ಜೈಪುರ: ಐಪಿಎಲ್ 12ನೇ ಆವೃತ್ತಿಯ ಭಾಗವಾಗಿ ಭಾನುವಾರ ನಡೆದ ರಾಜಸ್ಥಾನ ರಾಯಲ್ಸ್ ಹಾಗೂ ಕೆಕೆಆರ್ ನಡುವಿನ ಪಂದ್ಯದಲ್ಲಿ ಕೋಲ್ಕತ್ತಾ ಗೆಲುವು ಪಡೆದಿದ್ದು ಎಲ್ಲರಿಗೂ ತಿಳಿದ ಸಂಗತಿ. ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಕೆಕೆಆರ್ ತಂಡದ ಕ್ರಿಸ್ ಲೀನ್ ಜೀವದಾನ ಪಡೆದಂತಹ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.
ನಡೆದಿದ್ದೇನು?
ರಾಜಸ್ಥಾನ ರಾಯಲ್ಸ್ ತಂಡದ ನೀಡಿದ ಗುರಿ ಬೆನ್ನತ್ತಿದ ಕೆಕೆಆರ್ ಪರ ಕ್ರಿಸ್ ಲೀನ್ ಆರಂಭಿಕರಾಗಿ ಕಣಕ್ಕೆ ಇಳಿದು ಭರ್ಜರಿ ಪ್ರದರ್ಶನ ತೋರಿದ್ದರು. ಆದರೆ ಇನ್ನಿಂಗ್ಸ್ ಆರಂಭದ 4ನೇ ಓವರಿನಲ್ಲಿ 13 ರನ್ ಗಳಿಸಿ ಆಡುತ್ತಿದ್ದ ಕ್ರಿಸ್ ಲೀನ್, ಧವಲ್ ಕುಲಕರ್ಣಿ ಬೌಲಿಂಗ್‍ನಲ್ಲಿ ಔಟಾಗುವ ಸಂದರ್ಭ ಎದುರಿಸಿದ್ದು ಧವಲ್ ಎಸೆತದ ಚೆಂಡು ಲೀನ್ ಬ್ಯಾಟಿಗೆ ತಾಗಿ ನೇರ ವಿಕೆಟ್‍ಗೆ ಅಪ್ಪಳಿಸಿತ್ತು. ಆದರೆ ಬಾಲ್ ತಾಗಿದ ವೇಗಕ್ಕೆ ಬೇಲ್ಸ್ ಸ್ವಲ್ಪ ಮೇಲಕ್ಕೆ ಹಾರಿ ಲೈಟ್ ಮಿನುಗಿದರು ಮತ್ತೆ ವಿಕೆಟ್ ನಡುವೆಯೇ ಬೇಲ್ಸ್ ಬಂದು ಕುಳಿತಿತ್ತು.
Chris Lynn Bowled? Well, not really!
????????https://t.co/ojTfTmDGsb #RRvRCB pic.twitter.com/ejwSUwxO0b
— IndianPremierLeague (@IPL) April 7, 2019
ಇತ್ತ ಬೌಲಿಂಗ್ ಮಾಡುತ್ತಿದ್ದ ಕುಲಕರ್ಣಿ ವಿಕೆಟ್ ಪಡೆದ ಸಂಭ್ರಮ ಕ್ಷಣ ಮಾತ್ರದಲ್ಲಿ ನಿರಾಸೆ ಅನುಭವಿಸುವಂತೆ ಮಾಡಿತು. ರಾಜಸ್ಥಾನ ತಂಡದ ನಾಯಕ ರಹಾನೆ ಕೂಡ ಅಚ್ಚರಿಗೊಂಡು ಕ್ಷಣಕಾಲ ನಿರಾಸೆ ಅನುಭವಿಸಿದರು. ಅದೃಷ್ಟದ ಜೀವದಾನ ಪಡೆದ ಲೀನ್ ಪಂದ್ಯದಲ್ಲಿ 32 ಎಸೆತಗಳಲ್ಲೇ ಅರ್ಧ ಶತಕ ಪೂರೈಸಿ ಮಿಂಚಿದರು.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ನೆಟ್ಟಿಗರು ಈ ಸಂದರ್ಭವನ್ನು ಫೆವಿಕಾಲ್ ಸಂಸ್ಥೆ ಜಾಹೀರಾತು ನೀಡಲು ಉತ್ತಮ ಸಂದರ್ಭ ಎಂದು ತಿಳಿಸಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಮತ್ತು ಕೆಲವರು ಕ್ರಿಕೆಟ್ ನಿಯಮಗಳ ಬದಲಾವಣೆಯ ಸಂದರ್ಭದ ಎದುರಾಗಿದೆ ಎಂದಿದ್ದಾರೆ. ಈ ಬಾರಿಯ ಟೂರ್ನಿಯಲ್ಲಿ ಇಂತಹದೇ ಘಟನೆಗಳು ಪುನರವರ್ತನೆ ಆಗಿದ್ದು, ಎಂಎಸ್ ಧೋನಿ ಹಾಗೂ ಕೆಎಲ್ ರಾಹುಲ್ ಕೂಡ ಇದೇ ರೀತಿ ಅದೃಷ್ಟದ ಜೀವದಾನ ಪಡೆದಿದ್ದರು.
@StuckByFevicol Hey!! These stumps & bails must be Fevicol mazboot jod????. pic.twitter.com/LysZQKLJFR
— Gnaneswar Reddy J (@gnaneswar_j) April 7, 2019
WATCH: Thala Dhoni effect? When even bails refused to fall
????????https://t.co/ccTyMBLToc #CSKvRR
— IndianPremierLeague (@IPL) March 31, 2019
WATCH: Déjà vu – Dhoni creates magic, but bails still don't fall
????????https://t.co/w0KupuOmZ4 #CSKvKXIP pic.twitter.com/RFii3hcxqS
— IndianPremierLeague (@IPL) April 6, 2019