ಧಾರವಾಡ: ಭೋಗಸ್ ಬೋರ್ಡ್ ಆಗಿರುವ ವಕ್ಫ್ ಬೋರ್ಡ್ ಅನ್ನು ರದ್ದು ಮಾಡಬೇಕು. ಮೊದಲು ಮದರಸಾಗಳಲ್ಲಿ ಓದುತ್ತಿರುವವರನ್ನು ಹೊರಗಾಕಬೇಕು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ.
Advertisement
ಜಾಮಿಯಾ ಮಸೀದಿಯಲ್ಲಿ ಪುಸ್ತಕ ಪತ್ತೆಯಾಗಿರುವ ಸಂಬಂಧ ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಕ್ಫ್ ಬೋರ್ಡ್ ಅನ್ನು ರದ್ದು ಮಾಡಿ, ಮಸೀದಿಯನ್ನ ತೆರವುಗೊಳಿಸಬೇಕು. ಪ್ರತಿ ಶನಿವಾರ ಅಲ್ಲಿ ಆಂಜನೇಯ ದೇವರ ಪೂಜೆಗೆ ಅವಕಾಶ ಕೊಡಬೇಕು. ದಾಖಲೆ ಸಮೇತ ಅವರನ್ನ ಹೊರಗೆ ಹಾಕಬೇಕು ಅನ್ನೋದೇ ನಮ್ಮ ಬೇಡಿಕೆ ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಶ್ರೀರಂಗಪಟ್ಟಣ ಜಾಮಿಯಾ ವಿವಾದಕ್ಕೆ ಪುಸ್ತಕದಿಂದ ಟ್ವಿಸ್ಟ್ – ಅರ್ಚಕರ ಕೈ ಕತ್ತರಿಸಿ ಕಾವೇರಿಗೆ ವಿಗ್ರಹ ಎಸೆಯಲಾಗಿತ್ತು!
Advertisement
Advertisement
ಅಲ್ಲದೆ ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ದೇವಸ್ಥಾನ ಅನ್ನೋ ದಾಖಲೆ ಹೊರಬಿದ್ದಿದೆ. ಅದು ದೇವಸ್ಥಾನ ಅನ್ನೋದಕ್ಕೆ ಸಾಕ್ಷಿಯಾಗಿ ದಾಖಲೆ ದೊರೆತಿದೆ. ಅಲ್ಲಿ ನಾಗರ ಚಿಹ್ನೆ, ಕಲ್ಯಾಣಿ, ಗರುಡ ಚಿಹ್ನೆಯೂ ಇದೆ. ಅದರ ಜೊತೆಗೆ ಟಿಪ್ಪು ಸುಲ್ತಾನನೇ ಕೆಡವಿದ್ದು ಅನ್ನೋದಕ್ಕೆ ಮತ್ತೊಂದು ಪೂರಕ ದಾಖಲೆ ಸಿಕ್ಕಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪಠ್ಯ ಪರಿಷ್ಕರಣೆ ನೆಪದಲ್ಲಿ ಬಿಜೆಪಿ ಸರ್ಕಾರದಿಂದ ಸಾಂಸ್ಕೃತಿಕ ಅತ್ಯಾಚಾರ: ಡಿಕೆಶಿ
Advertisement
ಮೂಡಲ ಆಂಜನೇಯ ದೇವಸ್ಥಾನದ `ಸುಪ್ರಭಾತ’ ಅನ್ನೋ ಪುಸ್ತಕ ಈಗ ಪತ್ತೆಯಾಗಿದೆ. ಅದರಲ್ಲಿ ಎಲ್ಲ ಮಾಹಿತಿಯೂ ದಾಖಲಾಗಿದೆ. 70 ವರ್ಷಗಳ ಹಿಂದೆ ಪ್ರಕಟವಾದ ಈ ಪುಸ್ತಕದಲ್ಲಿ ಆಂಜನೇಯ ದೇವಸ್ಥಾನದ ಚಿತ್ರ ಇದೆ. ಅಲ್ಲದೆ ದೇವಸ್ಥಾನದಿಂದ ನಾರಾಯಣ ಮೂರ್ತಿ ಎನ್ನುವವರ ಕೈ ಕತ್ತರಿಸಿ, ಅಲ್ಲಿದ್ದ ಮೂರ್ತಿಯನ್ನ ನೀರಿನ ಗುಂಡಿಯಲ್ಲಿ ಎಸೆದಿದ್ದಾರೆ. ಇದೆಲ್ಲವೂ ದಾಖಲೆಯಾಗಿದೆ ಮತ್ತೇನು ಬೇಕು. ಈ ದಾಖಲೆಗಳನ್ನೇ ಆಧಾರವಾಗಿಟ್ಟುಕೊಂಡು ಪರಿಶೀಲನೆ ಮಾಡಬೇಕು ಎಂದು ಮುತಾಲಿಕ್ ಒತ್ತಾಯಿಸಿದ್ದಾರೆ.
ಟಿಪ್ಪು ಸುಲ್ತಾನ್ 7 ಕೊಪ್ಪರಿಗೆ ಚಿನ್ನಾಭರಣ ಕದ್ದು ಅದರಿಂದಲೇ ಮಸೀದಿ ಕಟ್ಟಿದ್ದಾನೆ. ವಿಜಯನಗರದ ತಿಮ್ಮಣ್ಣ ನಾಯಕ ಅದನ್ನ ಕಟ್ಟಿದ ಅನ್ನೋ ಉಲ್ಲೇಖ ಇದೆ ಎಂದು ಹೇಳಿದ್ದಾರೆ.