ಗುವಾಹಟಿ: ಖಾಜಿಗಳು ಅಥವಾ ಧರ್ಮಗುರುಗಳು ಮುಸ್ಲಿಮರ ವಿವಾಹಗಳನ್ನು ನೋಂದಾಯಿಸುವುದನ್ನು ತಡೆಯುವ ಹೊಸ ಮಸೂದೆಗೆ ಅಸ್ಸಾಂ ಕ್ಯಾಬಿನೆಟ್ ಅನುಮೋದನೆ ನೀಡಿದೆ. ಅಸ್ಸಾಂ (Assam) ವಿವಾಹ ಮತ್ತು ವಿಚ್ಛೇದನದ ಕಡ್ಡಾಯ ನೋಂದಣಿ ಮಸೂದೆಯು ಬಾಲ್ಯ ವಿವಾಹಗಳ ನೋಂದಣಿಯನ್ನು ಸಹ ನಿಷೇಧಿಸುತ್ತದೆ.
ಮುಸ್ಲಿಂ ವೈಯಕ್ತಿಕ ಕಾನೂನಿನ ಕೆಲವು ನಿಬಂಧನೆಗಳನ್ನು ರದ್ದುಗೊಳಿಸುವ ಮಸೂದೆಯನ್ನು ಅಸ್ಸಾಂ ವಿಧಾನಸಭೆಯ ಮಾನ್ಸೂನ್ ಅಧಿವೇಶನದಲ್ಲಿ ಮಂಡಿಸಲಾಗುವುದು. ಏಕರೂಪ ನಾಗರಿಕ ಸಂಹಿತೆಯನ್ನು ತರಲು ಇದು ಅಸ್ಸಾಂನ ಮೊದಲ ಹೆಜ್ಜೆ ಎಂದು ಪರಿಗಣಿಸಲಾಗಿದೆ. ಹೊಸ ಶಾಸನದ ಪ್ರಕಾರ, ಮುಸ್ಲಿಂ ವಿವಾಹಗಳ ನೋಂದಣಿಯನ್ನು ಸಬ್ ರಿಜಿಸ್ಟ್ರಾರ್ ಮೂಲಕ ಮಾಡಲಾಗುತ್ತದೆ. ಇದನ್ನೂ ಓದಿ: ಜಮ್ಮು ಕಾಶ್ಮೀರ ವಿಧಾನಸಭೆ ಚುನಾವಣೆ; ಎನ್‌ಸಿ – ಕಾಂಗ್ರೆಸ್ ಮೈತ್ರಿ ಬಹುತೇಕ ಖಚಿತ, ಮುಂದುವರಿದ ಸೀಟು ಹಂಚಿಕೆ ಮಾತುಕತೆ
- Advertisement -
18 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಗಳನ್ನು ಒಳಗೊಂಡ ಯಾವುದೇ ವಿವಾಹವನ್ನು ನೋಂದಾಯಿಸಬಾರದು ಎಂಬ ಷರತ್ತು ವಿಧಿಸುವ ಮಸೂದೆಯನ್ನು ನಾವು ಮಂಡಿಸಿದ್ದೇವೆ. ಇದಲ್ಲದೆ, ನೋಂದಣಿಯ ಅಧಿಕಾರವನ್ನು ಖಾಜಿಯಿಂದ ಸಬ್-ರಿಜಿಸ್ಟ್ರಾರ್‌ಗೆ ವರ್ಗಾಯಿಸಲಾಗುತ್ತದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Dr Himanta Biswa Sarma) ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಟ್ರೈನಿ ವೈದ್ಯೆ ಮೇಲೆ ನಡೆದಿರೋದು ಗ್ಯಾಂಗ್ ರೇಪ್ ಅಲ್ಲ – ಪ್ರಾಥಮಿಕ ತನಿಖೆ ಬಳಿಕ CBI ಮೂಲಗಳಿಂದ ಮಾಹಿತಿ
- Advertisement -
- Advertisement -
ವಿವಿಧ ಸಮುದಾಯಗಳು ವಿವಾಹ ವಿಧಿವಿಧಾನಗಳಿಗೆ ವೈವಿಧ್ಯಮಯ ಸಂಸ್ಕೃತಿಗಳನ್ನು ಹೊಂದಿವೆ. ನಮ್ಮ ಮಸೂದೆಯು ಅದರಲ್ಲಿ ಯಾವುದೇ ಪಾತ್ರವನ್ನು ಹೊಂದಿಲ್ಲ. ಹೊಸ ಕಾನೂನಿನಲ್ಲಿ ಸರ್ಕಾರಿ ಅಧಿಕಾರಿಯಿಂದ ವಿವಾಹ ನೋಂದಣಿಯನ್ನು ಒದಗಿಸಿದೆ. ಉಳಿದಂತೆ ಹಿಂದೂ ವಿವಾಹವಾಗಲಿ ಅಥವಾ ಮುಸ್ಲಿಂ ವಿವಾಹವಾಗಲಿ ಆಯಾ ಧಾರ್ಮಿಕ ನಿಯಮಗಳೇ ಪಾಲನೆಯಾಗಲಿದೆ ಎಂದು ಸಿಎಂ ವಿವರಿಸಿದರು. ಇದನ್ನೂ ಓದಿ: Valmiki Scam | ಜೈಲಿಗೆ ಹೋಗೋ ಭಯಕ್ಕೆ ಚಂದ್ರಶೇಖರ್ ಆತ್ಮಹತ್ಯ
- Advertisement -
ಈ ಹಿಂದೆ ಕ್ರಮವಾಗಿ 21 ಮತ್ತು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮುಸ್ಲಿಂ ಹುಡುಗರು ಮತ್ತು ಹುಡುಗಿಯರ ನಡುವಿನ ವಿವಾಹವನ್ನು ನೋಂದಾಯಿಸಬಹುದಿತ್ತು, ಹೊಸ ಕಾನೂನಿನ ಪ್ರಕಾರ, ಈ ಪದ್ಧತಿಯನ್ನು ನಿಷೇಧಿಸಲಾಗುವುದು ಇನ್ನು ಮುಂದೆ ಯಾವುದೇ ಮುಸ್ಲಿಂ ಅಪ್ರಾಪ್ತ ಬಾಲಕಿಯು ರಾಜ್ಯದಲ್ಲಿ ತಮ್ಮ ವಿವಾಹವನ್ನು ನೋಂದಾಯಿಸುವಂತಿಲ್ಲ. ಲವ್ ಜಿಹಾದ್ ಅನ್ನು ಅಪರಾಧವೆಂದು ಪರಿಗಣಿಸುವ ಮತ್ತು ತಪ್ಪಿತಸ್ಥರಿಗೆ ಜೀವಾವಧಿ ಶಿಕ್ಷೆ ವಿಧಿಸುವ ಹೊಸ ಕಾನೂನನ್ನು ಸರ್ಕಾರ ತರಲಿದೆ ಎಂದು ಶರ್ಮಾ ಹೇಳಿದರು. ಇದನ್ನೂ ಓದಿ: ಐವನ್ ಒಬ್ಬ ಮೆಂಟಲ್ ಗಿರಾಕಿ, ಅವನ ಹುಡುಗರೇ ಕಲ್ಲು ತೂರಿರಬಹುದು: ಭರತ್ ಶೆಟ್ಟಿ ಆಕ್ರೋಶ
ಈ ವರ್ಷದ ಆರಂಭದಲ್ಲಿ, ಸರ್ಕಾರವು 1935 ರ ಅಸ್ಸಾಂ ಮುಸ್ಲಿಂ ವಿವಾಹಗಳು ಮತ್ತು ವಿಚ್ಛೇದನ ನೋಂದಣಿ ಕಾಯ್ದೆಯನ್ನು ಸುಗ್ರೀವಾಜ್ಞೆಯ ಮೂಲಕ ರದ್ದುಗೊಳಿಸಿತು. ಅಸ್ಸಾಂನಾದ್ಯಂತ ಹಲವಾರು ಮುಸ್ಲಿಂ ಸಂಘಟನೆಗಳು ಖಾಜಿ ವ್ಯವಸ್ಥೆಯನ್ನು ಮರುಸ್ಥಾಪಿಸುವಂತೆ ಮುಖ್ಯಮಂತ್ರಿಗೆ ಮನವಿ ಮಾಡಿದ್ದವು. ಇದನ್ನೂ ಓದಿ: ಮುಡಾ ಕೇಸ್ ಚುರುಕು ಬೆನ್ನಲ್ಲೇ ಬಿಎಸ್‌ವೈ ಬಂಧನ ತೆರವಿಗೆ ಹೈಕೋರ್ಟ್‌ಗೆ ಸಿಐಡಿ ಅರ್ಜಿ