ಬಳ್ಳಾರಿ: ಬ್ಯಾನರ್ ಗಲಾಟೆ ನಡೆದು (Ballari Clash) ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಪ್ಪಳದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ (Janardhana Reddy) ವಿರುದ್ಧ 4 ಕೇಸ್ ದಾಖಲಾಗಿದೆ. ಬ್ರೂಸ್ ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ 4 ಪ್ರಕರಣದಲ್ಲೂ ಎ1 ಆರೋಪಿ ರೆಡ್ಡಿಯೇ ಆಗಿದ್ದಾರೆ.
ಶಾಸಕ ಭರತ್ ರೆಡ್ಡಿ ಅಪ್ತ ಚಾನಾಳ್ ಶೇಖರ್ ಕೊಲೆಯತ್ನ ದೂರು ನೀಡಿದ್ದು ಜನಾರ್ದನ ರೆಡ್ಡಿ, ಸೋಮಶೇಖರ್ ರೆಡ್ಡಿ ಹಾಗೂ ಶ್ರೀರಾಮುಲು ಸೇರಿ 11 ಜನರ ವಿರುದ್ದ ಎಫ್ ಐಆರ್ ದಾಖಲಾಗಿದೆ.
ಮೃತ ರಾಜಶೇಖರ್ ಸಹೋದರ ಈಶ್ವರ ರೆಡ್ಡಿ ಕೊಲೆ ಆರೋಪದ ಅಡಿ ದೂರು ನೀಡಿದ್ದು ಜನಾರ್ದನ ರೆಡ್ಡಿ, ಸೋಮಶೇಖರ್ ರೆಡ್ಡಿ ಇತರರ ಹೆಸರನ್ನು ಉಲ್ಲೇಖಿಸಲಾಗಿದೆ.
ವಾಲ್ಮೀಕಿ ಬ್ಯಾನರ್ ಹರಿದು ಅಪಮಾನ ಮಾಡಿದ ಆರೋಪದ ಅಡಿ ಲೊಕೇಶ್ ನೀಡಿದ ದೂರಿನ ಅಡಿ ಜನಾರ್ದನ ರೆಡ್ಡಿ, ಸೋಮಶೇಖರ್ ರೆಡ್ಡಿ ಇತರರ ಮೇಲೆ ಅಟ್ರಾಸಿಟಿ ಕೇಸ್ (Atrocity Case) ಹಾಕಲಾಗಿದೆ. ಇದನ್ನೂ ಓದಿ: ಜನಾರ್ದನ ರೆಡ್ಡಿ ನಿವಾಸದ ಕಡೆ ಗುಂಡಿನ ದಾಳಿ ನಡೆಸಿದ ಸತೀಶ್ ರೆಡ್ಡಿ ಗನ್ ಮ್ಯಾನ್ – ಕ್ಯಾಮೆರಾದಲ್ಲಿ ದೃಶ್ಯ ಸೆರೆ

