– ವಿಶ್ವಸಂಸ್ಥೆ ಮಾನ್ಯತೆ, ರಾಯಭಾರ ಕಚೇರಿಗೆ ಭಾರತಕ್ಕೆ ಮನವಿ
– ಪಾಕ್ ಸೈನ್ಯ ಬಲೂಚಿಸ್ತಾನ ತೊರೆಯಲಿ
ಇಸ್ಲಾಮಾಬಾದ್: ಪಾಕಿಸ್ತಾನದಿಂದ(Pakistan) ಬಲೂಚಿಸ್ತಾನ್ ಸ್ವತಂತ್ರವಾಗಿದೆ ಎಂದು ಬಲೂಚಿಸ್ತಾನದ(Balochistan) ಲೇಖಕ ಮಿರ್ ಯಾರ್ ಬಲೂಚ್(Mir Yar Baloch) ಸೇರಿ ಕೆಲ ನಾಯಕರು ಎಕ್ಸ್‌ನಲ್ಲಿ ಘೋಷಿಸಿದ್ದು, ಈ ವಿಚಾರವೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.
A possible announcement soon should be done as the collapse of the terrorist Pakistan is near.
We have claimed our independence and we request India to allow Balochistan’s official office, and embassy in Delhi.
We also ask the United Nations to recognise the independence of the…
— Mir Yar Baloch (@miryar_baloch) May 8, 2025
ಇತ್ತೀಚಿನ ಗಡಿಯಾಚೆಗಿನ ಮಿಲಿಟರಿ ಕಾರ್ಯಾಚರಣೆಗಳ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಹೆಚ್ಚಾದ ನಡುವೆ ಈ ಘೋಷಣೆ ಬಂದಿದೆ. ಬಲೂಚಿಸ್ತಾನದ ಪರ ಲೇಖಕ ಮತ್ತು ವಕೀಲ ಮಿರ್ ಯಾರ್ ಬಲೂಚ್, ಎಕ್ಸ್ ಖಾತೆಯಲ್ಲಿ `ರಿಪಬ್ಲಿಕ್ ಆಫ್ ಬಲೂಚಿಸ್ತಾನ’ ಪೋಸ್ಟ್‌ಗಳ ಮೂಲಕ ಘೋಷಣೆಯನ್ನು ಮಾಡಿದ್ದಾರೆ. ಇದನ್ನೂ ಓದಿ: ಸೋಫಿಯಾ ವಿರುದ್ಧ ಅವಹೇಳನಕಾರಿ ಹೇಳಿಕೆ – ಮಧ್ಯಪ್ರದೇಶದ ಮಂತ್ರಿ ವಿರುದ್ಧ ಎಫ್‌ಐಆರ್‌ಗೆ ಸೂಚನೆ
ಅಲ್ಲದೇ ನವದೆಹಲಿಯಲ್ಲಿ ಬಲೂಚಿಸ್ತಾನದ ರಾಯಭಾರ ಕಚೇರಿಗೆ ಅವಕಾಶ ನೀಡುವಂತೆ ಅವರು ಭಾರತ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಪಾಕಿಸ್ತಾನಿ ಸೈನ್ಯವನ್ನು ಬಲೂಚಿಸ್ತಾನದಿಂದ ಕಳುಹಿಸಿ, ಶಾಂತಿಪಾಲನಾ ಪಡೆಗಳನ್ನು ಕಳುಹಿಸುವಂತೆ ವಿಶ್ವಸಂಸ್ಥೆಯನ್ನು ಒತ್ತಾಯಿಸಿದ್ದಾರೆ. ಪಾಕ್ ಉಗ್ರರ ವಿರುದ್ಧದ ಆಪರೇಷನ್ ಸಿಂಧೂರ(Operation Sindoor) ಬಳಿಕ ಬಲೂಚಿಸ್ತಾನದವರು ಈ ಘೋಷಣೆಯನ್ನು ಮಾಡಿದ್ದಾರೆ. ಇದನ್ನೂ ಓದಿ: ರಾಯಚೂರಿನಲ್ಲಿ ವರುಣನ ಆರ್ಭಟ – ಲಕ್ಷಾಂತರ ರೂ.ಮೌಲ್ಯದ ಭತ್ತ ನಾಶ
ʻನಾವು ನಮ್ಮ ಸ್ವಾತಂತ್ರ‍್ಯವನ್ನು ಪಡೆದುಕೊಂಡಿದ್ದೇವೆʼ
ಭಯೋತ್ಪಾದಕ ಪಾಕಿಸ್ತಾನದ ಪತನ ಸಮೀಪಿಸುತ್ತಿದೆ. ನಾವು ನಮ್ಮ ಸ್ವಾತಂತ್ರ‍್ಯವನ್ನು ಪ್ರತಿಪಾದಿಸಿದ್ದೇವೆ. ಅಲ್ಲದೇ ದೆಹಲಿಯಲ್ಲಿ ಬಲೂಚಿಸ್ತಾನದ ಅಧಿಕೃತ ಕಚೇರಿ ಮತ್ತು ರಾಯಭಾರ ಕಚೇರಿಯನ್ನು ಅನುಮತಿಸುವಂತೆ ನಾವು ಭಾರತವನ್ನು ವಿನಂತಿಸುತ್ತೇವೆ. ಜಿನ್ಹಾ ಹೌಸ್ ಅನ್ನು ಬಲೂಚಿಸ್ತಾನ ಹೌಸ್ ಎಂದು ಮರುನಾಮಕರಣ ಮಾಡಬೇಕು ಎಂದು ಮಿರ್ ಯಾರ್ ಬಲೂಚ್ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ವಿಶ್ವಸಂಸ್ಥೆಯು ತಕ್ಷಣವೇ ಬಲೂಚಿಸ್ತಾನಕ್ಕೆ ಶಾಂತಿ ಪಡೆಗಳನ್ನು ಕಳುಹಿಸಬೇಕು. ಪಾಕ್ ಸೇನೆ, ಪೊಲೀಸ್ ಸಿಬ್ಬಂದಿ, ಮಿಲಿಟರಿ ಗುಪ್ತಚಾರ ಸೇರಿ ಶಸ್ತ್ರಾಸ್ತ್ರ ಸೇರಿ ಎಲ್ಲಾ ಯುದ್ಧ ಸಾಮಾಗ್ರಿಗಳನ್ನು ಬಿಟ್ಟು ತಕ್ಷಣವೇ ಬಲೂಚಿಸ್ತಾನವನ್ನು ತೊರೆಯವಂತೆ ಆಗ್ರಹಿಸಬೇಕು ಎಂದಿದ್ದಾರೆ. ಇದನ್ನೂ ಓದಿ: Boycott Turkey – ಸೇಬು, ಚೆರ‍್ರಿ, ಮಾರ್ಬಲ್‌ಗಳ ಆಮದು ಬ್ಯಾನ್‌ಗೆ ನಿರ್ಧಾರ
ಬಲೂಚಿಸ್ತಾನ್‌ನ ಸ್ವಾತಂತ್ರ‍್ಯ ಸರ್ಕಾರದ ರಾಜ್ಯೋತ್ಸವ ಶೀಘ್ರದಲ್ಲೇ ನಡೆಯಲಿದೆ. ಬಲೂಚಿಸ್ತಾನದ ನಿಯಂತ್ರಣವನ್ನು ಹೊಸ ಸರ್ಕಾರಕ್ಕೆ ಹಸ್ತಾಂತರಿಸಲಾಗುವುದು. ಸಂಪುಟದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯತೆ ನೀಡಲಾಗಿವುದು. ನಮ್ಮ ಮಿತ್ರ ರಾಷ್ಟçಗಳನ್ನು ಬಲೂಚಿಸ್ತಾನದ ಸರ್ಕಾರ ರಚನೆಯಂದು ಆಹ್ವಾನಿಸಲಾಗುವುದು ಎಂದಿದ್ದಾರೆ. ಇದನ್ನೂ ಓದಿ: ನರೇಗಾ ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ಟಾಟಾ ಏಸ್ ಪಲ್ಟಿ – 31 ಜನರಿಗೆ ಗಾಯ
ಮತ್ತೊಂದು ಪೋಸ್ಟ್‌ನಲ್ಲಿ, ಅವರು ಹೇ ನಾ-ಪಾಕಿಸ್ತಾನ್. ನಿಮ್ಮ ಬಳಿ ಸೈನ್ಯವಿದ್ದರೆ, ನಾವು ಬಲೂಚ್‌ನ ಸ್ವತಂತ್ರ ಯೋಧರಿದ್ದಾರೆ. ಈ ಯೋಧರು ನಿಮ್ಮ ವಿರುದ್ಧ ಹೋರಾಟ ಮಾಡುತ್ತಾರೆ ಎಂದು ಎಚ್ಚರಿಕೆಯ ಬರಹ ಪೋಸ್ಟ್ ಮಾಡಿದ್ದಾರೆ.