ಬೆಂಗಳೂರು: ಹಲಾಲ್ ಆಯ್ತು (Halal), ಹಿಜಬ್ ಆಯ್ತು (Hijab), ಆಜಾನ್ ಆಯ್ತು ಈಗ ಮತ್ತೊಂದು ಧರ್ಮ ದಂಗಲ್ ಆರಂಭಗೊಂಡಿದೆ. ದೇಶದಲ್ಲಿ ಪಿಎಫ್‍ಐ (PFI) ಬ್ಯಾನ್ ಬಳಿಕ ಮದರಸಾ (Madrasa) ಬ್ಯಾನ್ ಅಭಿಯಾನ ಶುರುವಾಗಿದೆ. ಮದರಸಾ ಬ್ಯಾನ್‍ಗೆ ಹಿಂದೂ ಸಂಘಟನೆಗಳು ಒತ್ತಾಯಿಸುತ್ತಿವೆ.
Advertisement
ರಾಜ್ಯದಲ್ಲಿ ಕಳೆದ ಒಂದು ವರ್ಷದಿಂದ ಧರ್ಮ ದಂಗಲ್‍ನಾ ಕಾವು ಹೆಚ್ಚಾಗ್ತಾನೆ ಇದೆ. ಹಲಾಲ್ ಕಟ್‍ನಿಂದ ಶುರುವಾದ ಅಭಿಯಾನ ಆಜಾನ್‌ವರೆಗೂ ಬಂದಿದ್ದು, ಈಗ ಮತ್ತೊಂದು ಅಭಿಯಾನವನ್ನು ಹಿಂದೂ ಸಂಘಟನೆಗಳು ಕೈಗೊಂಡಿವೆ. ಉಗ್ರ ಸಂಘಟನೆಗಳ ಜೊತೆ ಸಂಪರ್ಕ ಹೊಂದಿದ್ದಾರೆ ಅಂತಾ ದೇಶಾದ್ಯಂತ ಪಿಎಫ್‍ಐ ಬ್ಯಾನ್ ಆಗಿದೆ. ಪಿಎಫ್‍ಐ ಬ್ಯಾನ್ ಆದ ಬೆನ್ನಲ್ಲೇ ಮದರಸಾವನ್ನು ಬ್ಯಾನ್ ಮಾಡಬೇಕು ಎಂದು ಹಿಂದೂ ಸಂಘಟನೆಗಳು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡುತ್ತಿದೆ. ಇದನ್ನೂ ಓದಿ: ಗಾಂಧಿ ಕೊಂದ ಗೋಡ್ಸೆ ಉತ್ಸವ ಮಾಡುವವರಿಂದ ಗಾಂಧೀಜಿ ಬಗ್ಗೆ ತಿಳಿದುಕೊಳ್ಳಬೇಕಾ – ಬೊಮ್ಮಾಯಿಗೆ ಸಿದ್ದು ತಿರುಗೇಟು
Advertisement
Advertisement
ಉಗ್ರರ ಲಿಸ್ಟ್‌ನಲ್ಲಿ ಇರುವಂತಹವರು ಮತ್ತು ಪಿಎಫ್‍ಐ ಸಂಘಟನೆಯಲ್ಲಿ ಇದ್ದಂತಹವರು ಎಲ್ಲರೂ ಮದರಸಾದಿಂದ ಹೋಗಿರುವಂತಹವರು. ಮದರಸಾಗಳಿಗೆ ಪಿಎಫ್‍ಐ ಸಂಪರ್ಕ ಇದೆ. ಟೆರರಿಸ್ಟ್ ಚುಟವಟಿಕೆಯಲ್ಲಿ ಇರುವವರು ಮದರಸಾದಿಂದ ಹೋದವರೇ. ಮದರಸಾಗಳನ್ನು ಬ್ಯಾನ್ ಮಾಡುವಂತಹ ತೀರ್ಮಾನವನ್ನು ಸರ್ಕಾರಗಳು ಕೂಡಲೇ ಕೈಗೊಳ್ಳಬೇಕು. ಇಸ್ಲಾಂ ರಾಷ್ಟ್ರ ಪಾಕಿಸ್ತಾನದಲ್ಲೇ ಮದರಸಾ ಬ್ಯಾನ್ ಮಾಡಿದ್ದಾರೆ. ಹೀಗಿರುವಾಗ ದೇಶದಲ್ಲಿ ಏಕೆ ಮದರಸಾ ಅಂತಾ ಶ್ರೀರಾಮಸೇನೆಯ ಪ್ರಮೋದ್ ಮುತಾಲಿಕ್ (Pramod Muthalik) ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಅಸ್ಸಾಂ ಮತ್ತು ಉತ್ತರ ಪ್ರದೇಶದಲ್ಲಿ ಮದರಸಾಗಳ ಮೇಲೆ ಹದ್ದಿನ ಕಣ್ಣು ಇಟ್ಟಿರೋದು ಮತ್ತು ಬುಲ್ಡೋಜರ್ ಪ್ರಯೋಗ ಯೋಗ್ಯವಾಗಿದೆ ಎಂದು ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿ ನಕಲಿ ಗಾಂಧಿ: ಬೊಮ್ಮಾಯಿ
Advertisement
ಉತ್ತರ ಪ್ರದೇಶ ಮಾದರಿಯಲ್ಲೇ ಮದರಸಾಗಳ ಮೇಲೆ ಸರ್ಕಾರ ನಿಗಾ ಇಡಲು ಮತ್ತು ಮದರಸಾಗಳ ಶಿಕ್ಷಣ ಹೇಗಿದೆ ಅಂತಾ ಪರಿಶೀಲನೆ ಮಾಡಿ ರಿಪೋರ್ಟ್ ಕೊಡಲು ಈ ಹಿಂದೆ ಶಿಕ್ಷಣ ಸಚಿವರು ಸೂಚಿಸಿದ್ದರು. ಈಗ ಬ್ಯಾನ್‍ಗೆ ಹಿಂದೂ ಸಂಘಟನೆಗಳು ಒತ್ತಾಯಿಸುತ್ತಿವೆ.