ಬೆಂಗಳೂರು: ವಿಶ್ವ ಬಿದಿರು ದಿನಾಚರಣೆ ಹಿನ್ನೆಲೆಯಲ್ಲಿ ನಗರದ ಲಾಲ್‍ಬಾಗ್‍ನ ಬೊಟಾನಿಕಲ್ ಗಾರ್ಡನ್‍ನಲ್ಲಿ ಬಿದಿರು ಹಬ್ಬ ಆಯೋಜನೆ ಮಾಡಲಾಗಿದೆ.
ಈ ಉತ್ಸವವನ್ನು ಬ್ಯಾಂಬೂ ಸೊಸೈಟಿ ಆಫ್ ಇಂಡಿಯಾ ಆಯೋಜಿಸಿದ್ದು, ಬುಧವಾರ ಉದ್ಘಾಟನೆಯಾದ ಬಿದಿರು ಹಬ್ಬವು ಗುರುವಾರವೂ ನಡೆಯಲಿದೆ. ಉತ್ಸವಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
Advertisement
Advertisement
ಬಿದಿರು ಹಬ್ಬದಲ್ಲಿ ನಾನಾ ಜಾತಿಯ ಬಿದಿರು, ಬಿದಿರಿನಿಂದ ಮಾಡಿದ ವಿಶೇಷ ಹಾಗೂ ವಿಭಿನ್ನ ರೀತಿಯ ಪರಿಕರಗಳ ಪ್ರದರ್ಶನ ಹಾಗೂ ಮಾರಾಟ ನಡೆಯುತ್ತಿದೆ. ಜೊತೆಗೆ ಬಿದಿರಿನಿಂದ ತಯಾರಿಸಿದ ವಾದ್ಯಗಳಿಂದ ಸಂಗೀತ ಕಾರ್ಯಕ್ರಮ, ಬಿದಿರಿನಿಂದ ಮಾಡಿದ ಖಾದ್ಯ, ಬಿದಿರಿನ ಉಡುಪುಗಳ ಫ್ಯಾಷನ್ ಶೋ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ. ಅದರಲ್ಲೂ ಬಿದಿರಿನಿಂದ ತಯಾರಿಸಿದ ಉಡುಪು ಧರಿಸಿ, ಬೆಡಗಿಯರು ನಡೆಸಿಕೊಟ್ಟ ಬ್ಯಾಂಬೂ ಫ್ಯಾಷನ್ ಶೋ ಎಲ್ಲರ ಹುಬ್ಬೇರಿಸಿತು.
Advertisement
2009ರಲ್ಲಿ ವಿಶ್ವಸಂಸ್ಥೆಯ ಸೂಚನೆ ಮೇರೆಗೆ ಥೈಲ್ಯಾಂಡ್‍ನಲ್ಲಿ ಸೆಪ್ಟೆಂಬರ್ 18ರಂದು ವಿಶ್ವ ಬಿದಿರು ದಿನ ಆಚರಿಸಲಾಯಿತು. ಅಂದಿನಿಂದ ಇಲ್ಲಿಯವರೆಗೆ ಪ್ರತಿ ವರ್ಷವೂ ಭಾರತದಲ್ಲಿ ಬಿದಿರು ದಿನಾಚರಣೆ ಆಯೋಜಿಸುತ್ತಾ ಬರಲಾಗಿದೆ.