ಪ್ರಚೋದನಕಾರಿ ಪಾಠ ಮಾಡುವ ಮದರಸಾಗಳನ್ನು ಬಂದ್ ಮಾಡಿ: ರೇಣುಕಾಚಾರ್ಯ

Public TV
2 Min Read
RENUKACHARYA

ದಾವಣಗೆರೆ: ಹುಬ್ಬಳ್ಳಿ ದಾಳಿಗೆ ಪ್ರಚೋದನೆ ಮಾಡಿದ ಮೌಲ್ವಿಗಳನ್ನು ಬಂಧಿಸಿ ಗಲ್ಲಿಗೇರಿಸಬೇಕು. ಹುಬ್ಬಳ್ಳಿ ಸೇರಿದಂತೆ ಎಲ್ಲಾ ಕಡೆ ಮೌಲ್ವಿಗಳ ಶೋಧ ಮಾಡಬೇಕು. ಮದರಸಾಗಳಲ್ಲಿ ಪ್ರಚೋದನಕಾರಿ ಪಾಠ ಮಾಡ್ತಾರೆ, ಮದರಸಾಗಳನ್ನು ಬಂದ್ ಮಾಡಿ ಎಂದು ಶಾಸಕ ಎಂಪಿ ರೇಣುಕಾಚಾರ್ಯ ಮೌಲ್ವಿಗಳ ವಿರುದ್ಧ ಕಿಡಿಕಾರಿದ್ದಾರೆ.

HUBBALLI MOULVI 2
ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ದೇವಸ್ಥಾನದಲ್ಲಿ ತೀರ್ಥ ಪ್ರಸಾದ, ಆರತಿ ಬೆಳಗುತ್ತಾರೆ ಹಾಗೇ ಮಸೀದಿಗಳಲ್ಲಿ ಮದ್ದು ಗುಂಡುಗಳನ್ನು ಸಂಗ್ರಹಿಸಿಡುತ್ತಾರೆ ಎಂದು ಈ ಹಿಂದೆ ಹೇಳಿದ್ದೆ. ಆಗ ನನ್ನ ವಿರುದ್ಧ ಕಾಂಗ್ರೆಸ್ಸಿಗರು ಪ್ರತಿಭಟನೆ ಮಾಡಿದ್ರು, ಈಗ ಅದು ನಿಜವಾಗಿದೆ. ಮದರಸಾಗಳಲ್ಲಿ ಒಳ್ಳೆ ಶಿಕ್ಷಣ ಕೊಡುವುದಿಲ್ಲ. ಮಕ್ಕಳಿಗೆ ಅಲ್ಲಿ ದೇಶದ್ರೋಹದ ಪಾಠವನ್ನು ಹೇಳುತ್ತಾರೆ. ಈ ಮದರಸಾಗಳನ್ನು ಬ್ಯಾನ್ ಮಾಡಿದರೆ ಈ ರೀತಿ ಘಟನೆ ನಡೆಯುವುದಿಲ್ಲ. ನಮ್ಮ ಶಾಲೆಗಳಲ್ಲಿ ದೇಶ ಪ್ರೇಮ ಅಖಂಡತೆಯ ಬಗ್ಗೆ ಬೋಧನೆ ಮಾಡುತ್ತಾರೆ. ಮದರಸಾಗಳಲ್ಲಿ ಪ್ರಚೋದನೆ ಸಾರುವ ಕೆಲಸ ಮಾಡುತ್ತಿದ್ದಾರೆ. ಭಾರತ್ ಮಾತಾಕಿ ಜೈ ಎನ್ನುವವರನ್ನು ಬಿಟ್ಟು ಉಳಿದ ಎಲ್ಲರನ್ನು ಬಂಧಿಸಬೇಕೆಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ ಗಲಭೆಯಲ್ಲಿ ಕಾಣಿಸಿಕೊಂಡಿದ್ದ ಮೌಲ್ವಿಯ ಅಸಲಿ ರೂಪ ಬಯಲು

Congress

ಕಾಂಗ್ರೆಸ್ ಶಾಸಕನ ಮನೆ ಮೇಲೆ ಕೂಡ ಬೆಂಕಿ ಹಾಕಿದ್ರು ಆಗ ಅದೇ ಅಲ್ಪಸಂಖ್ಯಾತರ ಪರವಾಗಿ ಇದೇ ಕಾಂಗ್ರೆಸ್ ನಾಯಕರು ನಿಂತರು. ಟಿಪ್ಪು ಜಯಂತಿ ಮಾಡಿ ಈ ದೇಶದ ಕಾನೂನು ಸುವ್ಯವಸ್ಥೆ ಹಾಳು ಮಾಡಿದರು. ಕಾಂಗ್ರೆಸ್‍ನವರು ಭಾರತದ ಪರನೋ, ಅಲ್ಪಸಂಖ್ಯಾತರ ಪರನೋ ಎಂದು ಹೇಳಲಿ. ಎಲ್ಲಾ ಅಲ್ಪಸಂಖ್ಯಾತರು ಕೂಡ ಭಯೋತ್ಪಾದಕರು ಎಂದು ಹೇಳುತ್ತಿಲ್ಲ. ವೋಟ್‍ಗಾಗಿ ಅಲ್ಪಸಂಖ್ಯಾತರನ್ನು ಭಯೋತ್ಪಾದಕರನ್ನಾಗಿ ಮಾಡ್ತಾರೆ. ಸಿದ್ದರಾಮಯ್ಯ ಗಲಭೆ ಮಾಡಿದವರನ್ನು ಅಮಾಯಕರು ಎಂದು ಹೇಳ್ತಾರೆ, ನಿಮ್ಮ ಪ್ರಚೋಧನೆ ಹೇಳಿಕೆಗಳಿಂದ ನಿಮಗೆ ನಾಚಿಕೆ ಆಗೋದಿಲ್ವಾ. ಯಾರು ಈ ರೀತಿಯಾಗಿ ಮಾಡ್ತಾರೋ ಅಂತವರ ಮತದಾನದ ಹಕ್ಕು ಮೊಟಕುಗೊಳಿಸಬೇಕು. ಅಲ್ಲದೆ ಅವರಿಗೆ ಸರ್ಕಾರದಿಂದ ಬರುವ ಸೌಲಭ್ಯಗಳ ಜೊತೆ ಬಿಪಿಎಲ್ ಕಾರ್ಡ್ ಕೂಡ ಮೊಟಕುಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ನುಗ್ಗಿಕೇರಿ ಕಲ್ಲಂಗಡಿ ಗಲಾಟೆ ಪ್ರಕರಣಕ್ಕೆ ಟ್ವಿಸ್ಟ್

ಮಸೀದಿಗಳಲ್ಲಿ ಪ್ರಚೋಧನೆ ಮಾಡುತ್ತಾರೆ. ಹಿಂದೂ ಸ್ವಾಮೀಜಿಗಳು ಮಾನವೀಯ ಮೌಲ್ಯಗಳನ್ನು ಸಾರುತ್ತಾರೆ. ಕಳೆದ ನಾಲ್ಕು ದಿನಗಳ ಹಿಂದೆ ನಡೆದ ಹುಬ್ಬಳ್ಳಿ ಘಟನೆಗೆ ಕಾಂಗ್ರೆಸ್ ನೇರ ಹೊಣೆ. ಕಾಂಗ್ರೆಸ್ ಮುಖಂಡರು ಬೇಷರತ್ ಕ್ಷಮೆಯಾಚಿಸಬೇಕು. ಒಬ್ಬ ವಿದ್ಯಾರ್ಥಿ ಸ್ಟೇಟಸ್ ಹಾಕಿದ್ದನ್ನು ದೊಡ್ಡದು ಮಾಡಿ ಈ ಹಿಂಸಾಚಾರ ಮಾಡಿಸಿದ್ದಾರೆ. ಇದು ಪೂರ್ವ ನಿಯೋಜಿತ ಘಟನೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಇಲ್ಲಿ ಮಸೀದಿ, ಮಂದಿರಗಳೆಲ್ಲವೂ ನಮ್ಮ ದೇಹದಂತೆ ಒಟ್ಟಿಗೆ ಇರುತ್ತವೆ: ಮಮತಾ

Share This Article
Leave a Comment

Leave a Reply

Your email address will not be published. Required fields are marked *