ಮಲಯಾಳಂ ಸೂಪರ್ ಸ್ಟಾರ್ ದುಲ್ಕರ್ ಸಲ್ಮಾನ್ ಚಿತ್ರಕ್ಕೆ ನಿಷೇಧದ ಆತಂಕ ಎದುರಾಗಿದೆ. ಅವರ ಅತೀ ನಿರೀಕ್ಷಿತ ಸಿನಿಮಾ ‘ಸೆಲ್ಯೂಟ್’ ಇನ್ನಷ್ಟೇ ರಿಲೀಸ್ ಆಗಬೇಕಿದೆ. ಈ ಸಿನಿಮಾವನ್ನು ಥಿಯೇಟರ್ ಗೆ ತರದೇ, ನೇರವಾಗಿ ಓಟಿಟಿಯಲ್ಲಿ ಬಿಡುಗಡೆ ಮಾಡಿದರೆ, ಮುಂದಿನ ಅವರ ಎಲ್ಲಾ ಚಿತ್ರಗಳನ್ನು ಥಿಯೇಟರ್ ಬಾರದಂತೆ ನಿಷೇಧ ಹೇರುವುದಾಗಿ ಫಿಲ್ಮ್ ಎಕ್ಸಿಬಿಟರ್ಸ್ ಯುನೈಟೆಡ್ ಆರ್ಗನೈಸೇಶನ್ ಆಫ್ ಕೇರಳ ಹೇಳಿದೆ.
Advertisement
ಈ ಹಿಂದೆ ‘ಸೆಲ್ಯೂಟ್’ ಚಿತ್ರವನ್ನು ಚಿತ್ರಮಂದಿರಗಳಲ್ಲೇ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಒಪ್ಪಂದ ಮಾಡಿಕೊಂಡಿತ್ತು. ಆದರೆ, ಇದೀಗ ನೇರವಾಗಿಯೇ ಓಟಿಟಿಯಲ್ಲಿ ಬಿಡುಗಡೆ ಮಾಡುವುದಾಗಿ ಒಪ್ಪಂದದಿಂದ ಹಿಂದೆ ಸರಿದಿದೆ. ಹೀಗಾಗಿ ಕೇರಳ ಚಿತ್ರ ಪ್ರದರ್ಶಕರ ಒಕ್ಕೂಟ ಚಿತ್ರತಂಡದ ವಿರುದ್ಧ ಗರಂ ಆಗಿದೆ. ಇದನ್ನೂ ಓದಿ : ಕೋವಿಡ್ ನಂತರ ನಿದ್ರಾ ಸಮಸ್ಯೆಯಿಂದ ಬಳಲುತ್ತಿದ್ದಾರಂತೆ ಖ್ಯಾತ ನಟಿ ಶ್ರುತಿ ಹಾಸನ್
Advertisement
Advertisement
“ಸೆಲ್ಯೂಟ್ ಸಿನಿಮಾ ನಮ್ಮ ಜತೆಗಿನ ಒಪ್ಪಂದಂತೆಯೇ ಥಿಯೇಟರ್ ಗಳಲ್ಲಿ ಬಿಡುಗಡೆ ಮಾಡಬೇಕು. ದುಲ್ಕರ್ ಸಲ್ಮಾನ್ ಮತ್ತು ನಿರ್ಮಾಣ ಸಂಸ್ಥೆಯು ನಿಯಮ ಪಾಲಿಸದೇ ಇದ್ದರೆ, ದೊಡ್ಡ ಪರಿಣಾಮವನ್ನೇ ಎದುರಿಸಬೇಕಾಗುತ್ತದೆ” ಎಂದು ನೇರವಾಗಿಯೇ ನಿಷೇಧದ ಮಾತು ಹೇಳಿದೆ ಫಿಲ್ಮ್ ಎಕ್ಸಿಬಿಟರ್ಸ್ ಯುನೈಟೆಡ್ ಆರ್ಗನೈಸೇಶನ್ ಆಫ್ ಕೇರಳ. ಇದನ್ನೂ ಓದಿ : ಪುನೀತ್ ಅಭಿಮಾನಿಗಳಿಗೆ ಭಾರೀ ನಿರಾಸೆ : ಮೆರವಣಿಗೆ ಇಲ್ಲ, ಹೆಲಿಕಾಪ್ಟರ್ ಗೆ ಅನುಮತಿ ಕೊಟ್ಟಿಲ್ಲ
Advertisement
ಮಾಧ್ಯಮಗಳೊಂದಿಗೆ ಮಾತನಾಡಿರುವ ಒಕ್ಕೂಟದ ಪ್ರತಿನಿಧಿ ಕೆ.ವಿಜಯ ಕುಮಾರ್, “ಥಿಯೇಟರ್ ನಲ್ಲಿ ರಿಲೀಸ್ ಮಾಡುವುದಾಗಿ ಅವರೇ ಸಹಿ ಮಾಡಿಕೊಟ್ಟ ಒಪ್ಪಂದದ ಪತ್ರವಿದೆ. ಈಗ ಅದಕ್ಕೆ ಅವರು ಗೌರವ ಕೊಡುತ್ತಿಲ್ಲ. ಹೀಗಾಗಿ ನಾವು ಅನಿವಾರ್ಯವಾಗಿ ನಿಷೇಧದ ಮಾರ್ಗವನ್ನೇ ಹಿಡಿಯಬೇಕಾಗಿದೆ’ ಎಂದಿದ್ದಾರೆ. ಇದನ್ನೂ ಓದಿ : ಅಂದು ಸುದೀಪ್ ಪುಸ್ತಕ ಬಿಡುಗಡೆ ಮಾಡಿದ್ದ ಪುನೀತ್, ಇಂದು ಪುನೀತ್ ಪುಸ್ತಕ ಬಿಡುಗಡೆ ಮಾಡಿದ ಸುದೀಪ್
ಈ ಕುರಿತು ಚಿತ್ರತಂಡವು ಕೂಡ ಪ್ರತಿಕ್ರಿಯಿಸಿದ್ದು, ‘ಅದ್ಧೂರಿಯಾಗಿ ಮೂಡಿ ಬಂದಿರುವ ಭಾರೀ ಬಜೆಟ್ ಸಿನಿಮಾವಿದು. ಕೋವಿಡ್ ಕಾರಣದಿಂದಾಗಿ ಅಂದುಕೊಂಡ ದಿನಾಂಕಗಳಂದು ಬಿಡುಗಡೆ ಮಾಡಲಿಲ್ಲ. ಇಂದಿಗೂ ಪರಿಸ್ಥಿತಿ ಚೆನ್ನಾಗಿಲ್ಲ. ಓಟಿಟಿಯಲ್ಲಿ ಬಿಡುಗಡೆ ಮಾಡುವುದು ಅನಿವಾರ್ಯವಾಗಿದೆ” ಎಂದಿದೆ. ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಮಾದರಿಯ ಸಿನಿಮಾ ಇದಾಗಿದ್ದು, ರೋಶನ್ ಆಂಡ್ರ್ಯೂಸ್ ನಿರ್ದೇಶನದಲ್ಲಿ ಚಿತ್ರ ಮೂಡಿ ಬಂದಿದೆ. ಸಿನಿಮಾ ಎಲ್ಲಿ ಬಿಡುಗಡೆ ಆಗುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.