ಚಿಕ್ಕಮಗಳೂರು: ಭದ್ರಾ ನದಿ (Bhadra River) ಅಬ್ಬರಕ್ಕೆ ಬಾಳೆಹೊನ್ನೂರು (Balehonnur) ಪಟ್ಟಣ ಜಲಾವೃತವಾಗಿದೆ. ಭಾಗಶಃ ಹಸಿರು, ಮಣ್ಣು ಮಿಶ್ರಿತದ ಮಳೆ ನೀರಿನಲ್ಲಿ ಬಾಳೆಹೊನ್ನೂರು ಮುಳುಗಿದೆ.
ಸಮೃದ್ಧ ಮಳೆಯಿಂದ ಪರಿಸರ ಹಚ್ಚಹಸಿರಾಗಿತ್ತು. ಆದರೆ ಕಳೆದ ಎರಡು ದಿನಗಳಿಂದ ಸುರಿದ ಭಾರೀ ಮಳೆಗೆ ಭದ್ರಾ ನದಿ (Bhadra river) ಉಕ್ಕಿ ಹರಿದಿದ್ದು ಪಟ್ಟಣದ ತಗ್ಗು ಪ್ರದೇಶಗಳು ಭದ್ರಾ ನದಿ ದಂಡೆಯಲ್ಲಿರುವ ತೋಟಗಳು ಸಂಪೂರ್ಣ ಮುಳುಗಿದೆ. ಇದನ್ನೂ ಓದಿ: ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹತ್ಯೆ – ಪ್ರತೀಕಾರ ತೀರಿಸಿಕೊಂಡ ಇಸ್ರೇಲ್
ಚಿಕ್ಕಮಗಳೂರು ಜಿಲ್ಲೆಗೆ ಇಂದು ಸಹ ರೆಡ್ ಅಲರ್ಟ್ ಜಾರಿಯಾಗಿದೆ. ರಾಜ್ಯದ ನಾಲ್ಕು ಜಿಲ್ಲೆಗೆ ರೆಡ್ ಅಲರ್ಟ್ (Red Alert) ಜಾರಿಯಾಗಿದ್ದರೆ ಮೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ (Orange Alert) ಜಾರಿಯಾಗಿದೆ. ಇದನ್ನೂ ಓದಿ: Wayanad Landslide : ಅರ್ಧ ಸೆಕೆಂಡ್‌ನಲ್ಲಿ ನೂರು ಜನ ಸಮಾಧಿ!
ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗೆ ರೆಡ್ ಅಲರ್ಟ್ ಜಾರಿಯಾಗಿದ್ದು, ಭಾರೀ ಮಳೆ (Heavy Rain) ಬೀಳಲಿದೆ. ಉತ್ತರ ಕನ್ನಡ,ಉಡುಪಿ, ಹಾಸನ ಜಿಲ್ಲೆಗಳಿಗೆ ಹವಾಮಾನ ಇಲಾಖೆ (IMD) ಆರೆಂಜ್ ಅಲರ್ಟ್ ಜಾರಿ ಮಾಡಿದೆ. ಬೆಳಗಾವಿ, ಮೈಸೂರಿಗೆ ಯೆಲ್ಲೋ ಅಲರ್ಟ್ ಜಾರಿಯಾಗಿದೆ.