವಿಚಾರದ ಬಗ್ಗೆ ಮೈಸೂರಿನಲ್ಲಿ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಮುಸ್ಲಿಮರ ಅಬ್ಬರ ಅಟ್ಟಹಾಸ ಹೆಚ್ಚಾಗತ್ತಿದೆ. ಕೊಲೆ, ಗಲಾಟೆ ಮಾಡುತ್ತಿರುವವರು ಹಿಂದೂಗಳಲ್ಲ.  ಮೈಸೂರಿನ ‘ಕವಲಂದೆಯಲ್ಲಿ ಛೋಟಾ ಪಾಕಿಸ್ತಾನ್ ಅಂತ ಘೋಷಣೆ ಕೂಗಿದ್ದು, ಹುಬ್ಬಳ್ಳಿಯಲ್ಲಿ ದೇವಾಲಯದ ಮೇಲೆ ಕಲ್ಲೂತೂರಾಟ ನಡೆಸಿ ಹಲ್ಲೆ ನಡೆಸಿದ್ದೂ ಹಿಂದೂಗಳಲ್ಲ. ಹಿಂದೂಗಳಿಂದ ಯಾವುದೇ ತೊಂದರೆಯಾಗುತ್ತಿಲ್ಲ. ಆದರೆ ನೀವು ದೇಶದ್ರೋಹಿ, ಸಮಾಜ ಕಂಟಕ, ಕಾನೂನು ಬಾಹಿರ ಚಟುವಟಿಕೆಗಳನ್ನು ಮಾಡುತ್ತಿದ್ದೀರಾ. ಹಾಗಾಗಿ ನೀವು ಮಾಡುತ್ತಿರುವ ಕುತಂತ್ರ, ಅಟ್ಟಹಾಸದಿಂದ ಹಿಂದೂಗಳು ಎಚ್ಚರಗೊಂಡು ಇದಕ್ಕೆ ಪ್ರತಿಕ್ರಿಯಿಸಬೇಕಾಗುತ್ತದೆ. ಇಲ್ಲಿಯವರೆಗೂ ಯಾವುದೇ ಹಿಂದೂ ಅಶಾಂತಿಯನ್ನು ಸೃಷ್ಟಿಸುವಂತಹ ಯಾವುದೇ ಕೆಲಸಗಳನ್ನು ಮಾಡಿಲ್ಲ, ಮಾಡುವುದು ಇಲ್ಲ ಎಂದಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಗಲಭೆ ಸೃಷ್ಟಿಸಲು ಪೆಟ್ರೋಲ್ ಬಾಂಬ್ ಸಂಗ್ರಹಿಸಿದ್ದ ಮೂವರು ಅರೆಸ್ಟ್

ASSAM MADARASA MADRASA

ಮದರಸಾಗಳಲ್ಲಿ ಅಪ್ರಾಪ್ತರಿಗೆ ಕೊಲೆಯ ತರಬೇತಿ ನೀಡಲಾಗುತ್ತಿದೆ. ಹಾಗಾಗಿ ಮೊದಲು ಕರ್ನಾಟಕ ಸರ್ಕಾರ ಮದರಸಾ ಬ್ಯಾನ್ ಮಾಡಿ. ಪಾಕಿಸ್ತಾನದಲ್ಲಿಯೇ ಮದರಸಾಗಳನ್ನು ಬ್ಯಾನ್ ಮಾಡಲಾಗಿದೆ. ಅಲ್ಲಿಯ ಉಪಟಳವನ್ನು ತಡೆಯಲಾಗದೇ ಪಾಕಿಸ್ತಾನದಲ್ಲಿಯೇ ಮದರಸಾಗಳನ್ನು ಬ್ಯಾನ್ ಮಾಡಬೇಕಾದರೆ, ನಮ್ಮ ದೇಶದಲ್ಲಿ ಕೂಡ ಮದರಸಾಗಳನ್ನು ಬ್ಯಾನ್ ಮಾಡಬೇಕೆಂದು ನಾನು ಕರ್ನಾಟಕದ ಮುಖ್ಯಮಂತ್ರಿ ಹಾಗೂ ಗೃಹ ಮಂತ್ರಿಗಳಿಗೆ ಮನವಿ ಮಾಡಿಕೊಳ್ಳುತ್ತೇನೆ. ಇದನ್ನೂ ಓದಿ: ಅಂಗವಿಕಲ ಮಗುವಿಗೆ ಬೋರ್ಡಿಂಗ್ ನಿರಾಕರಿಸಿದ ವಿಮಾನ ನಿಲ್ದಾಣ ಸಿಬ್ಬಂದಿ – ವೀಡಿಯೋ ವೈರಲ್‌

Share This Article