ಬೆಂಗಳೂರು: ಬಾಲು ನಾಗೇಂದ್ರ ನಾಯಕನಾಗಿ ನಟಿಸಿರೋ ‘ಕಪಟನಾಟಕ’ ಪಾತ್ರಧಾರಿ ಚಿತ್ರ ಒಂದರ ಹಿಂದೊಂದರಂತೆ ಬಿಡುಗಡೆಯಾಗಿದ್ದ ಹಾಡುಗಳೊಂದಿಗೆ ಪ್ರೇಕ್ಷಕರನ್ನು ತಲುಪಿಕೊಂಡಿತ್ತು. ಈ ಕಾರಣದಿಂದಲೇ ಈ ಸಿನಿಮಾ ಸುತ್ತ ಒಂದಷ್ಟು ಕೌತುಕಗಳಿಗೂ ಜೀವ ಬಂದಂತಾಗಿತ್ತು. ಇದೀಗ ಕ್ರಿಶ್ ನಿರ್ದೇಶನದ ‘ಕಪಟನಾಟಕ’ ಪಾತ್ರಧಾರಿಯ ಟ್ರೇಲರ್ ಬಿಡುಗಡೆಯಾಗಿದೆ. ಇದರಲ್ಲಿಯೇ ಪ್ರೇಕ್ಷಕರ ಎಣಿಕೆಯೂ ಮಿಗಿಲಾದ ಕಥೆಯ ಸುಳಿವುಗಳು ಅನಾವರಣಗೊಂಡಿದೆ. ಇದನ್ನೂ ಓದಿ: ಕಪಟನಾಟಕ ಪಾತ್ರಧಾರಿಯಾಗಿ ಹಾಡಾದ ಹುಲಿರಾಯ!
Advertisement
ಬಾಲು ನಾಗೇಂದ್ರ ‘ಹುಲಿರಾಯ’ ಚಿತ್ರದ ನಂತರದಲ್ಲಿ ತಮಗೊಪ್ಪುವ ಕಥೆಗಾಗಿ ತೀವ್ರ ಹುಡುಕಾಟ ನಡೆಸಿ, ಬಂದ ಹಲವಾರು ಅವಕಾಶಗಳಲ್ಲಿ ‘ಕಪಟನಾಟಕ’ ಪಾತ್ರಧಾರಿಯನ್ನು ಮಾತ್ರವೇ ಒಪ್ಪಿಕೊಂಡಿದ್ದಾರೆ. ಅಷ್ಟೆಲ್ಲ ಅಳೆದೂ ತೂಗಿ ಅವರು ಈ ಕಥೆಯನ್ನೇ ಏಕೆ ಒಪ್ಪಿಕೊಂಡಿದ್ದಾರೆಂಬುದಕ್ಕೆ ಈ ಟ್ರೇಲರ್‍ನಲ್ಲಿ ಸಾಕ್ಷಿಗಳು ಸಿಕ್ಕಿವೆ. ಸಿಕ್ಕ ಕೆಲಸಗಳನ್ನೆಲ್ಲ ಬಿಡುತ್ತಾ, ಆಟೋ ಡ್ರೈವರ್ ಆಗಿ ಸೇರಿಕೊಳ್ಳೋ ನಾಯಕನಿಗೆ ಹಬ್ಬಿಕೊಳ್ಳುವ ಪ್ರೀತಿ, ಆತನಿಗೆ ಸುತ್ತಿಕೊಳ್ಳುವ ಒಂದು ಭೀಕರ ಕ್ರೈಂ ಮತ್ತು ಅದರ ಸುತ್ತಾ ಹರಡಿಕೊಳ್ಳುವ ಹಾರರ್ ವೃತ್ತಾಂತದ ಸುತ್ತಾ ಮಜವಾದ ಕಥೆಯನ್ನು ಈ ಚಿತ್ರ ಒಳಗೊಂಡಿದೆ ಎಂಬುದು ಈ ಟ್ರೇಲರ್ ಮೂಲಕವೇ ಸಾಬೀತಾಗಿದೆ. ಇದನ್ನೂ ಓದಿ: ಕಪಟನಾಟಕ ಪಾತ್ರಧಾರಿಯ ವಿಶೇಷ ಲಿರಿಕಲ್ ವೀಡಿಯೋ!
Advertisement
Advertisement
ಈ ಚಿತ್ರದ ಶೀರ್ಷಿಕೆ, ಹಾಡುಗಳನ್ನು ಕೇಳಿದ ಪ್ರೇಕ್ಷಕರಿಗೆ ಇದರಲ್ಲೇನೋ ಇದೆ ಎಂಬಂಥಾ ಭರವಸೆ ಮೂಡಿಕೊಂಡಿತ್ತು. ಆದರೀಗ ಈ ಟ್ರೇಲರ್ ನೋಡಿದವರೆಲ್ಲ ತಾವು ಎಣಿಸಿದ್ದಕ್ಕಿಂತಲೂ ಮಜವಾದ ಕಥೆ ಈ ಸಿನಿಮಾದಲ್ಲಿರೋದು ಖಾತರಿಯಾಗಿದೆ. ಬಾಲು ನಾಗೇಂದ್ರ ಈ ಹಿಂದೆ ‘ಹುಲಿರಾಯ’ ಚಿತ್ರದಲ್ಲಿ ವಿಶಿಷ್ಟವಾದ ಪಾತ್ರದ ಮೂಲಕ ನಾಯಕನಾಗಿ ಮನಗೆದ್ದಿದ್ದವರು. ಅವರು ‘ಕಪಟನಾಟಕ’ ಪಾತ್ರಧಾರಿಯಾಗಿ ಅದಕ್ಕಿಂತಲೂ ಮಜವಾದ ಪಾತ್ರ ಮಾಡಿರೋದಕ್ಕೂ ಈ ಟ್ರೇಲರ್ ಸಾಕ್ಷಿಯಂತೆ ಮೂಡಿ ಬಂದಿದೆ. ಒಟ್ಟಾರೆಯಾಗಿ ಇತ್ತೀಚಿನ ದಿನಗಳಲ್ಲಿ ಬಂದಿರೋ ಭರವಸೆಯ ಟ್ರೇಲರುಗಳಲ್ಲಿ ‘ಕಪಟನಾಟಕ’ ಪಾತ್ರಧಾರಿಯ ಟ್ರೇಲರ್ ಕೂಡಾ ಒಂದೆಂದು ಪ್ರೇಕ್ಷಕರು ಪರಿಗಣಿಸಿದ್ದಾರೆ.