ಸಿಡ್ನಿ: ಕೇಪ್‍ಟೌನ್ ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಆಸೀಸ್ ನ ಮತ್ತೊಬ್ಬ ಆಟಗಾರ ಚೆಂಡು ವಿರೂಪಗೊಳಿಸಲು ಪ್ರಯತ್ನಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೇಪ್‍ಟೌನ್ ಟೆಸ್ಟ್ ಪಂದ್ಯದ ಮೊದಲ ದಿನದಾಟದ ವೇಳೆ ಆಸೀಸ್ ಬೌಲರ್ ಪ್ಯಾಟ್ ಕಮ್ಮಿನ್ಸ್ ತನ್ನತ್ತ ಬರುತ್ತಿದ್ದ ಚೆಂಡನ್ನು ತಡೆದು ಬಳಿಕ ಕಾಲಿನಿಂದ ತುಳಿಯುತ್ತಿರುವ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದೆ.
Advertisement
Advertisement
ವಿಡಿಯೋ ವೈರಲ್ ಆಗುತ್ತಿದಂತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಸಲು ಆಗ್ರಹ ವ್ಯಕ್ತವಾಗಿತ್ತು. ಆದರೆ ಆಫ್ರಿಕಾ ತಂಡದ ಮಾಜಿ ನಾಯಕ ಗ್ರೇಮ್ ಸ್ಮಿತ್ ಘಟನೆ ಉದ್ದೇಶ ಪೂರ್ವಕವಾಗಿ ನಡೆದಿಲ್ಲ. ಆಕಸ್ಮಿಕವಾಗಿ ನಡೆದಿದೆ ಎಂದು ವಿಕ್ಷಕ ವಿವರಣೆ ನೀಡಿದ ವೇಳೆ ತಿಳಿಸಿದ್ದರು.
Advertisement
ಘಟನೆ ವೇಳೆ ಆನ್ ಫೀಲ್ಡ್ ಅಂಪೈರ್ ಕೂಡ ಕಂಡು ಚೆಂಡನ್ನು ಪರಿಶೀಲಿಸಿದ್ದ ಬಳಿಕ ಆಟವನ್ನು ಮುಂದುವರೆಸಲು ಅನುಮತಿ ನೀಡಿದ್ದರು. ಈ ಘಟನೆ ಕುರಿತು ದಿನದಾಟದ ಬಳಿಕ ಮಾಧ್ಯಮಗಳು ಸಹ ಪ್ರಶ್ನಿಸಿದ್ದವು. ಈ ವೇಳೆ ಉತ್ತರಿಸಿದ ಕಮ್ಮಿನ್ಸ್ ನಾನು ಚೆಂಡನ್ನು ತಡೆದ ಬಳಿಕ ನೇರ ನಡೆದೆ. ಈ ವೇಳೆ ತಪ್ಪು ನಡೆದಿದೆ. ಕೂಡಲೇ ಅಂಪೈರ್ ಘಟನೆ ಬಗ್ಗೆ ತಿಳಿಸಿದರು ಎಂದು ಸ್ಪಷ್ಟನೆ ನೀಡಿದ್ದರು.
Advertisement
https://twitter.com/Golfhackno1/status/976807928840839168
ಈ ಘಟನೆ ನಡೆದ ಎರಡು ದಿನಗಳ ಬಳಿಕ ಆಸೀಸ್ ಆಟಗಾರ ಬ್ಯಾನ್ ಕ್ರಾಫ್ಟ್ ಚೆಂಡು ವಿರೂಪಗೊಳಿಸುವ ವೇಳೆ ಸಿಕ್ಕಿಬಿದ್ದಿದ್ದರು. ಘಟನೆ ಸಂಬಂಧ ಆಸೀಸ್ ಕ್ರಿಕೆಟ್ ಮಂಡಳಿ ನಾಯಕ ಸ್ಮಿತ್, ಉಪನಾಯಕ ವಾರ್ನರನ್ನು ಒಂದು ವರ್ಷ ನಿಷೇಧಗೊಳಿಸಿದ್ದು, ಆರಂಭಿಕ ಆಟಗಾರ ಬ್ಯಾನ್ ಕ್ರಾಫ್ಟ್ 9 ತಿಂಗಳ ನಿಷೇಧ ಎದುರಿಸುತ್ತಿದ್ದಾರೆ. ಇದನ್ನೂ ಓದಿ: ಆಸ್ಟ್ರೇಲಿಯಾ ಪರ ಮತ್ತೆ ಕ್ರಿಕೆಟ್ ಆಡಲ್ಲ: ಕ್ಷಮೆಯಾಚಿಸಿ ಕಣ್ಣೀರಿಟ್ಟ ವಾರ್ನರ್
ಬಿಸಿಸಿಐ ಕೂಡ ಕಳ್ಳಾಟದಲ್ಲಿ ಸಿಕ್ಕಿ ಬಿದ್ದ ಆಸೀಸ್ ಆಟಗಾರರ ಮೇಲೆ ಒಂದು ವರ್ಷ ನಿಷೇಧ ವಿಧಿಸಿದ್ದು ಏಪ್ರಿಲ್ 07 ರಿಂದ ಆರಂಭವಾಗುವ 11ನೇ ಆವೃತ್ತಿಯ ಐಪಿಎಲ್ ಪಂದ್ಯಗಳಿಂದ ಅವರನ್ನು ಹೊರಗಿಟ್ಟಿದೆ. ಇದನ್ನೂ ಓದಿ: 6 ಪದಗಳಿಂದಾಗಿ ಬಚಾವ್ ಆದ್ರು ಆಸೀಸ್ ಕೋಚ್ ಡ್ಯಾರೆನ್ ಲೆಹ್ಮನ್!
ಘಟನೆ ಕುರಿತು ತನಿಖೆ ಎದುರಿಸಿ ಸಿಡ್ನಿಗೆ ಮರಳಿದ ಆಸೀಸ್ ಆಟಗಾರರು ಪತ್ರಿಕಾಗೋಷ್ಠಿ ನಡೆಸಿ ತಮ್ಮ ಕೃತ್ಯದ ಬಗ್ಗೆ ಕ್ಷಮೆಯಾಚಿಸಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಆಸೀಸ್ ಕೋಚ್ ಡ್ಯಾರೆನ್ ಲೆಹ್ಮನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದನ್ನೂ ಓದಿ: ನಾಯಕತ್ವದ ವಿಫಲತೆಯನ್ನು ಒಪ್ಪಿ, ಕ್ಷಮೆ ಕೇಳಿ ಕಣ್ಣೀರಿಟ್ಟ ಸ್ವೀವ್ ಸ್ಮಿತ್