ಬೆಂಗಳೂರು: ಮಹದಾಯಿಗಾಗಿ ಕರ್ನಾಟಕ ಬಂದ್ ಕರೆ ನೀಡಿದ ವಾಟಾಳ್ ನಾಗರಾಜ್ ವಿರುದ್ಧ ಕ್ರಮಕೈಗೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಹೈಕೋರ್ಟ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ಸಲ್ಲಿಕೆಯಾಗಿದೆ.
ರಾಜಾಜಿನಗರ ಶ್ರದ್ಧಾ ಪೋಷಕರ ಸಂಘ ಪಿಐಎಲ್ ಸಲ್ಲಿಸಿದ್ದು, ಮಹದಾಯಿಗಾಗಿ 10 ದಿನಗಳ ಅಂತರದಲ್ಲಿ 2 ದಿನ ಬಂದ್ ಕರೆ ನೀಡಲಾಗಿದೆ ಇದರಿಂದ ಜನರ ಮೂಲಭೂತ ಹಕ್ಕಿಗೆ ದಕ್ಕೆ ಉಂಟಾಗಲಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
Advertisement
Advertisement
ಬಂದ್ ನಡೆಸುವುದು ಅಸಂವಿಧಾನಿಕ, ಕಾನೂನು ಬಾಹಿರ ಎಂದು ಘೋಷಿಸಬೇಕು. ಬಂದ್‍ನಿಂದ ಉಂಟಾಗಿರುವ ನಷ್ಟವನ್ನು ವಾಟಾಳ್ ನಾಗರಾಜ್ ಅವರು ಸರ್ಕಾರಕ್ಕೆ ಪಾವತಿಸುವಂತೆ ಆದೇಶಿಸಬೇಕು ಹಾಗೂ ಪದೇ ಪದೇ ಬಂದ್ ಕರೆ ನೀಡುತ್ತಿರುವ ವಾಟಾಳ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಸಂಘ ಅರ್ಜಿಯಲ್ಲಿ ಮನವಿ ಮಾಡಿಕೊಂಡಿದೆ.