ಆನ್‌ಲೈನ್ ಬೆಟ್ಟಿಂಗ್ ಆಪ್‌ ನಿಷೇಧಿಸಿ – ಮೋದಿಗೆ ಇಳಕಲ್ ಸೀರೆಯಲ್ಲಿ ನೇಯ್ಗೆ ಮಾಡಿ ನೇಕಾರನ ಮನವಿ

Public TV
1 Min Read
Ban online betting app Weaver weaves Ilakal saree to Modi 2

ಬಾಗಲಕೋಟೆ: ಇತ್ತೀಚಿನ ದಿನಗಳಲ್ಲಿ ಆನ್‌ಲೈನ್‌ ಬೆಟ್ಟಿಂಗ್ ಆ್ಯಪ್‌ಗಳ (Online Betting Apps) ಹಾವಳಿ ಹೆಚ್ಚಾಗಿದೆ. ಬಹುತೇಕ ಯುವಕರು ಮತ್ತು ಮಧ್ಯಮ ವರ್ಗದ ಜನರು ಈ ಬೆಟ್ಟಿಂಗ್ ಆ್ಯಪ್ ಮಾರುಹೋಗಿ, ದುಡ್ಡು ಕಳಿದುಕೊಂಡು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಇದೆಲ್ಲವನ್ನ ಅರಿತ ಬಾಗಲಕೋಟೆಯ (Bagalkot) ಇಳಕಲ್ ನಗರದ ನಿವಾಸಿ ನೇಕಾರ ಮೇಘರಾಜ್ ಗುದ್ದಟ್ಟಿ ಆನ್‌ಲೈನ್ ಆ್ಯಪ್‌ಗಳನ್ನು ನಿಷೇಧಿಸಿ ಎಂದು ವಿಭಿನ್ನ ಅಭಿಯಾನ ಹಮ್ಮಿಕೊಂಡಿದ್ದಾರೆ.

ನಾಡಿನ ಹೆಮ್ಮೆಯ ಜಗತ್ಪ್ರಸಿದ್ಧ ಇಳಕಲ್ ಸೀರೆಯ (Ilkal Saree) ಸೆರಗಿನಲ್ಲಿ, ರಮ್ಮಿ ಮತ್ತು ಡ್ರೀಮ್ ಇಲೆವೆನ್ ಆಪ್‌ಗಳನ್ನು ಬ್ಯಾನ್‌ ಇನ್ ಇಂಡಿಯಾ ಪಿಎಂ ಮೋದಿ (PM Narendra Modi) ಎಂದು ಭಾರತದ ಲಾಂಛನದ ಚಿತ್ರ ಸಹಿತ ನೈಗೇ ಮಾಡಿ ಆನ್‌ಲೈನ್ ಆ್ಯಪ್ ಬ್ಯಾನ್ ಮಾಡಿ ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಮಹಾ ಕುಂಭಮೇಳ ಅಂತ್ಯಕ್ಕೆ 4 ದಿನ ಬಾಕಿ – ಮಹಾಶಿವರಾತ್ರಿ ಹಿನ್ನೆಲೆ ಪುಣ್ಯಸ್ನಾನಕ್ಕೆ ಆಗಮಿಸುತ್ತಿರುವ ಭಕ್ತಕೋಟಿ

Ban online betting app Weaver weaves Ilakal saree to Modi 1

ಮಧ್ಯಮ ವರ್ಗದ ಜನರ ಹಿತದೃಷ್ಟಿ ಹಾಗೂ ಆಪ್‌ ಹುಚ್ಚಿಗೆ ಬಿದ್ದು ಹಾಳಾಗುತ್ತಿರುವ ಯುವಕರ ತಾಯಂದಿರ ಪರವಾಗಿ ಈ ಸೀರೆಯನ್ನು ನೇಯ್ಗೆ ಮಾಡಿದ್ದೇನೆ. ಈ ಸೀರೆಯನ್ನು ಪ್ರಧಾನಿ‌ ಮೋದಿಯವರ ಕಾರ್ಯಾಲಯಕ್ಕೆ ಕಳುಹಿಸುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಬಾಡಿಗೆ, ಲೀಸ್‌ ಪಡೆಯುವ ಮುನ್ನ ಎಚ್ಚರವಾಗಿರಿ – 50ಕ್ಕೂ ಹೆಚ್ಚು ಮಂದಿಗೆ ಕೋಟ್ಯಂತರ ರೂ. ವಂಚನೆ

ಈ ಹಿಂದೆ ಮೇಘರಾಜ್, ಇಳಕಲ್ ಸೀರೆಯಲ್ಲಿ ಆಯೋಧ್ಯೆಯ ಶ್ರೀರಾಮ ಮಂದಿರ, ಸೂರ್ಯಯಾನ-3 ಯಶಸ್ವಿಯಾದಾಗ ವಿಜ್ಞಾನಿಗಳಿಗೆ ಶುಭಾಶಯ ತಿಳಿಸಿದ್ದರು. ಪುನೀತ್ ರಾಜಕುಮಾರ್‌ ಅವರ ಕೊನೆಯ ಚಿತ್ರ ಜೇಮ್ಸ್ ಶತದಿನ ಆಚರಿಸಲಿ ಎಂದು ಸೀರೆಯಲ್ಲಿ ನೇಯ್ದು ಶುಭಹಾರೈಸಿದ್ದರು.

 

Share This Article