ಹಾವೇರಿ: ನಟ ದರ್ಶನ್‌ಗೆ (Darshan) ಬಳ್ಳಾರಿ ಜೈಲು (Ballari Central Jail) ಸೇಫ್ ಅಲ್ಲಾ, ದರ್ಶನ್‌ರನ್ನು ತಿಹಾರ್ ಜೈಲಿಗೆ (Tihar Jail) ಶಿಫ್ಟ್ ಮಾಡಿದರೆ ಮನ ಪರಿವರ್ತನೆ ಆಗಲಿದೆ ಎಂದು ಮಾಜಿ ಕೈದಿ ಶಿಗ್ಲಿ ಬಸ್ಯಾ ಹೇಳಿದ್ದಾರೆ.
ಬಳ್ಳಾರಿ ಜೈಲಿಗೆ ದರ್ಶನ್ ಶಿಫ್ಟ್ ಕುರಿತು ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕು ಶಿಗ್ಲಿ ಗ್ರಾಮದಲ್ಲಿ ಮಾತನಾಡಿದ ಅವರು, 1989ರಿಂದ 2009ರವರೆಗೂ ನಾನು ಬಳ್ಳಾರಿ ಜೈಲಿನಲ್ಲಿದ್ದೆ. ಆಗಲೂ ಬಳ್ಳಾರಿ ಜೈಲಿನಲ್ಲಿ ಅಕ್ರಮ ನಡೆದಿದ್ದವು. ಜೈಲಲ್ಲಿ ದುಡ್ಡು ಕೊಟ್ಟರೆ ಏನು ಬೇಕಾದರೂ ಸಿಗುತ್ತದೆ. ದುಡ್ಡಿನ ಪ್ರಭಾವ ಇದ್ದರೆ ಏನು ಬೇಕಾದರೂ ಆಗುತ್ತದೆ ಎಂದರು. ಇದನ್ನೂ ಓದಿ: ಅವ್ನೇನ್ ದೊಡ್ಡ ರೋಲ್ ಮಾಡೆಲ್ಲಾ? – ದರ್ಶನ್ ಬಗ್ಗೆ ಕೇಳಿದ್ದಕ್ಕೆ ಕೆ.ಎನ್ ರಾಜಣ್ಣ ಗರಂ
Advertisement
Advertisement
Advertisement
ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಿದರೆ ಉಪಯೋಗ ಇಲ್ಲ. ಅವರ ಮನ ಪರಿವರ್ತನೆ ಆಗಬೇಕಾದರೆ ತಿಹಾರ್ ಜೈಲಿಗೆ ಶಿಫ್ಟ್ ಮಾಡಬೇಕು. ಗಡಿ ಭಾಗದ ಜೈಲಿನಲ್ಲಿ ಏನು ಬೇಕಾದರೂ ನಡೆಯುತ್ತದೆ. ಅಲ್ಲಿ ಕೈದಿಗಳ ಜೊತೆ ಸೇರಿದರೆ ದರ್ಶನ್ ಕೂಡ ಕೆಡುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: ರೈಲು ಹಳಿಗಳ ಮೇಲೆ ಮರದ ದಿಮ್ಮಿ – ರೈತ ಮುಖಂಡನ ಪುತ್ರ, ಸ್ನೇಹಿತ ಅರೆಸ್ಟ್
Advertisement
ಬಳ್ಳಾರಿ ಜೈಲಲ್ಲೂ ಗಾಂಜಾ, ಸಿಗರೇಟ್, ಮೊಬೈಲ್ ಎಲ್ಲಾ ಸಿಗುತ್ತದೆ. ಎಲ್ಲಾ ವ್ಯವಹಾರಗಳು ಅಲ್ಲಿ ನಡೆಯುತ್ತದೆ. ದರ್ಶನ್ ಅವರಿಗೆ ಅವಕಾಶ ಇದೆ. ಅಭಿಮಾನಿಗಳ ಪ್ರೀತಿಯಿದೆ. ಹೀಗೆ ಅವರ ಮೇಲೆ ಕೇಸ್ ಮೇಲೆ ಕೇಸ್ ಹಾಕಿದರೆ ಅವರ ಹೆಸರು ರೌಡಿಲಿಸ್ಟ್ ಸೇರುತ್ತದೆ. ಇದರಿಂದ ಸ್ಯಾಂಡಲ್‌ವುಡ್‌ಗೆ ಅವಮಾನ ಆಗುತ್ತದೆ. ಜನರ ಬಳಿ ನಾನು ಸತ್ಯ ಹೇಳಬಹುದು ಆದರೆ ಕಾನೂನಿನ ಬಳಿ ಸತ್ಯ ಹೇಳಲು ಆಗಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ರಾಜ ಎಲ್ಲಿದ್ದರೂ ರಾಜನೇ ಅಂತ ಘೋಷಣೆ- ದರ್ಶನ್ ನೋಡಲು ಮುಗಿಬಿದ್ದ ಫ್ಯಾನ್ಸ್