– ಸರ್ವಿಸ್ ರಸ್ತೆ ಬಳಕೆಗೆ ಅವಕಾಶ
ರಾಮನಗರ: ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ (Bengaluru-Mysuru Expressway) ಅಪಘಾತ ಪ್ರಕರಣ ಹೆಚ್ಚಳ ಹಿನ್ನೆಲೆ ಅಪಘಾತಗಳಿಗೆ ಕಡಿವಾಣ ಹಾಕಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ. ಆಗಸ್ಟ್ 1ರಿಂದ ಎಕ್ಸ್‌ಪ್ರೆಸ್ ವೇಯಲ್ಲಿ ದ್ವಿಚಕ್ರ, ತ್ರಿಚಕ್ರ ವಾಹನ ಸೇರಿ ಕೆಲ ವಾಹನಗಳಿಗೆ ನಿರ್ಬಂಧ ಹೇರಲಾಗಿದೆ. ಬೈಕ್, ಆಟೋ, ಟ್ರ್ಯಾಕ್ಟರ್‌ಗಳು ಮಂಗಳವಾರದಿಂದ ಸರ್ವಿಸ್ ರಸ್ತೆಯಲ್ಲೇ (Service Road) ಸಂಚಾರ ಮಾಡಬೇಕಾಗಿದೆ.
Advertisement
ಮೋಟಾರು ವಾಹನ ಕಾಯ್ದೆ 2002ರ ಅನ್ವಯ ಹೆದ್ದಾರಿ ಪ್ರಾಧಿಕಾರವು ಜುಲೈ 12ರಂದೇ ಈ ಕುರಿತು ಗೆಜೆಟ್ ಅಧಿಸೂಚನೆ ಹೊರಡಿಸಿದೆ. ಆಗಸ್ಟ್ 1ರಿಂದ ಎಕ್ಸ್‌ಪ್ರೆಸ್ ವೇಗೆ ಹೊಸ ನಿಯಮ ಅನ್ವಯವಾಗಲಿದೆ. ಮಂಗಳವಾರದಿಂದ ಬೈಕ್, ಆಟೋ, ಇ-ಕಾರ್ಟ್, ಮೋಟಾರ್ ರಹಿತ ವಾಹನಗಳು, ಟ್ರ್ಯಾಕ್ಟರ್‌ಗಳು, ಕೃಷಿ ಯಂತ್ರಗಳು, ಮಲ್ಟಿ ಆಕ್ಸೆಲ್ ಹೈಡ್ರಾಲಿಕ್ ವಾಹನಗಳು, ಕ್ವಾಡ್ರಿ ಸೈಕಲ್‌ಗಳು ಹೆದ್ದಾರಿಯಲ್ಲಿ ಸಂಚರಿಸುವಂತಿಲ್ಲ. ಬದಲಿಗೆ ಸರ್ವಿಸ್ ರಸ್ತೆಯಲ್ಲಿ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ. ನಿಯಮ ಉಲ್ಲಂಘಿಸಿ ಹೆದ್ದಾರಿ ಪ್ರವೇಶ ಮಾಡಿದರೆ ಪೊಲೀಸ್ ಇಲಾಖೆ ದುಬಾರಿ ದಂಡ (Penalty) ವಿಧಿಸುವ ಕುರಿತು ಪ್ರಕಟಣೆ ಹೊರಡಿಸಿದೆ. ಇದನ್ನೂ ಓದಿ: 2 ದಿನಗಳ ಕಾಲ ಸಾರ್ವಜನಿಕರಿಗೆ ಅರಮನೆ ಪ್ರವೇಶ ನಿರ್ಬಂಧ
Advertisement
Advertisement
ಇನ್ನೂ ಹೆದ್ದಾರಿ ಪ್ರಾಧಿಕಾರದ ನಡೆಗೆ ವಾಹನ ಸವಾರರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಸರ್ವಿಸ್ ರಸ್ತೆ ಸಮರ್ಪಕವಾಗಿ ನೀಡದೇ ದ್ವಿಚಕ್ರ ವಾಹನಕ್ಕೆ ನಿಷೇಧ ಮಾಡಿರುವುದು ಸರಿಯಲ್ಲ. ಹಲವು ಕಡೆಗಳಲ್ಲಿ ಸರ್ವಿಸ್ ರಸ್ತೆ ಕಾಮಗಾರಿ ಮುಗಿದಿಲ್ಲ. ಬೇಕಾದರೆ ಕಾರ್‌ನಂತೆ ಬೈಕ್‌ಗಳಿಗೂ ಟೋಲ್ ನಿಗದಿ ಮಾಡಿ. ಸ್ಪೀಡ್ ಲಿಮಿಟ್ ಹಾಗೂ ಟ್ರ‍್ಯಾಕ್ ಗುರುತು ಮಾಡಿ ಬೈಕ್ ಸಂಚರಿಸಲು ಅವಕಾಶ ನೀಡಿ ಎಂದು ಕೆಲವರು ಮನವಿ ಮಾಡಿದ್ದಾರೆ. ಮತ್ತೆ ಕೆಲವರು ಹೆದ್ದಾರಿ ಪ್ರಾಧಿಕಾರದ ನಿರ್ಧಾರವನ್ನು ಸ್ವಾಗತಿಸಿದ್ದು, ಅಪಘಾತ ತಡೆಯಲು ಬೈಕ್ ನಿಷೇಧ ಉತ್ತಮ ಕ್ರಮ ಎಂದಿದ್ದಾರೆ. ಇದನ್ನೂ ಓದಿ: ಮತ್ತೆ ಟೊಮೆಟೋ ದರ ಭಾರೀ ಏರಿಕೆ – ಗ್ರಾಹಕರು ಕಂಗಾಲು
Advertisement
ಒಟ್ಟಾರೆ ಆಗಸ್ಟ್ 1ರಿಂದ ದಶಪಥ ಹೆದ್ದಾರಿಗೆ ಹೊಸ ನಿಯಮ ಅನ್ವಯವಾಗಲಿದ್ದು ಬೈಕ್ ಹಾಗೂ ಆಟೋ ಸರ್ವಿಸ್ ರಸ್ತೆ ಬಳಸಬೇಕಿದೆ. ನಿಯಮ ಉಲ್ಲಂಘಿಸಿದರೆ ದುಬಾರಿ ದಂಡ ತೆರಬೇಕಾಗುತ್ತದೆ. ಇದನ್ನೂ ಓದಿ: ಮೂವರಿಂದ ಅಪ್ರಾಪ್ತೆಯ ಮೇಲೆ ನಿರಂತರ ಅತ್ಯಾಚಾರ – ಆರೋಪಿಗಳು ಅರೆಸ್ಟ್
Web Stories